Advertisement
ಜಿಲ್ಲೆಯಲ್ಲಿ ಆದ್ಯತೆ ಮೇರೆಗೆ 22 ಕಡೆಗಳಲ್ಲಿ ಇಂತಹ ಕಾಲು ಸಂಕಗಳನ್ನು ನಿರ್ಮಿಸಲಾಗುವುದು. ಆಯಾ ಕ್ಷೇತ್ರವಾರು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗಳು, ಶಾಸಕರು, ಜನಪ್ರತಿನಿಧಿಗಳಿಂದ ಬಂದಿರುವ ಅಹವಾಲುಗಳ ಆಧಾರದಲ್ಲಿ ಈ ಪಟ್ಟಿ ಮಾಡಿಕೊಳ್ಳಲಾಗಿದೆ. ಇನ್ನೆರಡು ತಿಂಗಳಲ್ಲಿ ಟೆಂಡರ್ ಅಂತಿಮಗೊಳಿಸಿ ಮುಂದಿನ ಮಳೆಗಾಲದೊಳಗೆ ಜನರ ಉಪಯೋಗಕ್ಕೆ ಸಿಗುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ಮೇರೆಗೆ 22 ಕಾಲು ಸಂಕ ಮಂಜೂರಾಗಿದ್ದು, ಅವುಗಳಿಗೆ 404 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ತಾಲೂಕು ಕಿನ್ಯ ಬೆಳರಿಂಗೆ ಬಳಿ (8 ಲಕ್ಷರೂ), ಪಾವೂರು ಗ್ರಾಮ ಕಿಲ್ಲೂರು ಬೈದರ್‌ಲಚ್ಚಿಲ್(8 ಲಕ್ಷರೂ.), ಕೊಣಾಜೆ ಗ್ರಾಮದ ಅಡ್ಕೆರೆಪಡ್ಪು -ಮುಲರ ರಸ್ತೆ (22 ಲಕ್ಷ ರೂ.), ಬಂಟ್ವಾಳ ತಾಲೂಕು ಪಿಲಿಮೊಗರು ಗ್ರಾಮದ ಪೆಜಕಳದಲ್ಲಿ (10 ಲಕ್ಷ ರೂ.), ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಬೈಲತೋಟಕ್ಕೆ ಹೋಗಲು ಪರಂಬೋಕು ತೋಡಿಗೆ ಕಾಲುಸಂಕ (10 ಲಕ್ಷ ರೂ.), ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯ ನಿಸರ್ಗಧಾಮ ಸೀತಾ ಸೋಂಪ ಮನೆ ಹತ್ತಿರ(10 ಲಕ್ಷ ರೂ.), ಕಲ್ಲಮುಂಡ್ಕೂರು ದೈಲಬೆಟ್ಟು ದೇವಸ್ಥಾನ ಬಳಿ (14 ಲಕ್ಷ ರೂ.), ಮಂಗಳೂರು ಉತ್ತರ ವ್ಯಾಪ್ತಿಯ ಮಂಗಳೂರು ತಾಲೂಕು ಅಡ್ಯಾರ್ ಗ್ರಾ.ಪಂ. ಅರ್ಕುಳ ಸೀತಾರಾಮ ಅವರ ಮನೆ ಬಳಿ (15 ಲಕ್ಷ ರೂ), ಮುತ್ತೂರು ಗ್ರಾ.ಪಂ. ವ್ಯಾಪ್ತಿಯ ಕೊಳವೂರು ಪಂಜ ಸದಾಶಿವ ಶೆಟ್ಟಿ ಮನೆ ಬಳಿ (8 ಲಕ್ಷ ರೂ.), ಗಂಜಿಮಠ ಗ್ರಾ.