Advertisement

ಸಿಇಟಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ

11:14 PM May 31, 2019 | Lakshmi GovindaRaj |

ಬೆಂಗಳೂರು: ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಲಭ್ಯವಿರುವ ಡಿಪ್ಲೊಮಾ ಸೀಟುಗಳಿಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. 2019ನೇ ಸಾಲಿನ ಡಿಪ್ಲೊಮಾ ಸಿಇಟಿಯನ್ನು ಜು.7ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿಪಡಿಸಿತ್ತು.

Advertisement

ಅದೇ ದಿನ ಕೌನ್ಸಿಲ್‌ ಆಫ್ ಆರ್ಕಿಟೆಕ್ಚರ್‌ ನಡೆಸುವ ನಾಟಾ ಪರೀಕ್ಷೆ ಇರುವುದರಿಂದ ಡಿಪ್ಲೊಮಾ ಸಿಇಟಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಜುಲೈ 14ರಂದು ನಡೆಸಲು ನಿರ್ಧರಿಸಲಾಗಿದೆ.

14ರ ಬೆಳಗ್ಗೆ ವಿಷಯವಾರು ಪರೀಕ್ಷೆ ಹಾಗೂ ಮಧ್ಯಾಹ್ನ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. ಮಾಹಿತಿಗಾಗಿ ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.in ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next