ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಯೋಜನೆಯಲ್ಲಿ ಒಳಪಡಲು ಅರ್ಜಿ ವಿತರಣೆ ಮಾಡುತ್ತಿದ್ದು ಪ್ರತಿದಿನ ಮುಂಜಾನೆಯಿಂದಲೇ ಅರ್ಜಿ ಪಡೆಯಲು ಸಾರ್ವಜನಿಕರು ಸರದಿಯಲ್ಲಿ ನಿಲ್ಲುತ್ತಿದ್ದಾರೆ.
ಗ್ರಾಮಾಂತರ ಪ್ರದೇಶಗಳಿಂದ ಬರುವ ಜನರು ಯೋಜನೆಯ ಅರ್ಜಿ ಪಡೆಯಲು ಹಾಗೂ ಸಲ್ಲಿಸಲು ಪ್ರತಿದಿನ ಮುಂಜಾನೆಯಿಂದಲೇ ಸರದಿ ನಿಲ್ಲುತ್ತಿದ್ದಾರೆ. ತಾಲೂಕಿನ ಎಲ್ಲಾ ಗ್ರಾಮ ಗಳಿಂದಲೂ ಸಾರ್ವಜನಿಕರು ಅರ್ಜಿ ಸಲ್ಲಿಸಲು ಆಸ್ಪತ್ರೆಗೆ ಆಗಮಿಸಬೇಕಾಗಿದೆ.
ಒಂದು ಅರ್ಜಿ ಸಲ್ಲಿಸಲು ಕುಟುಂಬದ ಎಲ್ಲಾ ಸದಸ್ಯರನ್ನೂ ನೋಂದಾಯಿ ಸಬೇಕು. ಇದಕ್ಕಾಗಿ ಹೆಬ್ಬೆಟ್ಟು ಗುರುತು (ಥಂಬ್) ಪಡೆಯಲು ಎಲ್ಲರೂ ಸರದಿಯಲ್ಲಿ ನಿಲ್ಲಬೇಕು. ಇಂಟರ್‌ನೆಟ್ ತೊಂದರೆಯಿಂದ ಎಲ್ಲರನ್ನೂ ನೋಂದಾ ಯಿಸಲು ವಿಳಂಬವಾಗುತ್ತಿದೆ. ಇದರಿಂ ದಾಗಿ ಗಂಟೆಗಟ್ಟಲೆ ಕಾಯುವ ಸಾರ್ವ ಜನಿಕರಿಗೆ ತುಂಬಾ ಕಿರಿಕಿರಿಯುಂ ಟಾಗುತ್ತಿದೆ. ಇದರ ಬದಲು ಆಯಾ ಗ್ರಾಪಂ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಫಲಾನುಭವಿಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ಉದಯವಾಣಿಯೊಂದಿಗೆ ಸಾರ್ವಜನಿಕ ಆಸ್ಪತ್ರೆ ಸೂಪರಿಂಟೆಂಡೆಂಟ್ ರವಿಕುಮಾರ್ ಮಾತನಾಡಿ, ಪ್ರತಿ ದಿನವೂ ಗರಿಷ್ಠ 100 ಅರ್ಜಿಯನ್ನು ಆನ್‌ಲೈನ್ ನಲ್ಲಿ ನೋಂದಾಯಿ ಸಬೇಕಾ ಗಿದ್ದರೂ ಮೂರು- ನಾಲ್ಕು ಕೌಂಟರ್ ತೆರೆದು 150 ರಿಂದ 175 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ನೋಂದಣಿ ಕಾರ್ಯ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.