ಕೊಟ್ಟೂರು: ದ್ವಿತೀಯ ಪಿಯು ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ವಿಜ ಯ ನ ಗ ರದ ಜಿಲ್ಲೆ ಕೊಟ್ಟೂ ರಿನ “ಇಂದು ಇನ್ನೋವೇಟಿವ್ ಪಿಯು ಕಾಲೇಜು ’ ಕಲಾ ವಿಭಾಗದ ವಿಶೇಷ ಚೇತನ ವಿದ್ಯಾರ್ಥಿ ಜಿ.ಎಲ್. ಕುಶು ನಾಯ್ಕ 594 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಮತ್ತು ಕೆ.ಕೃಷ್ಣ 593 ಅಂಕ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.
ಪ್ರತಿ ಬಾರಿ ಮೊದಲ ರ್‍ಯಾಂಕ್ ಪಡೆಯುತ್ತಿದ್ದ ಇಂದು ಕಾಲೇಜಿಗೆ, ಪಿಯು ಫಲಿತಾಂಶ ಪ್ರಕಟವಾದಾಗ ಮೊದಲ ಬಾರಿಗೆ ರ್‍ಯಾಂಕ್ ಕೈ ತಪ್ಪಿತ್ತು. ಆದರೆ ಮರು ಮೌಲ್ಯಮಾಪನದಲ್ಲಿ ಮೊದಲ ಮತ್ತು ಎರಡನೇ ರ್‍ಯಾಂಕ್‌ಗಳನ್ನು ಪಡೆದಿದೆ. ಸತತ 8ನೇ ವರ್ಷದಲ್ಲಿಯೂ ಈ ಕಾಲೇಜು ರಾಜ್ಯಕ್ಕೆ ನಂ. 1 ಸ್ಥಾನ ಉಳಿಸಿಕೊಂಡಂತಾಗಿದೆ.
ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಕಲಾ ವಿಭಾಗದಲ್ಲಿ ಬೆಂಗಳೂರಿನ ತಬಸುಮ್ ಶೇಖ್ 593 ಅಂಕ ಪಡೆದು ಮೊದಲ ರ್‍ಯಾಂಕ್ ಪಡೆದಿದ್ದರು. ಆದರೆ ಎರಡನೇ ರ್‍ಯಾಂಕ್ ಪಡೆದಿದ್ದ ಇಂದು ಕಾಲೇಜಿನ ಕುಶು ನಾಯ್ಕ ಮತ್ತು ಮೂರನೇ ರ್‍ಯಾಂಕ್ ಪಡೆದಿದ್ದ ಕೃಷ್ಣ ಅವರು ಮರು ಮೌಲ್ಯಮಾಪನದಲ್ಲಿ ತಲಾ ಎರಡು ಅಂಕ ಹೆಚ್ಚು ಬಂದಿದ್ದು, ಕ್ರಮವಾಗಿ ಮೊದಲ ಮತ್ತು ಎರಡನೇ ರ್‍ಯಾಂಕ್ ಗಳಿಸಿದ್ದಾರೆ.
592 ಅಂಕ ಗಳಿಸಿದ್ದ ವಿದ್ಯಾರ್ಥಿ ಜಿ.ಎಲ್. ಕುಶಲ್ ಐಚ್ಛಿಕ ಕನ್ನಡ ಮತ್ತು ಇತಿಹಾಸ ವಿಷಯಗಳ ಮರು ಮೌಲ್ಯಮಾಪನದ ಬಳಿ ಕ ಮೊದಲು 97 ಅಂಕ ನೀಡಲಾಗಿದ್ದ ಕನ್ನಡ ಐಚ್ಛಿಕ ವಿಷಯದಲ್ಲಿ 99 ಅಂಕ ಬಂದಿದ್ದು, ಒಟ್ಟು ಅಂಕಗಳು 594 ಆಗಿ ಬೆಂಗಳೂರಿನ ತಬಸುಮ್ ಶೇಖ್ ಅವರನ್ನು ಹಿಂದಿಕ್ಕಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
591 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದ ವಿದ್ಯಾರ್ಥಿ ಕೆ.ಕೃಷ್ಣ, ಮೊದಲು 94 ಅಂಕ ಪಡೆದಿದ್ದ ರಾಜಕೀಯ ಶಾಸ್ತ್ರ ವಿಷಯದ ಮರು ಮೌಲ್ಯಮಾಪನದಲ್ಲಿ 96 ಅಂಕ ಪಡೆದು ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದ್ದಾರೆ.