Advertisement

12 ವರ್ಷದ ಬಾಲಕನ ಜೀವಕ್ಕೆ ಮುಳುವಾಯ್ತು ಪಬ್ ಜಿ ಸೇಡು: ಜೊತೆ ಆಟಗಾರ ಬಾಲಕ ಪೊಲೀಸ್ ವಶಕ್ಕೆ!

11:41 AM Apr 04, 2021 | Team Udayavani |

ಉಳ್ಳಾಲ: ಇಲ್ಲಿನ ಕೆ.ಸಿ.ರೋಡ್ ಬಳಿ 12 ವರ್ಷ ಪ್ರಾಯದ ಬಾಲಕನ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಬಾಲಕನನ್ನು ಪೊಲೀಸರು ವಶಕ್ಕ ಪಡೆದಿದ್ದಾರೆ.

Advertisement

ಕೊಲೆಯಾದ 12 ವರ್ಷದ ಬಾಲಕ ಆಕೀಫ್ ನ ಪಬ್ ಜಿ ಆಟದ ಗೆಳೆಯನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತ ಹಲವಾರು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ಹೇಳದ್ದಾರೆ.

ಇದನ್ನೂ ಓದಿ:ತಲಪಾಡಿ: 12 ವರ್ಷ ಪ್ರಾಯದ ಬಾಲಕನ ಕೊಲೆ!

ಪಬ್ ಜಿ ಸೇಡು: ಆರನೇ ತರಗತಿಯಲ್ಲಿ ಓದುತ್ತಿದ್ದ ಕೊಲೆಯಾದ ಬಾಲಕ ಆಕೀಫ್ ಯಾವತ್ತೂ ಪಬ್ ಜಿ ಆಟವಾಡುತ್ತಿದ್ದ. ಆನ್ ಲೈನ್ ಮೂಲಕ ಅನೇಕರನ್ನು ಆಟದಲ್ಲಿ ಸೋಲಿಸುತ್ತಿದ್ದ. ಮೂರು ತಿಂಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿ ಪರಿಚಯಗೊಂಡಿದ್ದ ಅಪ್ರಾಪ್ತ ವಯಸ್ಕ ಬಾಲಕನೊಂದಿಗೂ ಆಟಕ್ಕೆ ಮುಂದಾಗಿದ್ದ.

Advertisement

ಆನ್ ಲೈನ್ ಮೂಲಕ ಆಟವಾಡಿದ ಸಂದರ್ಭ ಆಕೀಫ್ ಗೆಲುವು ಸಾಧಿಸಿದಾಗ ಸಂಶಯ ವ್ಯಕ್ತಪಡಿಸಿದ ಆರೋಪಿ ಬಾಲಕ, ನಿನ್ನ ಆಟ ಬೇರೆ ಯಾರೋ ಆಡುತ್ತಿದ್ದಾರೆ. ಅದಕ್ಕೆ ಎದುರುಬದುರಾಗಿ ಕುಳಿತು ಆಡುವ ಛಾಲೆಂಜ್ ಹಾಕಿದ್ದ. ಅದರಂತೆ ಶನಿವಾರ ಸಂಜೆ ಬಳಿಕ ಇಬ್ಬರೂ ಜೊತೆಯಾಗಿ ಆಟವಾಡಲು ಆರಂಭಿಸಿದ್ದರು. ಆದರೆ ಆಟದಲ್ಲಿ ಆಕೀಫ್ ಸೋತಿದ್ದ. ಇದರಿಂದ ಆರೋಪಿ ಬಾಲಕ- ಆಕೀಫ್ ನಡುವೆ ವಾಗ್ವಾದ ನಡೆದಿತ್ತು.

ಇದನ್ನೂ ಓದಿ: ಡಿ. ಸುಧಾಕರ್‌ಗೆ ಸಿ.ಡಿ. ಕಂಟಕ : ಯುವತಿ ಜತೆ ಮಾತು ತನಿಖೆಯಲ್ಲಿ ದೃಢ

ಇದರಿಂದ ಕುಪಿತಗೊಂಡ ಆಕೀಫ್ ಸಣ್ಣ ಕಲ್ಲೆಸೆದು ಆರೋಪಿ ಬಾಲಕನಿಗೆ ಮೊದಲು ಹಲ್ಲೆ ನಡೆಸಿದ್ದ. ಇದರಿಂದ ರೊಚ್ಚಿಗೆದ್ದ ಆರೋಪಿ ಬಾಲಕ ದೊಡ್ಡ ಕಲ್ಲೊಂದನ್ನು ಎತ್ತಿ ಆಕೀಫ್ ಮೇಲೆ ಹಲ್ಲೆ ನಡೆಸಿದಾಗ ವಿಪರೀತ ರಕ್ತಸ್ರಾವ ಉಂಟಾದ ಆಕೀಫ್ ಸ್ಥಳದಲ್ಲೇ ಕುಸಿದುಬಿದ್ದಿದ್ದ.

ಗಾಬರಿಗೊಂಡ ಆರೋಪಿ ಆಕೀಫ್ ನನ್ನು ಸಮೀಪದಲ್ಲೇ ಇದ್ದ ಕಂಪೌಂಡ್ ಪಕ್ಕಕ್ಕೆ ಕರೆದೊಯ್ದು ಬಾಳೆ ಎಲೆ, ತೆಂಗಿನಗರಿಗಳನ್ನು ಮುಚ್ಚಿ ಪರಾರಿಯಾಗಿದ್ದನು. ಇಂದು ಬೆಳಿಗ್ಗೆ ಸ್ಥಳೀಯರು ಆಕೀಫ್ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಕೃತ್ಯದ ವೇಳೆ ಆರೋಪಿ ಬಾಲಕ ಓರ್ವನೇ ಇದ್ದನೇ ಅಥವಾ ಇನ್ಯಾರೋ ಇದ್ದರು ಅನ್ನುವ ಕುರಿತು ಸ್ಥಳೀಯ ಸಿಸಿಟಿವಿ ದಾಖಲೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ವಿಧಾನ ಸಭಾಧ್ಯಕ್ಷರಿಗೆ ಚಪ್ಪಲಿ ಎಸೆದ ಶಾಸಕರು: ಮೂವರು ಬಿಜೆಪಿ ಶಾಸಕರು ಅಮಾನತು!

Advertisement

Udayavani is now on Telegram. Click here to join our channel and stay updated with the latest news.

Next