Advertisement
ಪುದುಚೇರಿ ಒಂದು ಕೇಂದ್ರಾಡಳಿತ ಪ್ರದೇಶ. ಚುನಾಯಿತ ಮುಖ್ಯಮಂತ್ರಿ ಮತ್ತು ಜನಪ್ರತಿನಿಧಿಗಳ ವ್ಯವಸ್ಥೆ ಜಾರಿಯಲ್ಲಿದೆ. ಫ್ರೆಂಚ್ ವಸಾಹತು ಶೈಲಿಯ ಪ್ರಭಾವ ಇನ್ನೂ ಅಲ್ಲಿ ಸ್ವಲ್ಪ ಇದೆ. ಯೋಗಿ ಶ್ರೀ ಅರವಿಂದರು ನೆಲೆಗೊಂಡ ಸ್ಥಳ. ಕಡಲ ಕಿನಾರೆಗೆ ಅಂಟಿಕೊಂಡ ಈ ಪುಟ್ಟ ಪ್ರದೇಶದಲ್ಲಿ ಚುನಾವಣೆಯ ಕಾವು ಜೋರಾಗತೊಡಗಿದೆ.
Related Articles
Advertisement
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿಯಿತು. ಜತೆಗೆ ಮೈತ್ರಿ ಪಕ್ಷಗಳೂ ಇದ್ದವು. ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಕಳೆದುಕೊಳ್ಳುವ ದುಃಸ್ವಪ್ನ ಈಗಲೇ ಕಾಡತೊಡಗಿದೆ. ಒಂದು ತಿಂಗಳ ಹಿಂದೆ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರಕಾರ ಇಕ್ಕಟ್ಟಿಗೆ ಸಿಲುಕಿತು. ಆಡಳಿತ ಪಕ್ಷ ಕಾಂಗ್ರೆಸ್‌ನ ಹಲವಾರು ಶಾಸಕರು ರಾಜೀನಾಮೆ ಕೊಟ್ಟರು. ಇದರಿಂದ ಪಕ್ಷ ಸಂಖ್ಯಾ ಬಲಾಬಲ ಏರುಪೇರಾಯಿತು. ಕೊನೆಗೂ ಅಸಹಾಯಕರಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರು. ಕಾಂಗ್ರೆಸ್ ದೂರುವಂತೆ ಬಿಜೆಪಿ ಈ ಶಾಸಕರನ್ನೆಲ್ಲ ತನ್ನತ್ತ ಸೆಳೆದುಕೊಂಡಿದೆ.
ಕೇಂದ್ರದಿಂದ ಎಚ್ಚರಿಕೆಯ ನಡೆಕೇಂದ್ರ ಸರಕಾರವೂ ಕೊಂಚ ಎಚ್ಚ ರದ ನಡೆಯನ್ನು ಇಟ್ಟಿತು. ಸರಕಾರ ಉರುಳುವ ಮುನ್ನ (ರಾಜೀನಾಮೆ ನೀಡುವ) ಗವರ್ನರ್ ಕಿರಣ್ ಬೇಡಿ ಯವರನ್ನು ಸ್ಥಾನದಿಂದ ತೆಗೆಯಿತು. ಇದಕ್ಕೆ ಕಾರಣ, ಕಾಂಗ್ರೆಸ್ ನೇತೃತ್ವದ ಸರಕಾರಕ್ಕೂ ರಾಜ್ಯಪಾಲರಿಗೂ ಬಹಳ ದಿನಗಳಿಂದ ಸಂಬಂಧ ಹಳಸಿತ್ತು. ಚುನಾವಣೆ ಹತ್ತಿರ ಬಂದಾಗ ಇಂಥ ಗೊಂದಲಗಳು ಮುಂದುವರಿದರೆ ಕಷ್ಟ ಎಂದುಕೊಂಡು ಮೊದಲು ತೆಗೆ ದದ್ದು ರಾಜ್ಯಪಾಲರನ್ನು. ಯಾವುದೇ ಕಾರಣಕ್ಕೂ ತಮಗೆ ಅಭಿವೃದ್ಧಿ ಕಾರ್ಯ ನಡೆಸಲು ಗವರ್ನರ್ ಬಿಡಲಿಲ್ಲ ಎಂದು ಕಾಂಗ್ರೆಸ್ ಚುನಾವಣ ವೇದಿಕೆಗಳಲ್ಲಿ ಹೇಳಬಾರದು. ಆ ಮೂಲಕ ಅನುಕಂಪದ ಮತ ಅತ್ತ ತಿರುಗಬಾರದೆಂಬುದು ಬಿಜೆಪಿ ತಂತ್ರ. 2011ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ರಂಗಸ್ವಾಮಿ ಕಟ್ಟಿಕೊಂಡಿದ್ದು ಎಐಎನ್‌ಅರ್‌ಸಿ. ಆ ಚುನಾವಣೆಯಲ್ಲೇ 15 ಸ್ಥಾನಗಳನ್ನು ಗಳಿಸಿ ಅಧಿಕಾರ ಗಳಿಸಿತು. ಅವರು ಸೆಳೆದುಕೊಂಡಿದ್ದು ಕಾಂಗ್ರೆಸ್‌ನ ಮತಗಳನ್ನೇ. ಅದೇ ರಂಗಸ್ವಾಮಿ ಈಗ ಎನ್‌ಡಿಎ ನೇತೃತ್ವ ವಹಿಸಿದ್ದಾರೆ ಪುದುಚೇರಿಯಲ್ಲಿ. 16 ಸೀಟುಗಳಲ್ಲಿ ಎಐಎನ್‌ಆರ್‌ಸಿ ಸ್ಪರ್ಧಿಸಿದರೆ, 14 ಸ್ಥಾನಗಳಲ್ಲಿ ಬಿಜೆಪಿ, ಎಐಎಡಿಎಂಕೆ ಸ್ಫರ್ಧಿಸುತ್ತಿದೆ. ಈಗಿರುವ ರಣರಂಗದಲ್ಲಿ ಇತ್ತೀಚಿನ ಸಮೀಕ್ಷೆ ಪ್ರಕಾರ ಎನ್‌ಡಿಎ 23-27 ಸ್ಥಾನಗಳನ್ನು ಗೆಲ್ಲುವ ಲೆಕ್ಕ ಇದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟಕ್ಕೆ 3-7 ಸ್ಥಾನಗಳ ನಿರೀಕ್ಷೆಯಿದೆ. ಕಾದು ನೋಡಬೇಕು. – ಅಶ್ವಘೋಷ