Advertisement

ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ಜನ ಜಾಗೃತಿ

03:23 PM Jan 19, 2020 | Suhan S |

ಟೇಕಲ್‌: ಕೆಲ ರಾಜಕೀಯ ಪಕ್ಷದವರು ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿ ಜನರ ಹಾದಿ ತಪ್ಪಿಸಿ ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

Advertisement

ಟೇಕಲ್‌ನಲ್ಲಿ ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ಜನಜಾಗೃತಿಮೂಡಿಸುವ ನಿಟ್ಟಿನಿಂದ ಪ್ರತಿ ಹಳ್ಳಿಗೂ ಭೇಟಿ ನೀಡಿ ಅರಿವು ಮೂಡಿಸಿ ಮಾತನಾಡಿದರು. ಅದರಂತೆ ತಾವೆಲ್ಲರೂ ಆ ಸುಳ್ಳುಗಳಿಗೆ ಕಿವಿ ಕೊಡದೆ ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ಎಲ್ಲರಿಗೂ ತಿಳಿಸಿ ಜಾಗೃತರಾಗೋಣ ಎಂದು ಹೇಳಿದರು.

ಕೆ.ಜಿ.ಹಳ್ಳಿಯಲ್ಲಿ ವಾಸವಾಗಿರುವ ಕೆಲವು ನಿವೇಶನ ರಹಿತರು ಮನೆಕಟ್ಟಿಕೊಳ್ಳಲು ನಿವೇಶನ ಕೂಡಿಸುವಂತೆ ಮನವಿ ಮಾಡಿದರು. ಈ ವೇಳೆ ಸಂಸದ ಮುನಿಸ್ವಾಮಿ ಮಾತನಾಡಿ, ಗ್ರಾಪಂನಲ್ಲಿ ಅರ್ಜಿ ಸಲ್ಲಿಸಿದರೆ ಅವರು ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ, ನಿವೇಶನ ನೀಡಲು ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಅವರು ಫ‌ಲಾನುಭವಿಗಳನ್ನು ಆಯ್ಕೆ ಮಾಡಿಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಪದ್ಮನಾಭಯ್ಯ, ಜಿಲ್ಲಾ ರೈತ ಮೊರ್ಚಾ ಉಪಾಧ್ಯಕ್ಷ ನಾರಾಯಣ  ಸ್ವಾಮಿ, ಸುರೇಶ್‌, ಅಂಬರೀಶ್, ಗ್ರಾಪಂ ಸದಸ್ಯ ವೆಂಕಟೇಶ್‌, ಕೆ.ಆರ್‌. ನಾರಾ  ಯಣ ಸ್ವಾಮಿ, ಕೆಇಬಿ ನಾರಾಯಣಪ್ಪ, ಕರವೇ ಅಧ್ಯಕ್ಷ ಚಂದ್ರಶೇಖರ್‌,ವೆಂಕಟೇಶಪ್ಪ, ಬೆಟ್ಟಹಳ್ಳಿ ವೆಂಕಟರಾಮ್‌, ರಾಜೇಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next