ಬೆಂಗಳೂರು: ರಾಜ್ಯಾದ್ಯಂತ ಫೆ. 17ರಿಂದ 25ರೊಳಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ನಿಗದಿಯಾಗಿದೆ.
ನಿಗದಿತ ಸಮಯದೊಳಗೆ ಪರೀಕ್ಷೆಗಳನ್ನು ಪೂರ್ಣಗೊಳಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಕೆಲವು ಕಾಲೇಜುಗಳಲ್ಲಿ ಹಿಜಾಬ್- ಕೇಸರಿ ಶಾಲು ವಿವಾದ ನಡೆಯುತ್ತಿದೆ. ವಿವಾದಗಳಿಗೆ ಆಸ್ಪದ ನೀಡದೆ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬೇಕು. ಅನಂತರ ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ನಡೆಸಬೇಕಿದೆ.
ಹೀಗಾಗಿ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿಯಾಗಿ ಅನುಸರಿಸುವಂತೆ ಮೌಖೀಕ ಆದೇಶ ನೀಡಲಾಗಿದೆ.
ಇದನ್ನೂ ಓದಿ:20 ನಗರಗಳಲ್ಲಿ ಚೇತಕ್ ನೆಟ್‌ವರ್ಕ್; 2 ಸಾವಿರ ರೂ. ಪಾವತಿ ಮಾಡಿ ಬುಕಿಂಗ್‌ಗೆ ಅವಕಾಶ