Advertisement

ಕೆರೆ ಮುಚ್ಚಿ ಸ್ಮಶಾನ ನಿರ್ಮಾಣ: ಆಕ್ರೋಶ

01:48 PM Feb 16, 2022 | Team Udayavani |

ಯಳಂದೂರು: ತಾಲೂಕಿನ ಬನ್ನಿಸಾರಿಗೆ ಗ್ರಾಮದ ಬಳಿ ಇರುವ ಕೆರೆಯನ್ನು ಮುಚ್ಚಿ ಸ್ಮಶಾನವನ್ನು ನಿರ್ಮಿಸಲು ಮುಂದಾಗಿರುವ ಕಂದಾಯ ಇಲಾಖೆಯ ಕ್ರಮಕ್ಕೆ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬನ್ನಿಸಾರಿಗೆ ಗ್ರಾಮದ ಹೊರ ವಲಯದಲ್ಲಿರುವ ಸರ್ವೆ ನಂ 987 ರಲ್ಲಿರುವ 1.18 ಎಕರೆ ಸರ್ಕಾರಿಜಮೀನಿದೆ. ಇಲ್ಲೇ 30 ಗುಂಟೆ ಜಮೀನಿನಲ್ಲಿ 2005ರಲ್ಲಿ ಸ್ಮಶಾನ ಸ್ಥಳವೆಂದು ಸರ್ಕಾರಿ ದಾಖಲೆಗಳಲ್ಲಿ ನಮೂದಿಸಲಾಗಿದೆ. ಆದರೆ, ಸರ್ಕಾರ ಈ ಸ್ಥಳದಲ್ಲಿ ಸ್ಮಶಾನ ಮಾಡಲು ಇಲ್ಲಿರುವ ಮಂಚೇಗೌಡನಕಟ್ಟೆಯನ್ನು ಆರಿಸಿಕೊಂಡಿರುವ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

8 ಕಟ್ಟೆ ಮುಚ್ಚಲಾಗಿದೆ: ಗ್ರಾಮ ವ್ಯಾಪ್ತಿಯಲ್ಲಿ ಇದುವರೆಗೂ 1 ರಿಂದ 2 ಎಕರೆ ಪ್ರದೇಶ ವ್ಯಾಪ್ತಿ  ಯಲ್ಲಿದ್ದ ಒಟ್ಟು 8 ಕೆರೆಕಟ್ಟೆಗಳನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಮುಚ್ಚಿಹೋಗಿವೆ. ಗ್ರಾಮ ವ್ಯಾಪ್ತಿಯ ಪುಟ್ಟರಂಗನಕೆರೆ, ಹೊಸಕೆರೆಯಪ್ಪ, ಮರಣಿಕಟ್ಟೆ, ಅರಳಿಕಟ್ಟೆ, ಅಲಿಗರಯ್ಯನಕಟ್ಟೆ, ಮಗನಕಟ್ಟೆ, ಚಿಕ್ಕಯ್ಯಮ ಕಟ್ಟೆ, ಲಕ್ಕಯ್ಯನಕಟ್ಟೆಗಳನ್ನು ಪ್ರಭಾವಿಗಳು ಒತ್ತು ವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಆದರೆ ಪರಿಶಿಷ್ಟ ಪಂಗಡದವರು ವಾಸವಾಗಿರುವ ಈ ಸ್ಥಳದಲ್ಲಿದ್ದ ಕಟ್ಟೆಯನ್ನೂ ಮುಚ್ಚಲುಯತ್ನಿ ಸುತ್ತಿರುವ ಅಧಿಕಾರಿಗಳ ಕ್ರಮ ಹಲವು ಅನುಮಾನ ಗಳಿಗೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ವಹಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next