Advertisement

ಸಾರ್ವಜನಿಕ ಗ್ರಂಥಾಲಯ ಉನ್ನತೀಕರಣ

07:44 PM Apr 11, 2021 | Team Udayavani |

ಯಲ್ಲಾಪುರ : ಸಾರ್ವಜನಿಕ ಗ್ರಂಥಾಲಯವನ್ನು ಉನ್ನತ್ತೀಕರಿಸಿಸುವ ಹಾಗೂ ಡಿಜಿಟಲ್‌ ಗ್ರಂಥಾಲಯಗಳನ್ನಾಗಿ ಪರಿವರ್ತಿಸುವ ಮುಖೇನ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾಹಿತಿ ಮತ್ತು ಸಂವಹನದ ಸೇವೆ ಒದಗಿಸುವಲ್ಲಿ ಇಲ್ಲಿನ ಶಾಖಾ ಗ್ರಂಥಾಲಯ ಸಿದ್ಧವಾಗಿದೆ.

Advertisement

ಪಟ್ಟಣ ಮತ್ತು ಗ್ರಾಮೀಣ ನಿವಾಸಿಗಳಿಗೆ ಗ್ರಂಥಾಲಯದ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಖಾ ಗ್ರಂಥಾಲಯದಲ್ಲಿ ಡಿಜಿಟಲ್‌ ವ್ಯವಸ್ಥೆಯ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು ಓದುಗರಿಗೆ ಮುಕ್ತವಾಗಿದೆ. ವಿವಿಧ ಪ್ರಕಾರದ ಮತ್ತು ವಿವಿಧ ಭಾಷೆಯ ಒಂದು ಲಕ್ಷದ ಏಳು ಸಾವಿರ ಪುಸ್ತಕಗಳು ಮತ್ತು 8156 ಶೈಕ್ಷಣಿಕ ವಿಡಿಯೋಗಳನ್ನು ಉಚಿತವಾಗಿ ನೋಡಲು ಅವಕಾಶ ಕಲ್ಪಿಸಲಾಗಿದೆ. ದೇಶ ವಿದೇಶದ ಕತೆಗಳು, ವ್ಯಕ್ತಿತ್ವ ವಿಕಸನದ ಪುಸ್ತಕಗಳು, ಬೌದ್ಧಿಕ ವಿಕಾಸದ ವಿಶೇಷ ವಿಡಿಯೋಗಳು, ಸಾಹಿತ್ಯ ಪ್ರಿಯರಿಗೆ ವಿವಿಧ ಕಥೆ, ಕಾವ್ಯ, ಕಾದಂಬರಿ, ನಾಟಕ, ನುಡಿಚಿತ್ರ ಬರವಣಿಗಗಳು ಸೇರಿದಂತೆ ವಿವಿಧ ಪ್ರಕಾರದ ಆಸಕ್ತಿದಾಯಕ, ತಮ್ಮಿಷ್ಟದ ಪುಸ್ತಕಗಳ ಜಾಲತಾಣಕ್ಕೆ ಭೇಟಿ ನೀಡಿ ಪುಸ್ತಕದ ಪುಟ ಓದಬಹುದು.

ಮಾಹಿತಿ ತಂತ್ರಜ್ಞಾನದ ಆಧುನಿಕತೆಯ ಸ್ಪರ್ಶ ಯಲ್ಲಾಪುರ ಶಾಖಾ ಗ್ರಂಥಾಲಯಕ್ಕೂ ವಿಸ್ತರಿಸಿ ಜಾಗತೀಕರಣ ವ್ಯವಸ್ಥೆಗೆ ಮತ್ತು ಆಧುನಿಕತೆ ಸವಾಲುಗಳಿಗೆ ತನ್ನನ್ನು ತೆರೆದುಕೊಂಡಿದೆ. ಉಚಿತವಾಗಿ ಓದುಗರು ಸ್ವತಃ ಈ ಜಾಲತಾಣಗಳ ಪರಿಕರ ಬಳಸಿಕೊಳ್ಳಬಹುದಾಗಿದ್ದು, ವೈಯಕ್ತಿಕ ಓದಿನ ಜೊತೆಗೆ ಅವಶ್ಯವಿರುವ ಮಾಹಿತಿಗಳನ್ನು ಓದಿಗೆ ಸಂಗ್ರಹಿಸಬಹುದಾಗಿದೆ. ಗ್ರಂಥಾಲಯದಲ್ಲಿ 15 ಸಾವಿರ ಜನ ಡಿಜಿಟಲ್‌ ಲೈಬ್ರರಿಯ ಸದಸ್ಯತ್ವ ಪಡೆದಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈಗಾಗಲೇ ಮುದ್ರಿತ 35 ಸಾವಿರಕ್ಕೂ ಹೆಚ್ಚು ಮುದ್ರಿತ ಪುಸ್ತಕಗಳು ವಾಚಕರಿಗೆ ಓದಲು ಲಭ್ಯವಿದ್ದು ಗಾಳಿ ಬೆಳಕಿನ ಉತ್ತಮ ಆಸನಗಳನ್ನು ಹೊಂದಿರುವ ವ್ಯವಸ್ಥಿತ ಕಟ್ಟಡದಲ್ಲಿ ವಿಷಯವಾರು ಜೋಡಿಸಲಾಗಿದೆ. ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕ ಗ್ರಂಥಾಲಯ ಮುಕ್ತವಾಗಿದೆ. ವರ್ತಮಾನದ ನಿಯತ ಕಾಲಿಕೆಗಳನ್ನು ಬೆರಳ ತುದಿಯಲ್ಲಿ ಓದಬಹುದಾಗಿದ್ದು ಮೌನದ ವಾತಾವರಣದಲ್ಲಿ ಅಕ್ಷರ ಪ್ರೀತಿಯವರು ಅಕ್ಕರೆಯಿಂದ ಓದಲು ಬೇಕಾದ ಎಲ್ಲಾ ವ್ಯವಸ್ಥೆಗಳು ಲಭ್ಯವಾಗಿದೆ. ಬೇಸಿಗೆಯ ಬಿಸಿಲಿನ ಬಿಡುವಿನ ನಡುವೆ ವಾಚಕರಿಗೆ ಕಂಪ್ಯೂಟರ್‌ ಓದು ಲಭ್ಯವಾಗಿದ್ದು, ದಿನನಿತ್ಯ ಓದುಗರು ಈ ಜಾಲ ತಾಣಕ್ಕೆ ಭೇಟಿ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next