Advertisement

ಮತ್ತೆ ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆದ ಮಂಗಳಗೌರಿ ಕಾಲೇಜಿಗೆ ಪ್ರಥಮ

03:29 PM Sep 25, 2021 | Team Udayavani |

ಭಟ್ಕಳ: ಕೋವಿಡ್-19 ರಿಂದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಿ ಎಸ್.ಎಸ್.ಎಲ್.ಸಿ. ಮತ್ತು ಪ್ರಥಮ ಪಿ.ಯು.ಸಿಯ ಅಂಕಗಳ ಆಧಾರದ ಮೇಲೆ ನೀಡಿದ್ದ ದ್ವಿತೀಯ ಪಿ.ಯು. ಅಂಕಗಳನ್ನು ತಿರಸ್ಕರಿಸಿ ಪುನಃ ವಾರ್ಷಿಕ ಪರೀಕ್ಷೆ ಬರೆದ ಭಟ್ಕಳದ ದಿ. ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಮಂಗಳಗೌರಿ ಭಟ್ ‌42 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

Advertisement

ಇದನ್ನೂ ಓದಿ:ಕ್ಯಾಪಿಟಲ್ಸ್ ವರ್ಸಸ್ ರಾಯಲ್ಸ್: ಟಾಸ್ ಗೆದ್ದ ಸಂಜು, ರಾಜಸ್ಥಾನ ತಂಡದಲ್ಲಿ ಎರಡು ಬದಲಾವಣೆ

ಮಾರುಕೇರಿಯ ವಿಷ್ಣು ಭಟ್ ಮತ್ತು ಗೋಪಿಕಾ ಭಟ್ ದಂಪತಿಗಳ ಮಗಳಾದ ಮಂಗಳಗೌರಿ ಅಂಕಗಳನ್ನು ತಿರಸ್ಕರಿಸಿ ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿನಿಯಾಗಿದ್ದು,  539 ಅಂಕಗಳ ಬದಲಾಗಿ 581 ಅಂಕಗಳನ್ನು ಪಡೆದು ಒಟ್ಟಾರೆ 42 ಹೆಚ್ಚುವರಿ ಅಂಕಗಳೊಂದಿಗೆ ಮಹಾವಿದ್ಯಾಲಯಕ್ಕೆ ಮೊದಲ ಸ್ಥಾನಕ್ಕೆ ಬಡ್ತಿ ಪಡೆದು ಅತ್ಯುತ್ತಮ ಸಾಧನೆ ಮೆರೆದಿರುತ್ತಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next