Advertisement

ಶೌಚಾಲಯಕ್ಕೆ ದಿಕ್ಕುದೆಸೆ ಇಲ್ಲ

02:44 PM Apr 06, 2021 | Team Udayavani |

ಮುಳಬಾಗಿಲು: ಸರ್ಕಾರ ಜನ ಸಾಮಾನ್ಯರ ಅನುಕೂಲಕ್ಕಾಗಿ ಎಸ್‌ಎಫ್ಸಿ ಯೋಜನೆಯಡಿ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಶೌಚಾಲಯ ದಿಕ್ಕು ದೆಸೆ ಇಲ್ಲದಂತಾಗಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

Advertisement

ಮುಳಬಾಗಿಲು ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದ್ದರೂ, ಧಾರ್ಮಿಕವಾಗಿ ಮಾತ್ರ ವಿಜಯನಗರ ಅರಸರ ದಕ್ಷಿಣ ರಾಜಧಾನಿಯಾಗಿದ್ದ ಕಾಲದಿಂದಲೂ ಹೆಸರುವಾಸಿಯಾಗಿದೆ. ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ, ಶ್ರೀಸೋಮೇಶ್ವರ ಸ್ವಾಮಿದೇವಾಲಯ, ನರಸಿಂಹತೀರ್ಥದ ಶ್ರೀಪಾದರಾಜ ಮಠ, ವಿರೂಪಾಕ್ಷಿ ದೇವಾಲಯ, ಕುರುಡುಮಲೆ ವಿನಾಯಕ ದೇವಾಲಯ,ಆವಣಿ ಶ್ರೀರಾಮಲಿಂಗೇಶ್ವರ ದೇವಾಲಯಗಳುನಿರ್ಮಾಣಗೂಂಡಿದ್ದರೊಂದಿಗೆ ನೂರಾರು ದೇವಾಲಯಗಳ ನಾಡಾಗಿದೆ.

20 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ: ನಗರಸಭೆ ವ್ಯಾಪ್ತಿಗೆ ಸೇರಿದ ಸುಮಾರು 3 ಕಿ.ಮೀ. ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಸುಮಾರು 70 ಸಾವಿರ ಜನರು ವಾಸವಾಗಿದ್ದರೂ, ಬಹುತೇಕ ಜನರು ಮೂಲ ಭೂತ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ. ಆದರೂ, ದೇಗುಲಗಳ ವೀಕ್ಷಣೆಗಾಗಿ ಪ್ರತಿನಿತ್ಯನಗರಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದಅಸಂಖ್ಯಾತ ಭಕ್ತರು ಭೇಟಿ ನೀಡುತ್ತಿದ್ದಾರೆ. ಜನಸಾಮಾನ್ಯರ ಅನುಕೂಲಕ್ಕಾಗಿ ಹಲವು ವರ್ಷಗಳಹಿಂದೆಯೇ ಮಾಜಿ ಸಚಿವ ಆಲಂಗೂರ್‌ಶ್ರೀನಿವಾಸ್‌, ಪುರಸಭೆ ವ್ಯಾಪ್ತಿಯ ನಾಲ್ಕುಪ್ರದೇಶಗಳಲ್ಲಿ ತಲಾ 20 ಲಕ್ಷ ರೂ. ವೆಚ್ಚದಲ್ಲಿಎಸ್‌ಎಫ್ಸಿ ಯೋಜನೆಯಡಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲು ಆದೇಶ ನೀಡಿದ್ದರು.

ಒಂದು ಶೌಚಾಲಯಕ್ಕೆ ಉದ್ಘಾಟನೆ ಭಾಗ್ಯವಿಲ್ಲ:

ಅದರಂತೆ ನಗರಸಭೆ ಅಧಿಕಾರಿಗಳು ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಹಲವಾರು ವರ್ಷಗಳ ಹಿಂದೆಯೇ ಶೌಚಾಲಯವನ್ನು ನಿರ್ಮಿಸಿದ್ದರು. ಆದರೆ, ಒಂದು ಶೌಚಾಲಯವನ್ನು ಉದ್ಘಾಟಿಸಿರುವ ನಗರಸಭೆ ಅಧಿಕಾರಿಗಳು, ಮತ್ತೂಂದನ್ನು ಉದ್ಘಾಟಿಸಲು ನಿರ್ಲಕ್ಷ್ಯವಹಿಸಿದ್ದಾರೆ. ಆದ್ದರಿಂದ ಶೌಚಾಲಯ ದಿಕ್ಕುದೆಸೆ ಇಲ್ಲದಂತಾಗಿದ್ದು, ಉದ್ಘಾಟನೆಗೆ ಮುನ್ನವೇ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

Advertisement

ಹಲವು ವರ್ಷಗಳ ಹಿಂದೆ ನಗರದ ತಹಶೀಲ್ದಾರ್‌ ಕಚೇರಿ ಮುಂಭಾಗಎರಡು ಶೌಚಾಲಯಗಳನ್ನುನಿರ್ಮಿಸಿದ್ದು, ಇತ್ತೀಚಿನ ವರ್ಷಗಳಲ್ಲಿಮಾತ್ರ ಒಂದನ್ನು ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ನೀಡಲಾಗಿದೆ.ಇನ್ನುಳಿದ ಶೌಚಾಲಯವನ್ನುಉದ್ಘಾಟನೆ ಮಾಡಲು ಸಾರ್ವಜನಿಕ ರಿಂದಲೇ ಕೋರಿಕೆ ಇಲ್ಲವಾಗಿದೆ. ಶ್ರೀನಿವಾಸಮೂರ್ತಿ, ಪೌರಾಯುಕ್ತ, ನಗರಸಭೆ

ಸರ್ಕಾರದ ಲಕ್ಷಾಂತರ ರೂ.ಗಳ ಅಭಿವೃದ್ಧಿ ಅನುದಾನದಲ್ಲಿಸಾರ್ವಜನಿಕ ಶೌಚಾಲಯ ನಿರ್ಮಿಸಿಹಲವು ವರ್ಷಗಳೇ ಕಳೆದಿದೆ. ಆದರೂ,ಉದ್ಘಾಟನೆ ಮಾಡದೇ ಬಿಟ್ಟಿರುವುದರಿಂದ ಸರ್ಕಾರಿ ಅನುದಾನ ವ್ಯಯವಾಗುತ್ತಿದೆ. ಆದ್ದರಿಂದ ಶೀಘ್ರವಾಗಿ ಉದ್ಘಾಟನೆ ಮಾಡಿ, ಸಾರ್ವಜನಿಕರ ಅನುಕೂಲಕ್ಕೆ ಸೌಲಭ್ಯ ಕಲ್ಪಿಸಬೇಕು. ರಾಜು, ಕಸವಿರೆಡ್ಡಿಹಳ್ಳಿ

 

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next