ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ. 15ರಂದು ದ್ವಿತೀಯ ಪಿಯುಸಿ ಸಂಸ್ಕೃತ, ಫ್ರೆಂಚ್ ಮತ್ತು ಮಲಯಾಳ ಪರೀಕ್ಷೆಗಳು ನಡೆದವು.
ಸಂಸ್ಕೃತ ಭಾಷಾ ಪರೀಕ್ಷೆಗೆ 2438 ಮಂದಿ ಪ್ರಷರ್ ಪರೀಕ್ಷೆ ಬರೆದಿದ್ದು, 4 ಮಂದಿ ಗೈರಾಗಿದ್ದರು. ಫ್ರೆಂಚ್‌ಭಾಷೆಗೆ 170 ಮಂದಿ ಹೊಸಬರು ಪರೀಕ್ಷೆ ಬರೆದು ಒಬ್ಬರು ಗೈರಾಗಿದ್ದರು. 6 ಮಂದಿ ಪುನರಾವರ್ತಿತರು ಪರೀಕ್ಷೆ ಬರೆದು ಇಬ್ಬರು ಗೈರಾಗಿದ್ದರು. ಮಲಯಾಳ ಭಾಷೆಯ ಪರೀಕ್ಷೆಗೆ 5 ಮಂದಿ ಹಾಜರಾಗಿದ್ದರು.
ಉಡುಪಿ: ಶೇ. 100
ಉಡುಪಿ: ಜಿಲ್ಲೆಯಲ್ಲಿ ಬುಧವಾರ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಸಂಸ್ಕೃತ ಮತ್ತು ಫ್ರೆಂಚ್ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ ಎಲ್ಲ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಸಂಸ್ಕೃತ ಪರೀಕ್ಷೆಗೆ 1,380 ವಿದ್ಯಾರ್ಥಿಗಳು, ಫ್ರೆಂಚ್ ಪರೀಕ್ಷೆಗೆ 3 ವಿದ್ಯಾರ್ಥಿಗಳು ನೋಂದಾ ಯಿಸಿಕೊಂಡಿದ್ದರು.