Advertisement

ಪ್ಲಸ್‌ ಟು ಫಲಿತಾಂಶ: ಶೇ. 84.33 ತೇರ್ಗಡೆ

12:42 AM May 09, 2019 | sudhir |

ಕಾಸರಗೋಡು: ಮಾರ್ಚ್‌ ತಿಂಗಳಲ್ಲಿ ಪರೀಕ್ಷೆ ನಡೆದ ಕೇರಳ ರಾಜ್ಯ ಪ್ಲಸ್‌ ಟು ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ರಾಜ್ಯದಲ್ಲಿ ಶೇ.84.33 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಶೇ.79.12 ಫಲಿತಾಂಶ ಬಂದಿದೆ.

Advertisement

ರಾಜ್ಯದಲ್ಲಿ ಒಟ್ಟು 3,69,238 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3,11,375 ಮಂದಿ ತೇರ್ಗಡೆಯಾಗಿದ್ದಾರೆ.

ಕಳೆದ ವರ್ಷ ಶೇ.83.75 ಫಲಿತಾಂಶ ಬಂದಿತ್ತು. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಅಧಿಕವಾಗಿದೆ. ಕಲ್ಲಿಕೋಟೆ ಜಿಲ್ಲೆ ಅತ್ಯಂತ ಹೆಚ್ಚು ಫಲಿತಾಂಶ ಪಡೆದಿದೆ. ಈ ಜಿಲ್ಲೆಯಲ್ಲಿ ತೇರ್ಗಡೆಯಾದವರ ವಿದ್ಯಾರ್ಥಿಗಳು ಶೇ.87.44. ಪತ್ತನಂತಿಟ್ಟ ಜಿಲ್ಲೆ ಅತ್ಯಂತ ಕಡಿಮೆ ಫಲಿತಾಂಶ ಪಡೆದಿದೆ. ಈ ಜಿಲ್ಲೆಯಲ್ಲಿ ಕೇವಲ ಶೇ.78 ಮಂದಿ ತೇರ್ಗಡೆಯಾಗಿದ್ದಾರೆ. ರಾಜ್ಯದ 79 ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಶೇ. 83.36, ಅನುದಾನಿತ ಶಾಲೆಗಳಲ್ಲಿ ಶೇ. 86.36 ಮತ್ತು ಅನುದನ ರಹಿತ‌ ಶಾಲೆಯಲ್ಲಿ ಶೇ. 77.34 ಫಲಿತಾಂಶ ಬಂದಿದೆ. ರಾಜ್ಯದಲ್ಲಿ 14,244 ವಿದ್ಯಾರ್ಥಿಗಳು ಎಲ್ಲವಿಷಯಗಳಲ್ಲಿ ಎ ಪ್ಲಸ್‌ ಸಾಧನೆ ಮಾಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಎ ಪ್ಲಸ್‌ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ 1 795. 183 ವಿದ್ಯಾರ್ಥಿಗಳು 1 200 ರಲ್ಲಿ 1 200 ಅಂಕಗಳಿಸಿದ ಸಾಧನೆ ಮಾಡಿದ್ದಾರೆ. ಮಲಪ್ಪುರ ಜಿಲ್ಲೆ ಅತ್ಯಧಿಕ ಸಂಖ್ಯೆಯಲ್ಲಿ ಎ ಪ್ಲಸ್‌ ಪಡೆದ ಸಾಧನೆ ಮಾಡಿದೆ.

ವೊಕೇಶನಲ್ ಹೈಯರ್‌ ಸೆಕೆಂಡರಿ ಎಜುಕೇಶನ್‌ನಲ್ಲಿ ಶೇ.80.07, ಟಿಎಚ್ಎಸ್‌ಇಯಲ್ಲಿ ಶೇ.69.76 ಮತ್ತು ಎಎಚ್ಎಇಯಲ್ಲಿ ಶೇ.93.95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವೊಕೇಶನಲ್ ಹೈಯರ್‌ ಸೆಕೆಂಡರಿಯಲ್ಲಿ 23 ಶಾಲೆಗಳು ಶೇ. 100 ಸಾಧನೆ ಮಾಡಿವೆೆ. 63 ಮಂದಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್‌ ಪಡೆದಿದ್ದಾರೆ.

Advertisement

ಜೂ. 10-17 ಸೇ ಪರೀಕ್ಷೆ

ಸೇ ಪರೀಕ್ಷೆ ಬರೆಯುವವರು ಮೇ 15ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಜೂನ್‌ 10 ರಿಂದ 17ರ ವರೆಗೆ ಸೇ ಪರೀಕ್ಷೆ ನಡೆಯಲಿದೆ. ಪ್ರಾಕ್ಟಿಕಲ್ ಪರೀಕ್ಷೆ ಮೇ 30 ಮತ್ತು 31 ರಂದು ನಡೆಯುವುದು.

ಪುನರ್‌ ಮೌಲ್ಯ ನಿರ್ಣಯ, ಫೋಟೋಕಾಪಿ, ಸೂಕ್ಷ್ಮ ಪರಿಶೋಧನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 15. ಪ್ಲಸ್‌ ವನ್‌ ತರಗತಿಗಳು ಜೂನ್‌ 3 ರಂದು ಆರಂಭಗೊಳ್ಳಲಿವೆ.

ಕಾಸರಗೋಡು ಜಿಲ್ಲೆಯ ಲಿಟಿಲ್ ಪ್ಲವರ್‌ ಹೈಯರ್‌ ಸೆಕೆಂಡರಿ ಸ್ಕೂಲ್ ಕಾಂಞಂಗಾಡ್‌, ಮಾರ್ತೋಮಾ ಹೈಯರ್‌ ಸೆಕೆಂಡರಿ ಸ್ಕೂಲ್ ಫಾರ್‌ ಡೆಪ್‌ ಕಾಸರಗೋಡು ಮೊದಲಾದ ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆೆ.

Advertisement

Udayavani is now on Telegram. Click here to join our channel and stay updated with the latest news.

Next