Advertisement

ಸೂರ್ಯನ ಮುಟ್ಟಲು ಬನ್ನಿ

08:15 AM Mar 08, 2018 | |

ಭೂಮಿಯನ್ನು ಬೆಳಗುತ್ತಿರುವ ಸೂರ್ಯನ ಅಧ್ಯಯನಕ್ಕೆ ಮುಂದಾಗಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ), ವಿಶ್ವದ ಸಮಸ್ತ ಜನತೆಗೆ ಸೂರ್ಯನನ್ನು ಸ್ಪರ್ಶಿಸುವ ಅಪೂರ್ವ ಅವಕಾಶವನ್ನು ತಂದುಕೊಟ್ಟಿದೆ! ಹೀಗಾಗಿ ವಿಶ್ವದ ನಾಗರಿಕರಿಗೆ ತಮ್ಮ ಹೆಸರುಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ನೋಂದಾಯಿಸುವಂತೆ ಆಹ್ವಾನಿಸಿದೆ.

Advertisement

ಇದು ನಿಜವಾ?
ಸೂರ್ಯನಲ್ಲಿಗೆ ನಾಸಾ ಜನ ರನ್ನು  ನೇರವಾಗಿ ಕಳುಹಿಸುತ್ತಿಲ್ಲ. ಆದರೆ, ಸೂರ್ಯನಲ್ಲಿಗೆ ತಾನು ಕಳುಹಿಸಲಿರುವ ಆಕಾಶಕಾಯದ ಎಲೆಕ್ಟ್ರಾನಿಕ್‌ ಸರ್ಕಿಟ್‌ನ ಚಿಪ್‌ ಒಂದರಲ್ಲಿ ವಿಶ್ವದ ನಾನಾ ದೇಶಗಳ ನಾಗರಿಕರ ಹೆಸರುಗಳನ್ನು ಅಳವಡಿಸಿ ಸೂರ್ಯನತ್ತ ಕಳುಹಿಸಲು ನಿರ್ಧರಿಸಿದೆ. 

ಸಂಶೋಧನೆ ಮಹತ್ವ? 
ನಾಸಾ ತಾನು ಕೈಗೊಂಡಿರುವ ಈ ಮಹತ್ವದ ಅಧ್ಯಯನಕ್ಕೆ “ಪಾರ್ಕರ್‌ ಸೋಲಾರ್‌ ಮಿಷನ್‌’ ಎಂದು ನಾಮ ಕರಣ ಮಾಡಿದ್ದು, ಸಂಶೋಧನೆ ಗಾಗಿ ಸಾಗುವ ಆಕಾಶಕಾಯ ಜುಲೈ 31ರಂದು ಉಡಾವಣೆ ಆಗಲಿದೆ. ಸೂರ್ಯನಿಂದ ಉತ್ಪತ್ತಿ ಯಾಗುವ ಮಹಾ ಶಾಖದ ಪ್ರಸರಣ ರೀತಿಯನ್ನು ಅಧ್ಯಯನ ಮಾಡುವುದು ಯೋಜನೆಯ ಉದ್ದೇಶವಾಗಿದೆ. 

ಏಕೆ ಈ ಐಡಿಯಾ?
ಸೂರ್ಯನತ್ತ ಹೆಸರುಗಳನ್ನು ಕಳುಹಿಸುವ ಮೂಲಕ ವಿಶ್ವದ ಜನತೆಗೆ ತಮ್ಮ ಹೆಸರನ್ನು ಸೂರ್ಯನಿಗೆ ರವಾನಿಸಿದ ಭಾವನೆ ಮೂಡಿಸುವ ಉದ್ದೇಶವನ್ನು ನಾಸಾ ಹೊಂದಿದೆ. ವಿಶ್ವದ ಸಮಸ್ತ ಜನರಿಗೆ ತಮ್ಮ ಹೆಸರುಗಳನ್ನು ತನ್ನ ವೆಬ್‌ಸೈಟ್‌ವೊಂದರಲ್ಲಿ ನೋಂದಾಯಿಸಲು ಅದು ಕೋರಿದೆ.  go.nasa.gov/HotTicket  ಮೂಲಕ ಏಪ್ರಿಲ್‌ 27ರವರೆಗೆ ಹೆಸರು ನೋಂದಾಯಿಸಲು ಅವಕಾಶವಿದೆ. 

ನಾಸಾದಿಂದ ರಸೀದಿ!
ನಿಮ್ಮ ಹೆಸರು, ಸ್ವವಿವರಗಳನ್ನು ನೀಡಿದ ಮೇಲೆ ನಿಮಗೆ ರಸೀದಿ ರೀತಿಯಲ್ಲಿ ನಾಸಾ ವತಿಯಿಂದ ಟಿಕೆಟ್‌ ಬರುತ್ತದೆ. ಇದನ್ನು ವಿಐಪಿ ಪಾಸ್‌ ಎಂದು ನಾಸಾ ಹೆಸರಿಸಿದೆ. ಇದು 94 ಲಕ್ಷ ಕಿ.ಮೀ.ಗಳಷ್ಟು ದೂರವಿರುವ ಸೂರ್ಯನತ್ತ ನಿಮ್ಮ ಹೆಸರನ್ನು ಕಳುಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next