Advertisement
ಈಗಾಗಲೇ ಮೂರು ಭಾಷಾ ಹಾಗೂ ಒಂದು ಪಠ್ಯ ವಿಷಯ ಪರೀಕ್ಷೆಗಳು ನಡೆದಿದ್ದು, ಶುಕ್ರವಾರ ಹಾಗೂ ಶನಿವಾರ ಇನ್ನೆರಡು ವಿಷಯಗಳ ಮೇಲೆ ಪರೀಕ್ಷೆ ನಡೆಯಲಿವೆ.
Related Articles
Advertisement
ಈ ಮಧ್ಯೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಪಬ್ಲಿಕ್ ಪರೀಕ್ಷೆ ಘೋಷಣೆ ಆದ ಬಳಿಕ ನೀಡಲಾಗಿತ್ತಾದರೂ ಗುರುವಾರದ ಗಣಿತ ಪರೀಕ್ಷಾ ಮಾದರಿಗೂ ಸಂಬಂಧವಿಲ್ಲವಾಗಿದೆ ಎಂಬುದು ದೂರಾಗಿದೆ.
ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಕಲಿಕಾ ಚೇತರಿಕೆ ಹಾಗೂ ಪಠ್ಯದ ಪ್ರಶ್ನೆಗಳನ್ನು ಬದಲಿಯಾಗಿ ನೀಡಲಾಗುತ್ತದೆ ಎಂದು ಹೇಳಿದ್ದರೂ ಪಠ್ಯದಲ್ಲೇ ಬದಲಿ ಪ್ರಶ್ನೆ ನೀಡಿದ್ದೂ ಬೆಳಕಿಗೆ ಬಂದಿದೆ.
ಕಲಿಕಾ ಚೇತರಿಕೆ ಹಾಗೂ ಪಠ್ಯ ಪ್ರಶ್ನೆ ಸಂಬಂಧಿಸಿ ಕೋರ್ಟ್ ಗೆ ಹೋಗಿ ಮುಂದೂಡಲಾಗಿತ್ತು. ಎಲ್ಲರೂ ತೇರ್ಗಡೆ ಎಂದು ಸರಕಾರದ ನಿಯಮ ಹೇಳಿದ್ದರೂ ಪ್ರಶ್ನೆ ಪತ್ರಿಕೆಯಲ್ಲಿ ಕಲಿಯದ ಪಾಠಗಳೇ ಬಿದ್ದು ಮಕ್ಕಳ ಆತ್ಮ ಸ್ಥೈರ್ಯ ಕುಗ್ಗಿಸುವಂತೆ ಆಗಿದೆ ಎನ್ನುತ್ತಾರೆ ಅನೇಕ ಪಾಲಕರು.
ಕೋವಿಡ್ ನಂತರ ಪೂರ್ಣ ಪ್ರಮಾಣದಲ್ಲಿ ತರಗತಿಗೆ ತೆರಳಿದ ಈ ಮಕ್ಕಳಿಗೆ ಈ ವರ್ಷ ಪರೀಕ್ಷೆ ಇನ್ನಷ್ಟು ಉತ್ಸಾಹ ನೀಡಬೇಕಿತ್ತು. ಆದರೆ, ಐದು ಹಾಗೂ ಎಂಟನೇ ವರ್ಗದ ಮಕ್ಕಳನ್ನು ಪರೀಕ್ಷಾ ಗೊಂದಲ ಸೃಷ್ಟಿಸಿದೆ ಎಂಬುದು ಶಿಕ್ಷಣಾಭಿಮಾನಿಗಳ ಅಸಮಧಾನವಾಗಿದೆ.
ತರಗತಿಯ ಪರೀಕ್ಷೆಯಲ್ಲಿ ನೂರಕ್ಕೆ 99 ಅಂಕ ಪಡೆದ ಮಕ್ಕಳು ಇಲ್ಲಿ ಶೇ.50ರಷ್ಟೂ ಸಾಧನೆ ಮಾಡಲಾಗದ ಸ್ಥಿತಿಯೂ ಇದೆ ಎನ್ನುತ್ತಾರೆ ಅನೇಕ ಶಿಕ್ಷಕರು. ಇಲಾಖೆಯ ಗೊಂದಲದಿಂದ ಈ ಪರೀಕ್ಷೆಗಳು ವಿದ್ಯಾರ್ಥಿಗಳನ್ನೇ ಗೊಂದಲಕ್ಕೀಡು ಮಾಡಿದೆ.