ಮೈಸೂರು: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು ಎಂದು ಕೆಲವರು ಹೈ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಪಿಐಎಲ್ ವಜಾ ಗೊಂಡಿದ್ದು, ಜೂ.25ರಿಂದ ಹೊಸ ವಾತಾವರಣದಲ್ಲಿ ಪರೀಕ್ಷೆ ನಡೆಸಿ, ಜುಲೈ ಅಂತ್ಯದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು. ನಗರದಲ್ಲಿ ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲೆಯ ಡಿಡಿಪಿಐಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.18ಕ್ಕೆ ಪಿಯುಸಿ ಪರೀಕ್ಷೆ ನಡೆಯ ಲಿದೆ, ಜೂ.25ರಿಂದ ಜು.4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತದೆ.
ಜುಲೈ ಅಂತ್ಯ ದೊಳಗೆ ಫಲಿತಾಂಶ ಲಭ್ಯವಾಗಲಿದೆ. ಹೊಸ ವಾತಾವರಣದಲ್ಲಿ ಪರೀಕ್ಷೆ ನಡೆಸಲು ವಿಶೇಷ ಸಿದಟಛಿತೆ ನಡೆದಿದೆ. ರಾಜ್ಯ ದಲ್ಲಿ 8,48,500 ಮಂದಿ ಪರೀಕ್ಷೆ ಬರೆಯುವರು. ಎಲ್ಲಾ ವಿದ್ಯಾರ್ಥಿ ಗಳಿಗೂ ಎರಡು ಮಾಸ್ಕ್ ನೀಡಲಾಗು ತ್ತದೆ. ಇದರ ಹೊಣೆ ಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನವರು ವಹಿಸಿಕೊಂಡಿ ದ್ದಾರೆ. ಪರೀಕ್ಷಾ ಕೊಠಡಿ ಬಳಿ ಸ್ಯಾನಿಟೈಸರ್ ನೀಡಲಾಗುವುದು, ಮೈಸೂರು ಜಿಲ್ಲೆಗೆ ಈಗಾಗಲೇ 42 ಸಾವಿರ ಮಾಸ್ಕ್ ಹಸ್ತಾಂ ತರಿಸಲಾಗಿದೆ ಎಂದರು.
4 ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೇಂದ್ರ: ಬೆಂಗಳೂ ರಿನ ಶಿವ ನಳ್ಳಿ ರಾಮಕೃಷ್ಣಾಶ್ರಮದವರು 2 ಲಕ್ಷ ಮಾಸ್ಕ್ ನೀಡುತ್ತಿದ್ದಾರೆ. ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ವಿದ್ದು, ಎಲ್ಲಾ ಕೇಂದ್ರದಲ್ಲಿಯೂ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಆರೋಗ್ಯ ಇಲಾಖೆ ಯವರು ತಪಾಸಣೆ ನಡೆಸಿದರೆ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಸ್ವಯಂ ಸೇವಕರು ಮಾಸ್ಕ್ ಹಾಕಿರುವ ಕುರಿತು ಪರಿಶೀಲನೆ ಮಾಡುತ್ತಾರೆ. ಮೊದಲು 1 ಕೊಠಡಿಯಲ್ಲಿ 24 ಮಂದಿ ಇರುತ್ತಿದ್ದರು.
ಈಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿದ್ಯಾರ್ಥಿ ಗಳ ಸಂಖ್ಯೆಯನ್ನು 18ಕ್ಕೆ ಇಳಿಸಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿದಾಗ ಸೋಂಕು ಕಂಡುಬಂದರೆ, ಅದಕ್ಕಾಗಿ 2 ಕೊಠಡಿ ಮೀಸಲಿಡಲಾಗಿದೆ. ಪರೀಕ್ಷೆ ನಡೆಯುವಾಗ ಕೇಂದ್ರ ಕಂಟೈ ನ್ಮೆಂಟ್ ವ್ಯಾಪ್ತಿಗೆ ಬಂದರೆ, ಅದನ್ನು ಬದಲಾಯಿಸಲು ಅವಕಾಶವಿದೆ. ಪರೀಕ್ಷಾ ದಿನಕ್ಕೆ 3 ದಿನ ಮುಂಚೆ ಕೇಂದ್ರ ಕಂಟೈ ನ್ಮೆಂಟ್ ವ್ಯಾಪ್ತಿಗೆ ಬಂದರೆ ಆ ಕೇಂದ್ರದ ವಿದ್ಯಾರ್ಥಿಗಳನ್ನು ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.
