Advertisement

ಸರ್ಕಾರಿ ಬ್ಯಾಂಕ್‌ಗಳ ಲಾಭ 1.04 ಲಕ್ಷ ಕೋಟಿ ರೂ. ಏರಿಕೆ: ಸಚಿವೆ ನಿರ್ಮಲಾ ಸೀತಾರಾಮನ್‌ 

08:52 PM Jul 01, 2023 | Team Udayavani |

ನವದೆಹಲಿ: ಸರ್ಕಾರಿ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿಎಸ್‌) ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಉಪಕ್ರಮಗಳ ಭಾಗವಾಗಿ ಕಳೆದ 9 ವರ್ಷದಲ್ಲಿ ಸರ್ಕಾರಿ ಬ್ಯಾಂಕ್‌ಗಳ ಲಾಭ 1.04 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಅಲ್ಲದೇ, ಆರ್ಥಿಕವಲಯದ ಉತ್ತೇಜನಕ್ಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಸಚಿವೆ ಪುನರುಚ್ಚರಿಸಿದ್ದಾರೆ.

ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌ನ ಕಾರ್ಪೋರೇಟ್‌ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯುತ್ತಮ ಕಾರ್ಪೋರೇಟ್‌ ಆಡಳಿತ ತತ್ವಗಳನ್ನು ಅನುಸರಿಸುವ ಮೂಲಕ ಬ್ಯಾಂಕ್‌ಗಳು ಸಂಪೂರ್ಣ ಅಭಿವೃದ್ಧಿಯನ್ನು ಸಾಧಿಸಬೇಕು. ಯಾವುದೇ ಕಾರಣಕ್ಕೂ ಹಿಂದಿನ ಯಶಸ್ಸುಗಳೇ ಸಾಕೆಂದು ಕೂರಬಾರದು. ಸಾಂಸ್ಥಿಕ ಆಡಳಿತ, ನಿಯಂತ್ರಕ ಮಾನದಂಡ, ಸುಸ್ಥಿ ಸಾಲ ಸಮಸ್ಯೆ ನಿವಾರಣೆಯತ್ತ ಹೆಚ್ಚಿನ ಗಮನಹರಿಸಬೇಕು ಎಂದು ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next