Advertisement

ಅಬ್ಬಾ ಕೊನೆಗೂ ಬ್ಯಾನ್ ಆಯ್ತು !….ಪಬ್ ಜಿಯಿಂದ ಆದ ಅನಾಹುತ ಒಂದಲ್ಲ, ಎರಡಲ್ಲಾ…

05:10 PM Sep 03, 2020 | Mithun PG |

ನವದೆಹಲಿ: ಕೆಂದ್ರ ಸರ್ಕಾರ ಬುಧವಾರ ಪಬ್ ಜಿ ಸೇರಿದಂತೆ 118 ಆ್ಯಪ್ ಗಳನ್ನು ಬ್ಯಾನ್ ಮಾಡಿದಾಗ ಗೇಮಿಂಗ್ ಉದ್ಯಮ ಅಕ್ಷರಶಃ ತತ್ತರಿಸಿಹೋಗಿತ್ತು. ಮಾತ್ರವಲ್ಲದೆ ಪಬ್ ಆಡುತ್ತಿದ್ದ ಅನೇಕರು ಶಾಕ್ ಗೆ ಒಳಗಾಗಿದ್ದರು. ಅದಾಗ್ಯೂ ಇದೊಂದು ನಿರೀಕ್ಷಿತ ಬೆಳವಣಿಗೆಯಾಗಿದ್ದು, ಕಳೆದ ಬಾರಿ ಟಿಕ್ ಟಾಕ್ ಸೇರಿದಂತೆ 58 ಅಪ್ಲಿಕೇಶನ್ ಗಳು ನಿಷೇಧವಾದಾಗ, ಪಬ್ ಜಿ ಕೂಡ ಬ್ಯಾನ್ ಆಗುವ ಸಾಧ್ಯತೆಯಿದೆ ಎಂದು ಅನೇಕ ಕಡೆ ಉಲ್ಲೇಖವಾಗಿದ್ದವು.

Advertisement

ಪ್ರಮುಖವಾಗಿ ಚೀನಾದ ಟೆನ್ಸೆಂಟ್ ಕಂಪೆನಿಯು ಪಬ್ ಜಿ ಯ ಮಾಲಿಕತ್ವವನ್ನು ಹೊಂದಿತ್ತು. ಈ ಗೇಮಿಂಗ್ ಆ್ಯಪ್ 2017 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ನಮ್ಮ ದೇಶದಲ್ಲಿ ಅತೀ ಹೆಚ್ಚು ಡೌನ್ ಲೋಡ್ ಆದ ಮತ್ತು ಅತೀ ಹೆಚ್ಚು ಆಡಲ್ಪಟ್ಟ ಗೇಮ್ ಎಂದರೇ ಅದು ಪಬ್ ಜಿ ಮಾತ್ರ. ಅಂದರೇ ಭಾರತದಲ್ಲಿ ಸುಮಾರು 50 ಮಿಲಿಯನ್ ಪಬ್ ಜಿ ಬಳಕೆದಾರರರಿದ್ದು, ಇದರಲ್ಲಿ 35 ಮಿಲಿಯನ್ ಸಕ್ರೀಯ ಬಳಕೆದಾರರಿದ್ದರು.

ಗಮನಿಸಬೇಕಾದ ಅಂಶವೆಂದರೇ ಪಬ್ ಜೀ ಎಷ್ಷು ಬೇಗ ಜನಪ್ರಿಯವಾಗಿತ್ತೋ ಅಷ್ಟೇ ಪ್ರಮಾಣದ ದುರಂತಗಳಿಗೂ ಕಾರಣವಾಗಿತ್ತು. ಇದರರಲ್ಲಿ ಅನೇಕ ಘಟನೆಗಳು ಪತ್ರಿಕೆಗಳ ಹೆಡ್ ಲೈನ್ಸ್ ಆಗಿವೆ. ಈ ಗೇಮ್ ಪರಿಣಾಮವಾಗಿ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದರು, ಇತರರ ಹತ್ಯೆಗೈದಿದ್ದರು. ಮಾತ್ರವಲ್ಲದೆ ಗೇಮ್ ಆಡುತ್ತಾ ಸ್ವತಃ ತಾವೇ ಅಪಘಾತಕ್ಕೊಳಗಾಗಿ ಪ್ರಾಣತ್ಯೆಜಿಸಿದ ಉದಾಹರಣೆಗಳು ಇವೆ.

