Advertisement

ಸಾರ್ವಜನಿಕ ಸುರಕ್ಷತೆ ನಿರ್ಲಕ್ಷ್ಯ: 100ಕ್ಕೂ ಅಧಿಕ ಕಟ್ಟಡಗಳಿಗೆ ನೋಟಿಸ್‌

08:20 PM Aug 11, 2021 | Team Udayavani |

ಮಹಾನಗರ: ಸಾರ್ವ ಜನಿಕರ ಸುರಕ್ಷತೆಯ ದೃಷ್ಟಿಯಿಂದ ವಸತಿ, ವಾಣಿಜ್ಯ ಕಟ್ಟಡಗಳಲ್ಲಿ ಸಿಸಿ ಕೆಮರಾ ಅಳವಡಿಕೆ ಹಾಗೂ ಭದ್ರತ ಸಿಬಂದಿ ನಿಯೋಜನೆಯನ್ನು ನಿರ್ಲಕ್ಷಿಸುವ ಕಟ್ಟಡ ಮಾಲಕರ ವಿರುದ್ಧ ಕ್ರಮಕ್ಕೆ ಮಂಗಳೂರು ಪೊಲೀಸರು ಮುಂದಾಗಿದ್ದಾರೆ.

Advertisement

ಸಾರ್ವಜನಿಕ ಸುರಕ್ಷೆ ಕಾಯ್ದೆಯನ್ವಯ ಸಿಸಿ ಕೆಮರಾ ಅಳವಡಿಕೆ(ಉತ್ತಮ ಗುಣಮಟ್ಟದ), ಖಾಸಗಿ ಭದ್ರತೆ ಸಿಬಂದಿ ನಿಯೋಜನೆ ಕಡ್ಡಾಯವಿದೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷಾ ಕಾಯ್ದೆ ಅನ್ವಯವಾಗುವ ಸುಮಾರು 1,135 ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ.

ಈ ಪೈಕಿ ಸುಮಾರು 325 ಕಟ್ಟಡಗಳಲ್ಲಿ ಮಾತ್ರ ಖಾಸಗಿ ಭದ್ರತೆ ಸಿಬಂದಿ ನಿಯೋಜಿಸಲಾಗಿದೆ. ಬಹುತೇಕ ಕಟ್ಟಡ ಗಳು ಸಿಸಿ ಕೆಮರಾ ಅಳವಡಿಸಿಕೊಂಡಿದ್ದರೂ ಅವುಗಳಲ್ಲಿ ಹೆಚ್ಚಿನವು ನಿಗದಿತ ಗುಣಮಟ್ಟ ದವುಗಳಾಗಿಲ್ಲ. ಅಗತ್ಯ ಸಂದರ್ಭದಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹಾಗಾಗಿ ಇಂತಹ ಕಟ್ಟಡ ಮಾಲಕರಿಗೆ ನೋಟಿಸ್‌ ನೀಡಲಾಗುತ್ತಿದೆ.

20,870 ಸಿಸಿ ಕೆಮರಾಗಳು:

ಪೊಲೀಸರು ಸಂಗ್ರಹಿಸಿದ ಮಾಹಿತಿ ಯಂತೆ ಮಂಗಳೂರು ಪೊಲೀಸ್‌ ಕಮಿಷನ ರೆಟ್‌ ವ್ಯಾಪ್ತಿಯಲ್ಲಿ ವಿವಿಧ ಕಟ್ಟಡಗಳಲ್ಲಿ ಒಟ್ಟು 20,870 ಸಿಸಿ ಕೆಮರಾಗಳಿವೆ. ಆದರೆ ಇದರಲ್ಲಿ ಒಂದು ತಿಂಗಳ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ಸಿಸಿ ಕೆಮರಾಗಳ ಸಂಖ್ಯೆ 1,074 ಮಾತ್ರ. ಹೈ ರೆಸೆಲ್ಯೂಷನ್‌ ಹೊಂದಿರುವ ಸಿಸಿ ಕೆಮರಾಗಳು 3,224 ಇವೆ. 24 ಕಟ್ಟಡಗಳಲ್ಲಿ ಹ್ಯಾಂಡಲ್ಡ್‌ ಮೆಟಲ್‌ ಡಿಟೆಕ್ಟರ್‌ ಹಾಗೂ 31 ಕಟ್ಟಡಗಳಲ್ಲಿ ಡೋರ್‌ ಫ್ರೆàಮ್‌ ಮೆಟಲ್‌ ಡಿಟೆಕ್ಟರ್‌ ಇದೆ.

Advertisement

ಪೊಲೀಸರ ಸೂಚನೆ  :

  1. ದಿನಕ್ಕೆ ಸುಮಾರು 500ಕ್ಕಿಂತ ಜಾಸ್ತಿ ಬಾರಿ ಜನರ ಓಡಾಟವಿರುವ ಅಥವಾ ಒಂದೇ ಬಾರಿಗೆ 100 ಮಂದಿಯ ಓಡಾಟವಿರುವ ಕಟ್ಟಡ/ಮಳಿಗೆಗಳಲ್ಲಿ ಸಿಸಿ ಕೆಮರಾ ಕಡ್ಡಾಯ.
  2. ಸಿಸಿ ಕೆಮರಾಗಳು ಉತ್ತಮ ರೆಸೆಲ್ಯೂಷನ್‌, ಕನಿಷ್ಠ ಒಂದು ತಿಂಗಳು ಸ್ಟೋರೇಜ್‌ ಸಾಮರ್ಥ್ಯ ಹೊಂದಿರಬೇಕು.
  3. ಸಿಸಿ ಕೆಮರಾಗಳನ್ನು ರಸ್ತೆ, ಸಾರ್ವಜನಿಕ ಓಡಾಟ ಸ್ಥಳದ ದೃಶ್ಯ ಸೆರೆ ಹಿಡಿ ಯುವಂತೆ ಅಳವಡಿಸಬೇಕು.
  4. ಭದ್ರತ ಸಿಬಂದಿಯನ್ನು ಕೂಡ ನಿಯೋಜಿಸಬೇಕು.

ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಟ್ಟಡದ ಮಾಲಕರಿಗೆ ನೋಟಿಸ್‌ ನೀಡಲಾಗುತ್ತಿದ್ದು ಕಳೆದ ಒಂದು ತಿಂಗಳಿನಲ್ಲಿ 100ಕ್ಕೂ ಅಧಿಕ ಮಂದಿಗೆ ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೀಡಿದ ಬಳಿಕ 15 ದಿನಗಳ ಅವಕಾಶ ನೀಡಲಾಗುತ್ತಿದೆ. ಹಲವರು ಉತ್ತಮ ರೆಸೊಲ್ಯೂಷನ್‌, ಹೆಚ್ಚು ಸ್ಟೋರೇಜ್‌ ಸಾಮರ್ಥ್ಯ ಇರುವ ಕೆಮರಾ ಅಳವಡಿಸಿದ್ದಾರೆ. ಖಾಸಗಿ ಭದ್ರತೆ ಸಿಬಂದಿ ನಿಯೋಜನೆಗೂ ಕ್ರಮ ಕೈಗೊಳ್ಳುತ್ತಿದ್ದಾರೆ. ನೋಟಿಸಿನ ಅನಂತರವೂ ಕ್ರಮ ಕೈಗೊಳ್ಳದವರಿಂದ ದಂಡ ವಸೂಲಿ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.  –ಹರಿರಾಂ ಶಂಕರ್‌, ಡಿಸಿಪಿ, ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next