Advertisement
ಅಂಧ ವಿದ್ಯಾರ್ಥಿನಿ ಯಾಗಿರುವ ಅಪೂರ್ವಾ ಇತರರಿಗೆ ಸ್ಫೂರ್ತಿಯಾಗುವಂತಹ ಸಾಧನೆ ಮಾಡಿದ್ದಾರೆ. ಅವರು ಈ ಬಾರಿಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 561 ಅಂಕ ಗಳಿಸಿದ್ದಾರೆ.
“ಉದಯವಾಣಿ’ಯೊಂದಿಗೆ ಮಾತನಾಡಿದ ಅಪೂರ್ವಾ, “ನನಗೆ ಕನಿಷ್ಠ 580 ಅಂಕಗಳ ನಿರೀಕ್ಷೆ ಇತ್ತು. ಆದ್ದರಿಂದ ಮರುಮೌಲ್ಯಮಾಪನಕ್ಕೆ ಹಾಕುತ್ತೇನೆ. ಐಎಎಸ್ ಅಧಿಕಾರಿಯಾಗುವ ಆಸೆ ಇದೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಬಿಎ ಮಾಡಲಿದ್ದೇನೆ’ ಎಂದು ಹೇಳಿದ್ದಾರೆ.
Related Articles
ನಾನು ಅಂಧಳಾಗಿದ್ದರೂ ಶಾಪ ಅಥವಾ ವರ ಎಂದು ಭಾವಿಸಿಲ್ಲ. ಧೈರ್ಯದಿಂದ ಮುನ್ನುಗ್ಗಿದರೆ ಯಾರು ಕೂಡ ಸಾಧನೆ ಮಾಡಬಹುದು. ಪಾಠವನ್ನು ಸರಿಯಾಗಿ ಓದುತ್ತಿದ್ದೆ. ಸಂದೇಹವಿದ್ದರೆ ಶಿಕ್ಷಕರಲ್ಲಿ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆ. ಪ್ರಶ್ನೆಪತ್ರಿಕೆಗಳನ್ನು ಅಭ್ಯಸಿಸುತ್ತಿದ್ದೆ. ತಂದೆ, ತಾಯಿ ತುಂಬಾ ಪ್ರೋತ್ಸಾಹ ಮಾಡುತ್ತಿ ದ್ದಾರೆ. ಏನಾದರೂ ಸ್ವಲ್ಪ ವಿಫಲವಾದರೂ ಹುರಿದುಂಬಿಸುತ್ತಿದ್ದಾರೆ ಎಂದು ಅಪೂರ್ವಾ ಹೇಳಿದ್ದಾರೆ.
Advertisement
ಮಗಳ ಸಾಧನೆಯಿಂದ ತುಂಬಾ ಖುಷಿಯಾಗಿದೆ. ಆಕೆಗೆ ಇನ್ನಷ್ಟು ಅಂಕದ ನಿರೀಕ್ಷೆ ಇತ್ತು. ಆಕೆ ವಿಶೇಷವಾಗಿ ಅಭ್ಯಾಸ ಮಾಡುತ್ತಿರಲಿಲ್ಲ. ಆದರೆ ಆಡಿಯೋ ಮೂಲಕ ಗಮನವಿಟ್ಟು ಅಧ್ಯಯನ ಮಾಡುತ್ತಿದ್ದಳು ಎಂದು ಅಪೂರ್ವಾಳ ತಾಯಿ ರೋಹಿಣಿ ಟೊಪಗಿ ಹೇಳಿದ್ದಾರೆ.