Advertisement

ವಿದ್ಯಾರ್ಥಿಗಳು ಕಾಲೇಜು ಆವರಣದೊಳಗೆ ಪ್ರೀತಿ-ಪ್ರೇಮ ವ್ಯಕ್ತಪಡಿಸಲು ನಿರ್ಬಂಧ

09:21 PM Feb 10, 2023 | Team Udayavani |

ಕಲ್ಲಿಕೋಟೆ: ಕಾಲೇಜು ಆವರಣದೊಳಗೆ ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಪ್ರೀತಿ-ಪ್ರೇಮವನ್ನು ವ್ಯಕ್ತಪಡಿಸುವಂತಿಲ್ಲ ಎಂದು ಕೇರಳದ ದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ-ಕ್ಯಾಲಿಕಟ್‌(ಎನ್‌ಐಟಿಸಿ) ಆದೇಶ ಹೊರಡಿಸಿದೆ.

Advertisement

ವಿದ್ಯಾರ್ಥಿಗಳ ಇಂಥ ವರ್ತನೆಯು ಇತರರ ಮೇಲೆ ಬೇರೆ ಬೇರೆ ರೀತಿಯಲ್ಲಿ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಶೈಕ್ಷಣಿಕ ಪ್ರದೇಶಗಳು, ವಿಶ್ರಾಂತಿ ಕೊಠಡಿಗಳು, ಬೆಳಕು ಕಡಿಮೆಯಿರುವಂಥ ಸ್ಥಳಗಳು ಸೇರಿದಂತೆ ಕ್ಯಾಂಪಸ್‌ನ ಆವರಣದೊಳಗೆ ಪರಸ್ಪರ ಪ್ರೀತಿ, ಪ್ರೇಮ ವ್ಯಕ್ತಪಡಿಸುವುದು, ಖಾಸಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮಾಡುವಂತಿಲ್ಲ. ಪರಸ್ಪರ ಸಮ್ಮತಿಯಿಂದಲೂ ಇಂಥ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಕ್ಯಾಂಪಸ್‌ ಎನ್ನುವುದು ಶಿಕ್ಷಣ ನೀಡುವ ಸ್ಥಳ ಎಂದು ವಿದ್ಯಾರ್ಥಿಗಳಿಗೆ ರವಾನಿಸಲಾದ ಇಮೇಲ್‌ನಲ್ಲಿ ಸೂಚಿಸಲಾಗಿದೆ.

ನಿಯಮಗಳನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next