ಪಂ. ಬಡಗುಳಿಪಾಡಿ ಗ್ರಾಮದ ಚಂದ್ರಾವತಿ ಮನೆ ಬಳಿ, ಕೆಳಗಿನಬೈಲು ಮಟ್ಟಿ ಯತೀಶ್ ಶೆಟ್ಟಿ ಮನೆ ಬಳಿ (15 ಲಕ್ಷ ರೂ.), ಅಡ್ಯಾರ್ ಗ್ರಾ.ಪಂ. ವ್ಯಾಪ್ತಿಯ ಅಡ್ಯಾರ್ ಆನಂದ ಬೆಳ್ಚಾಡರ ಮನೆ ಬಳಿ( 15 ಲಕ್ಷ ರೂ.), ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮನಪಾ ಮಣ್ಣಗುಡ್ಡ ವಾರ್ಡ್ ಬರ್ಕೆ ರಾಮಮೇಸ್ತ್ರಿ ಕಾಂಪೌಂಡ್ ರಾಜಕಾಲುವೆ ಬಳಿ ಕಾಲು ಸಂಕ (8 ಲಕ್ಷ ರೂ.),
Related Articles
Advertisement
ಅಪಾಯಕಾರಿ ಇರುವ ಕಡೆಕಾಲುಸಂಕಗಳು ಬಹುತೇಕ ಕಡೆ ತೋಡುಗಳಿಗೆ ರಚನೆಯಾಗಲಿವೆ. ಜನರು, ಮುಖ್ಯವಾಗಿ ವಿದ್ಯಾರ್ಥಿಗಳು ಓಡಾಡುವ ಕಡೆ ಇರುವ ಕಚ್ಚಾ ಕಾಲುಸಂಕಗಳು ಅಪಾಯಕಾರಿ ಇರುವ ಹಿನ್ನೆಲೆಯಲ್ಲಿ ಈ ಕಾಲು ಸಂಕ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. 301 ಕಡೆಗಳಲ್ಲಿ ಕಾಲು ಸಂಕಕ್ಕೆ ಪ್ರಸ್ತಾವ
ಜಿಲ್ಲೆಯಲ್ಲಿ 22 ಕಾಲುಸಂಕಕ್ಕೆ ಅನುಮೋದನೆ ಬಂದಿದ್ದರೆ, ಇನ್ನೂ 301 ಕಡೆಗಳಲ್ಲಿ ಕಾಲುಸಂಕಕ್ಕೆ ಪ್ರಸ್ತಾವನೆ ಮುಖ್ಯ ಎಂಜಿನಿಯರ್‌ಕಚೇರಿಗೆ ಸಲ್ಲಿಕೆಯಾಗಿದ್ದು, ಇನ್ನೂ ಅನುಮೋದನೆ ಸಿಕ್ಕಿಲ್ಲ. 64 ಕೋಟಿ ರೂ. ಮೊತ್ತದ ಈ ಯೋಜನೆಗೆ ಮುಂದೆ ಹಂತ ಹಂತವಾಗಿ ಅನುಮೋದನೆ ಸಿಗುವ ನಿರೀಕ್ಷೆ ಇದೆ.
-ಅಮರ್‌ನಾಥ್ ಜೈನ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಮಂಗಳೂರು ಉಡುಪಿಗೆ 3 ಕೋ.ರೂ
ಉಡುಪಿಯಲ್ಲಿ 30 ಕಾಲು ಸಂಕಗಳಿಗೆ 3 ಕೋಟಿ ರೂ. ಮಂಜೂರಾಗಿದೆ. ಉಡುಪಿ-2, ಕಾಪು-7, ಬ್ರಹ್ಮಾವರ-2, ಬೈಂದೂರು-4, ಕುಂದಾಪುರ-2, ಹೆಬ್ರಿ-2 ಹಾಗೂ ಕಾರ್ಕಳ ವ್ಯಾಪ್ತಿಯಲ್ಲಿ 11 ಕಾಲುಸಂಕಗಳನ್ನು ನಿರ್ಮಿಸಲಾಗುವುದು.
– ವೇಣುವಿನೋದ್ ಕೆ.ಎಸ್.