Advertisement
ಇದುವೆರಗೂ, ಅಂತಿಮ ಥಿಸೀಸ್ ಸಲ್ಲಿಕೆಯ ಮೊದಲು ಎಂ.ಫಿಲ್ ವಿದ್ಯಾರ್ಥಿಗಳು ಕಾನ್ಫರೆನ್ಸ್ ಅಥವಾ ಸೆಮಿನಾರ್‌ನಲ್ಲಿ ಕನಿಷ್ಠ ಒಂದು ಸಂಶೋಧನಾ ಪ್ರಬಂಧವನ್ನು ಮಂಡಿಸಬೇಕಿತ್ತು. ಇದೇ ರೀತಿ ಪಿ.ಎಚ್‌ಡಿ ವಿದ್ಯಾರ್ಥಿಗಳು ಕಾನ್ಫರೆನ್ಸ್ ಅಥವಾ ಸೆಮಿನಾರ್‌ನಲ್ಲಿ ಕನಿಷ್ಠ ಎರಡು ಸಂಶೋಧನಾ ಪ್ರಬಂಧಗಳ ಮಂಡನೆ, ಒಂದು ಸಂಶೋಧನಾ ಪ್ರಬಂಧವನ್ನು ನಿಯತಕಾಲಿಕದಲ್ಲಿ ಪ್ರಕಟಿಸಬೇಕಿತ್ತು.
ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಕನಿಷ್ಠ ಸರಾಸರಿ ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್(ಸಿಜಿಪಿಎ) 7.5 ಹೊಂದಿರುವ ನಾಲ್ಕು ವರ್ಷದ ಪದವೀಧರರು ಕೂಡ ಪಿ.ಎಚ್‌ಡಿ ಪ್ರವೇಶಕ್ಕೆ ಅರ್ಹರು. ಜತೆಗೆ ವೃತ್ತಿಪರರು ಅರೆಕಾಲಿಕಾ ಸಂಶೋಧನಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಇನ್ನೊಂದೆಡೆ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‌ಇಟಿ)/ಜೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್‌ಎಫ್) ಹೊಂದಿರುವವರಿಗೆ ಶೇ.60ರಷ್ಟು ಸೀಟುಗಳನ್ನು ಕಾಯ್ದಿರಿಸುವ ಪ್ರಸ್ತಾವನೆಯನ್ನು ಯುಜಿಸಿ ಕೈಬಿಟ್ಟಿದೆ.