Advertisement
ಮಣಿಪಾಲ್ ಗ್ರೂಪ್ ನ ಆಡಳಿತ ನಿರ್ದೇಶಕ ಟಿ. ಗೌತಮ್ ಪೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿ ಕೇಂದ್ರ ಸರಕಾರ ಆರ್ಥಿಕ ವಲಯವನ್ನು ಸುಧಾರಿಸುವಲ್ಲಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇತ್ತೀಚೆಗೆ ಶಾಸಕ ಕೆ. ರಘುಪತಿ ಭಟ್ ಅವರು ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಕೇಳಿದ್ದರು. ಇಲ್ಲಿ ಸಿಆರ್‌ಝಡ್ ವ್ಯಾಪ್ತಿಯ ಸಮಸ್ಯೆ ಇತ್ತು. ಈಗ ಇದರ ಮಾನದಂಡವನ್ನು 50 ಮೀ.ಗೆ ಇಳಿಸಲಾಗಿದೆ. ಇನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ತೊಂದರೆಯಾಗದು ಎಂದರು.
Related Articles
ಕಾಶ್ಮೀರದಲ್ಲಿ ಈಗ ಸಹಜ ಸ್ಥಿತಿ ಇದೆ. ಏಳು ದಶಕಗಳಿಂದ ಇದ್ದ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಅಹಿತಕರ ಘಟನೆ ನಡೆಯಬಾರದೆಂದು ಸೈನಿಕರ ನಿಯೋಜನೆ, ಪ್ರತಿಭಟನೆ ಇತ್ಯಾದಿಗಳು ನಡೆಯದಂತೆ ಕೆಲವು ನಾಯಕರ ಗೃಹಬಂಧನ ನಡೆಸಿದ್ದೆವು. ಅಲ್ಲಿನವರ ಹಿತಕ್ಕಾಗಿ ಸೇಬಿಗೆ ಮೊದಲ ಬಾರಿ ಕನಿಷ್ಠ ಉತ್ತೇಜನ ಬೆಲೆ ನಿಗದಿಪಡಿಸಿ ಖರೀದಿಸುತ್ತಿದ್ದೇವೆ. ಇಡೀ ಜಗತ್ತೇ ನಮ್ಮ ಪರವಾಗಿದೆ ಎಂದರು.
Advertisement
ಸಚಿವರೊಂದಿಗೆ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ನಾಯಕರಾದ ಕೆ. ಉದಯ ಕುಮಾರ ಶೆಟ್ಟಿ, ಕುಯಿಲಾಡಿ ಸುರೇಶ ನಾಯಕ್, ಮಹೇಶ್ ಠಾಕೂರ್, ದ.ಕ. ಜಿಲ್ಲೆಯ ಅಶೋಕಕುಮಾರ್ ರೈ ಮೊದಲಾದವರು ಇದ್ದರು.
ತೆರಿಗೆ ಕಿರುಕುಳ ನಿಯಂತ್ರಣಕ್ಕೆ ಆನ್‌ಲೈನ್ ವ್ಯವಸ್ಥೆತೆರಿಗೆ ಸಂಗ್ರಹ ಕುರಿತು ಅಧಿಕಾರಿಗಳು ಕೊಡುವ ಕಿರುಕುಳದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಮಾಲಕರಿಗೂ ಅಧಿಕಾರಿಗಳಿಗೂ ನೇರ ಸಂಪರ್ಕವಿಲ್ಲದೆ ಎಲ್ಲ ವ್ಯವಹಾರಗಳೂ ಆನ್‌ಲೈನ್‌ನಲ್ಲಿ ಆಗುವಂತೆ ನೋಡಿಕೊಳ್ಳುವ ವ್ಯವಸ್ಥೆ ಅ. 1ರಿಂದ ಜಾರಿಗೊಳ್ಳಲಿದೆ. ಬಳಿಕ ಯಾರ ಹಸ್ತಕ್ಷೇಪಕ್ಕೂ ಅವಕಾಶವಿರುವುದಿಲ್ಲ ಎಂದು ಹೇಳಿದರು. ತೆರಿಗೆ ದಾರರ ಕ್ಷೇಮವನ್ನು ಸರಕಾರ ಕಾಪಾಡಬೇಕು. ತೆರಿಗೆ ಕಿರುಕುಳದಿಂದ ಉದ್ಯಮ ನಿಲ್ಲಿಸುವ ಸ್ಥಿತಿ ಬರಬಾರದು. ಆದ್ದರಿಂದ ಅದನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈ ಗೊಳ್ಳಬೇಕು ಎಂದ ಗೌತಮ್ ಪೈ ಅವರು, ದೇಶದ ಆರ್ಥಿಕ ಹಿಂಜರಿತ ತಡೆಯಲು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ಸ್ವಾಗತಿಸಿದರು. ಕಾಶ್ಮೀರದ ವಿಷಯ ಸಂಬಂಧವೂ ಸದಾನಂದ ಗೌಡರು ಕೇಳಿದ ಪ್ರಶ್ನೆಗೆ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಆಂತರಿಕ ವಿಷಯ ಎಂದರು.