ಪಬ್ ಜಿ ಗೇಮ್ ನಿಂದ ಅತೀ ಹೆಚ್ಚು ಆತಂಕಕ್ಕೆ ಒಳಗಾದವರು ಎಂದರೇ ಭಾರತೀಯ ಪೋಷಕರು. ತಮ್ಮ ಮಕ್ಕಳ ಭವಿಷ್ಯಕ್ಕೆ ಮಾತ್ರವಲ್ಲದೆ ಜೀವಕ್ಕೆ ಈ ಗೇಮ್ ಎರವಾಗುತ್ತಿರುವುದನ್ನು ಗಮನಿಸಿ ಏನೂ ಮಾಡಲಾಗದ ಸ್ಥಿಯಲ್ಲಿದ್ದರು. ಆದರೇ ಈ ಗೇಮ್ ಡಿಸೈನ್ ಆಗಿದ್ದು ಕೇವಲ ಯುವ ಬಳಕೆದಾರರನ್ನು ಮನರಂಜನೆಗೊಳಪಡಿಸಬೇಕು ಎಂಬ ಉದ್ದೇಶದಿಂದ ಮಾತ್ರ. ಆದರೇ ಚಕಿತಗೊಳಿಸುವ ಮಾದರಿಯಲ್ಲಿ ಈ ಉದ್ದೇಶ ಹಲವು ಅನಾಹುತಗಳಿಗೆ ಕಾರಣವಾಗಿದ್ದವು.

Advertisement

ಪಬ್ ಜಿ ಯಿಂದ ಆದ ಕೆಲವೊಂದು ಅನಾಹುತಗಳ ಪಟ್ಟಿ ಇಲ್ಲಿದೆ.

ಘಟನೆ 1: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ‘ರಾಷ್ಟ್ರೀಯ ಆದಾಯ ಮತ್ತು ಜಿಡಿಪಿಗೆ” ಉತ್ತರ ಬರೆಯುವ ಬದಲು ಪಬ್ ಜಿ ಆಟದ ಸಾಧ್ಯತೆ ಮತ್ತು ಅಸಾಧ್ಯತೆ ಕುರಿತು ಬರೆದಿದ್ದ. ಇದೇ ಯುವಕ SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದು ತೇರ್ಗಡೆ ಹೊಂದಿದ್ದ. ಹೀಗಾಗಿ ಒಂದು ಪಬ್ ಜಿ ಆಟ ಆತನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿತ್ತು. ಆತನೇ ಹೇಳುವಂತೆ ‘ಓದಲು ತೊಡಗಿದರು ನನ್ನ ಗಮನವೆಲ್ಲಾ ಪಬ್ ಜಿ ಕಡೆ ಹೋಗುತ್ತಿತ್ತು.  ಕೆಲವೇ ದಿನಗಳಲ್ಲಿ ಅದೊಂದು ಗೀಳಾಗಿ ಬದಲಾಗಿತ್ತು. ಕಾಲಕ್ರಮೇಣ ತರಗತಿಗೆ ಬಂಕ್ ಹಾಕಿ, ಎಲ್ಲಾದರೂ ಪಬ್ ಜಿ ಆಡಲೆಂದು ಸ್ಥಳ ಹುಡುಕುತ್ತಿದ್ದೆ. ಈ ಗೇಮ್ ಆಡಲಿಲ್ಲವಾದರೇ ಕೋಪ ಬರುತ್ತಿತ್ತು. ಒಂದೊಮ್ಮೆ ಪೋಷಕರು ಮೊಬೈಲ್ ಕಿತ್ತುಕೊಂಡರು. ಆದರೇ ಪರೀಕ್ಷಾ ಸಂದರ್ಭದಲ್ಲೂ ಗೇಮ್ ನೆನಪಿಗೆ ಬರುತ್ತಿದ್ದರಿಂದ ಅದನ್ನೇ ಬರೆದಿದ್ದೇನೆ ಎಂದು ಸಮಜಾಯಿಸಿ ನೀಡಿದ್ದಾನೆ.

