ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ರಾಜಾತಿಥ್ಯ ನೀಡಲಾ ಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿ ಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಟ್ರೋಲ್ ಆಗುತ್ತಿದ್ದು, ಠಾಣೆಗೆ ಶಾಮಿಯಾನ ಹಾಕಿರುವುದು ಏಕೆ ಎಂಬುದು ಜನರ ಯಕ್ಷ ಪ್ರಶ್ನೆಯಾಗಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬುವರು ಪ್ರತಿಕ್ರಿಯಿಸಿದ್ದು, ಈ ಹಿಂದೆ ಡೆಮಾಲಿಷನ್ ಡ್ರೈವ್ ವೇಳೆ ಬಿಬಿಎಂಪಿ ಬಡವರ ಮನೆ ಒಡೆದು ಹಾಕಿದ್ದರು. ಆ ವೇಳೆ ದರ್ಶನ್ ಮತ್ತು ಶಿವಶಂಕರಪ್ಪ ಮನೆ ಬಿಟ್ಟಿದ್ದರು. ಅವತ್ತು ಯಾರು ದರ್ಶನ್ ಕಾಪಾಡಿ ದ್ದರೋ ಅದೇ ಶಕ್ತಿ ಮತ್ತೆ ಕಾಪಾಡಲು ಮುಂದಾಗಿದೆ.
ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರೋದು ಡಿಕ್ಟೇಟರ್‌ಶಿಪ್ಪಾ ಎಂದು ಪ್ರಶ್ನಿಸಿದರು. ಆರೋಪಿಗಳಿಗೆ ವಿಶೇಷ ಆತಿಥ್ಯ ಕೊಟ್ಟಿರುವ ಬಗ್ಗೆ ನರಸಿಂಹಮೂರ್ತಿ ಆರ್‌ಟಿಐ ಮೂಲಕ ಮಾಹಿತಿ ಕೇಳಿದ್ದಾರೆ. ಯಾವ ಕಾರಣಕ್ಕೂ ಸಿಸಿಟಿವಿ ಕೊಡೋಕೆ ಆಗಲ್ಲ ಅಂತಾ ಹೇಳುವ ಹಾಗಿಲ್ಲ. ಅದನ್ನು ಕೊಟ್ಟ ಮೇಲೆ ಸತ್ಯಾಸತ್ಯಾತೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಇನ್ನು ಎಪಿ ನಗರ ಪೊಲೀಸ್ ಸ್ಟೇಷನ್ ಗೆ ಹಾಕಿರೋ ಶಾಮಿಯಾನ ತೆರವು ಮಾಡುವಂತೆ ವಂದೇ ಮಾತರಂ ಸಂಘಟನೆ ಒತ್ತಾಯಿಸಿದೆ. ಸಂಘಟನೆ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯಕ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಲಾಗುತ್ತಿದೆ.
ಪವಿತ್ರಾ ಗೌಡ ಭೇಟಿಗೆ ಅವಕಾಶ ನಿರಾಕರಣೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ ಭೇಟಿಗೆ ಆಕೆಯ ಸಹೋದರಿ ಹಾಗೂ ಸಂಬಂಧಿ ಅನ್ನ ಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದಿದ್ದರು. ಭೇಟಿಗೆ ಪೊಲೀಸರು ನಿರಾಕರಿ ಸಿದರು. ಫೋನ್ ಮಾಡಿಸಿ ಒಳಗಡೆ ಹೋಗಲು ವಿಫಲ ಯತ್ನ ನಡೆಸಿದರು. ಸಾಂತ್ವನ ಕೇಂದ್ರಕ್ಕೆ ಹೋಗಿದ್ದಾಗ ಠಾಣೆಯಲ್ಲಿ ಭೇಟಿ ಮಾಡುವಂತೆ ಸೂಚಿಸಿ ಕಳುಹಿಸಲಾಗಿತ್ತು.