Advertisement

ಸೆಲ್ಫಿ ವಿಡಿಯೋ ಮಾಡಿಟ್ಟು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

06:35 AM Jan 13, 2019 | Team Udayavani |

ಮೈಸೂರು: ಜೀವನದಲ್ಲಿ  ಏನನ್ನೂ ಸಾಧಿಸಲು ಆಗಲಿಲ್ಲ ಎಂದು ಮನನೊಂದ ದ್ವಿತೀಯ ಪಿಯುಸಿ  ವಿದ್ಯಾರ್ಥಿನಿಯೊಬ್ಬಳು ಮನನೊಂದು ಸೆಲ್ಫಿ  ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನಿಮಂಟಪದ ಕಾವೇರಿನಗರದಲ್ಲಿ ನಡೆದಿದೆ. 

Advertisement

ಯಾಸ್ಮಿನ್‌ ತಾಜ್‌ (18) ಎನ್ನುವ ವಿದ್ಯಾರ್ಥಿನಿ ತಲೆಗೆ ಓದು ಹತ್ತುತ್ತಿಲ್ಲ ಎಂದು ಖನ್ನತೆಗೆ ಒಳಗಾಗಿದ್ದಳು. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾಳೆ. ವಿಡಿಯೋವನ್ನು ಶೇರ್‌ ಮಾಡುವಂತೆ ಮನವಿ ಮಾಡಿದ್ದಾಳೆ.

ನನಗೆ ಮುಂದೆ ಗಾಯಕಿ ಇಲ್ಲ ವಕೀಲೆಯಾಗುವ ಆಸೆ ಇತ್ತು. ದೇವರು ನನ್ನ ಆಸೆ ಪೂರೈಸಲಿಲ್ಲ. ನನಗೆ ಆರೋಗ್ಯ ಸಮಸ್ಯೆ ಕೂಡ ಇದೆ. ಪ್ರಿಪರೇಟರಿ ಪರೀಕ್ಷೆಗೆ ಹಾಲ್‌ ಟಿಕೆಟ್‌ ಕೂಡ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾಳೆ. 

ನಾನು ಬದುಕಿದ್ದ ವೇಳೆ ಯಾರೂ ನನ್ನನ್ನು ಇಷ್ಟಪಡಲಿಲ್ಲ. ಸತ್ತ ಮೇಲಾದರೂ ಈ ವಿಡಿಯೋ ಶೇರ್‌ ಮಾಡಿ ಲೈಕ್‌ ಮಾಡಿ ಎಂದು ತೆಲುಗು ಭಾಷೆಯಲ್ಲಿ ಕೇಳಿಕೊಂಡಿದ್ದಾಳೆ. 

ಮೇಟಗಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next