ಘಟನೆ 2: ಮಾರ್ಚ್ 2019ರಲ್ಲಿ ಪಬ್ ಜೀ ಆಟದಲ್ಲಿ ತಲ್ಲೀನನಾಗಿದ್ದ 25 ವರ್ಷದ ಯುವಕನೊಬ್ಬ ನೀರಿನ ಬಾಟಲ್ ಎಂದು ಭಾವಿಸಿ ಆ್ಯಸಿಡ್ ಕುಡಿದಿದ್ದ. ಈತ ಬದುಕುಳಿದನಾದರೂ 5 ದಿನಗಳ ಕಾಲ ಏನನ್ನೂ ಸೇವಿಸಲು ಆಗಿರಲಿಲ್ಲ. ಮಾತ್ರವಲ್ಲದೆ ಇದು ಅಲ್ಸರ್ ಗೂ ಕಾರಣವಾಗಿತ್ತು. ಆಸ್ಪತ್ರೆಯಲ್ಲೂ ತನ್ನ ಗೀಳು ಬಿಡದ ಈ ಯುವಕ ಅಲ್ಲೂ ಪಬ್ ಜಿ ಆಟದಲ್ಲಿ ಮಗ್ನನಾಗಿದ್ದ ಎಂದು ವರದಿ ತಿಳಿಸಿದೆ.

ಘಟನೆ-3: ಕಳೆದ ವರ್ಷೆದ ಜನವರಿಯಲ್ಲಿ ಜಮ್ಮುವಿನ ಫಿಟ್ನೆಸ್ ತರಬೇತುದಾರನೊಬ್ಬ ಪಬ್ ಜಿ ಗೀಳಿಗೆ ತುತ್ತಾಗಿ ತನ್ನನ್ನು ತಾನೇ ಗಾಯಗೊಳಿಸಲು ಆರಂಭಿಸಿದ. ಅಂದರೇ ಈತ ಗೇಮ್ ಗೆ ಯಾವ ರೀತಿ ಅಡಿಕ್ಟ್ ಆಗಿದ್ದಾನೆಂದರೇ ಆಟವಾಡುವ ಸಮಯದಲ್ಲಿ ತನಗೆ ತಾನೇ ಹೊಡೆದುಕೊಳ್ಳುತ್ತಿದ್ದ. ಪರಿಣಾಮವಾಗಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಮಾತ್ರವಲ್ಲದೆ ಪಬ್ ಜಿ ಪರಿಣಾಮವಾಗಿ ತನ್ನ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದ.

ಘಟನೆ-4: ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಇಬ್ಬರು ಯುವಕರು ರೈಲಿನಲ್ಲಿ ಪಬ್ ಜಿ ಆಡುತ್ತಾ ಆಡುತ್ತಾ ಇಳಿದಿದ್ದರು. ಮಾತ್ರವಲ್ಲದೆ ಆಟದಲ್ಲೆ ಮೈಮರೆತು ಮತ್ತೊಂದು ರೈಲ್ವೇ ಟ್ರ್ಯಾಕ್ ಕಡೆಗೆ ಕತ್ತಲಿನಲ್ಲಿ ತೆರಳಿದ್ದರು. ಆಗಲೇ ಬಂದ ಅಮದಾಬಾದ್ ಆಜ್ಮೀರ್ ಎಕ್ಸ್ ಪ್ರೆಸ್ ರೈಲು ಇವರ ಮೇಲೆಯೇ ಹರಿದು ಹೋಗಿತ್ತು. ಮೃತಬಾಲಕರನ್ನು ನಾಗೇಶ್ ಗೋರೆ(24), ಅಣ್ಣಪೂರ್ನೆ(22) ಎಂದು ಗುರುತಿಸಲಾಗಿತ್ತು.

ಘಟನೆ-5:  15 ವರ್ಷದ ಬಾಲಕನೊಬ್ಬ ತನ್ನ ಹಿರಿಯ ಸಹೋದರನನ್ನೇ ಅಮಾನುಷವಾಗಿ ಇರಿದಿದ್ದ. ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿತ್ತು.  ಪಬ್ ಜಿ ಆಡುವಾಗ ತಡೆದಿದ್ದಕ್ಕಾಗಿ 15 ವರ್ಷದ ಬಾಲಕ ತನ್ನ ಅಣ್ಣನ ತಲೆಯನ್ನು ಗೊಡೆಗೆ ಅಪ್ಪಳಿಸಿ, ಕತ್ತರಿಯಿಂದ ದೇಹದ ಹಲವು ಭಾಗಗಳಿಗೆ ಇರಿದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next