Advertisement
ಜತೆಗೆ ಇವುಗಳಿಗೆ ಪ್ರತಿ ದಿನ ಬೆಳಗ್ಗೆ 10ರಿಂದ ರಾತ್ರಿ 11 ಗಂಟೆವರೆಗೆ ಮಾತ್ರ ತೆರೆಯಲು ಅವಕಾಶ ಕೊಡುವ ನಿಟ್ಟಿನಲ್ಲಿ ನಿಯಮ ರೂಪಿಸಬೇಕು. ಅಲ್ಲದೇ ಅಲ್ಲಿಗೆ ಭೇಟಿ ನೀಡುವ ಸಾರ್ವಜನಿಕರ ರಕ್ಷಣೆಯ ಪೂರ್ಣ ಜವಾಬ್ದಾರಿ ಆಯಾ ಕೇಂದ್ರಗಳನ್ನು ನಡೆಸುವ ಮಾಲೀಕರ ಹೊಣೆ ಎಂಬ ಶರತ್ತಿನೊಂದಿಗೆ ಪರವಾನಗಿ ನೀಡಬೇಕು. ಶರತ್ತು ಉಲ್ಲಂ ಸಿದ ಕೇಂದ್ರಗಳ ಪರವಾನಗಿ ರದ್ದುಗೊಳಿಸಿ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಐಟಿ-ಬಿಟಿ ಸಂಸ್ಥೆಗಳಲ್ಲಿ ಕೆಲಸ ಮಾಡವ ಹಾಗೂ ಇನ್ನಿತರ ಕಾರಣಗಳಿಂದ ರಾತ್ರಿ 10 ಗಂಟೆ ನಂತರ ಹೆಣ್ಣು ಮಕ್ಕಳನ್ನು ಕೊಂಡೊಯ್ಯುವ ಖಾಸಗಿ ಬಾಡಿಗೆ ಕ್ಯಾಬ್‌ಗಳ ತಪಾಸಣೆ ಹಾಗೂ ನಿಗಾವಹಿಸುವ ಪೊಲೀಸ್ ಬೀಟ್ ವ್ಯವಸ್ಥೆ ಜಾರಿಗೆ ತರಬೇಕು. ಚಾಲಕರು ಅಥವಾ ಇತರ ಸಿಬ್ಬಂದಿಯಿಂದ ದೃಷ್ಕೃತ್ಯಗಳು ನಡೆದರೆ ವಾಹನಗಳ ಮಾಲೀಕರು ಹಾಗೂ ಟ್ರಾವೆಲ್ಸ್ ಕಚೇರಿ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲು ಕಾನೂನು ರೂಪಿಸಬೇಕು. ಐಟಿ, ಬಿಟಿ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಗೆ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು. ನಗರದ ಎಲ್ಲ “ಪೇಯಿಂಗ್ ಗೆಸ್ಟ್’ (ಪಿ.ಜಿ)ಗಳ ಮಾಹಿತಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಲ್ಲಿಸುವುದು ಕಡ್ಡಾಯಗೊಳಿಸಬೇಕು. ಪಿ.ಜಿ. ಕೇಂದ್ರಗಳಲ್ಲಿ ಭದ್ರತಾ ವ್ಯವಸ್ಥೆ ಕಡ್ಡಾಯ, ಹೆಣ್ಣು ಮಕ್ಕಳ ಮೇಲೆ ಶೋಷಣೆ, ಲೈಂಗಿಕ ದೌರ್ಜನ್ಯ ನಡೆದರೆ ಕೃತ್ಯ ಎಸಗಿದವರ ಜತೆಗೆ ಪಿ.ಜಿ. ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ನಿಯಮಗಳನ್ನು ರೂಪಿಸಬೇಕು. ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿದೆ. Advertisement
ಪಬ್, ಕೆಫೆಗಳ ಮೇಲೆ 24 ಗಂಟೆ ನಿಗಾಗೆ ಶಿಫಾರಸು
10:21 AM Mar 24, 2018 | |
Advertisement
Udayavani is now on Telegram. Click here to join our channel and stay updated with the latest news.