ವಿದ್ಯಾರ್ಥಿಗಳು ಇದ್ದಲ್ಲಿ ಪರೀಕ್ಷೆ: ಲಾಕ್‌ಡೌನ್ ವೇಳೆ ವಿದ್ಯಾರ್ಥಿಗಳು ಊರಿಗೆ ಹೋಗಿದ್ದರೆ ಅವರಿರುವ ಊರಿನ ಕೇಂದ್ರದಲ್ಲಿಯೇ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಕ್ವಾರಂ ಟೈನ್ ಮಾಡಲು ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಇಲಾಖೆ ಶಾಲೆ, ಹಾಸ್ಟೆಲ್‌ಗಳನ್ನು ತೆಗೆದುಕೊಳ್ಳಲಾಗಿತ್ತು. ಅಲ್ಲಿ ಪರೀಕ್ಷೆಗೆ ಅವಕಾಶವಿಲ್ಲ. ವಿದ್ಯಾರ್ಥಿಗಳ ಸಮಸ್ಯೆ ನೀಗಿಸಲು ಡೀಸಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಿಡಿಪಿಐಗಳಾದ ಪಾಂಡುರಂಗ, ರಘುನಂದನ್ ಇದ್ದರು.
ಶೈಕ್ಷಣಿಕ ವರ್ಷಾರಂಭ ಮುಂದಿನ ವಾರ ತೀರ್ಮಾನ: ಶೈಕ್ಷಣಿಕ ವರ್ಷ ಆರಂಭಿಸುವ ಕುರಿತು ಮುಂದಿನ ವಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು. ನಗರದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಶೈಕ್ಷಣಿಕ ವರ್ಷದ ಕುರಿತು ಕೇಂದ್ರದಿಂದ ಮಾರ್ಗಸೂಚಿ ಬಂದಿಲ್ಲ. ಮುಂದಿನ ವಾರ ತೀರ್ಮಾನ ಮಾಡುತ್ತೇವೆ. ಎಷ್ಟನೇ ತರಗತಿಯಿಂದ ಶಾಲೆ ಆರಂಭಿಸಬೇಕು,
ಪಠ್ಯಕ್ರಮ ಕಡಿಮೆಗೊಳಿಸಬೇಕೆ, ಸಮಾಜ ವಿಜ್ಞಾನ ಹೊರೆಯಾಗುತ್ತಿದೆಯೇ ಎಂಬುದನ್ನು ಮಾರ್ಗಸೂಚಿ ಅನುಸಾರ ತೀರ್ಮಾನಿಸಲಾಗುವುದು. ಏಪ್ರಿಲ್‌ನಲ್ಲಿ ಕೆಲವು ಶಾಲೆಗಳು ಶಿಕ್ಷಕರಿಗೆ ವೇತನ ನೀಡಲು ಹಣವಿಲ್ಲ ಎಂದು ಹೇಳಿದ್ದರಿಂದ ಪೋಷಕರು ಸ್ವಯಂ ರಣೆಯಿಂದ ಶುಲ್ಕ ಪಾವತಿಸಿದರೆ ಶಿಕ್ಷಕರ ವೇತನಕ್ಕೆ ಬಳಸಿಕೊಳ್ಳಬಹುದು. ಕೊರೊನಾ ಪರಿಣಾಮ ಎಲ್ಲಾ ವರ್ಗಕ್ಕೂ ತೊಂದರೆಯಾಗಿದೆ. ಆದ್ದರಿಂದ ಯಾವುದೇ ಶಾಲೆ ಶುಲ್ಕ ಹೆಚ್ಚಳಗೊಳಿಸುವಂತಿಲ್ಲ ಎಂದರು.