Advertisement

ಪಿಯು ಆನ್‌ಲೈನ್‌ ಪೋರ್ಟಲ್‌

10:34 PM Jun 02, 2019 | Lakshmi GovindaRaj |

ಬೆಂಗಳೂರು: ಎಸ್ಸೆಸ್ಸೆಲ್ಸಿ ಪೂರೈಸಿದ ಹಲವು ವಿದ್ಯಾರ್ಥಿಗಳು ಪಿಯುಗೆ ಸೇರುವ ಸಂದರ್ಭದಲ್ಲಿ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆ ಹೊಂದುತ್ತಾರೆ. ಅಲ್ಲದೆ, ಪ್ರಥಮ ಪಿಯು ಪೂರೈಸಿದ ಜಿಲ್ಲೆ ಅಥವಾ ಕಾಲೇಜಿನಲ್ಲೇ ದ್ವಿತೀಯ ಪಿಯು ಪೂರೈಸಲು ಸಾಧ್ಯವಾಗದೇ ಇದ್ದಾಗ ಅನಿವಾರ್ಯವಾಗಿ ಬೇರೆ ಜಿಲ್ಲೆಗೆ ಹೋಗಬೇಕಾಗುತ್ತದೆ.

Advertisement

ಇಂತಹ ಸಂದರ್ಭದಲ್ಲಿ ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ವರ್ಗಾವಣೆ ಪತ್ರವನ್ನು ನೀಡಬೇಕಾಗುತ್ತದೆ. ಪ್ರಥಮ ಪಿಯು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆನ್‌ಲೈನ್‌ ಪೋರ್ಟಲ್‌ನ್ನು ಸಮರ್ಪಕವಾಗಿ ಬಳಸುವ ಮೂಲಕ ಕಾಲೇಜು ಬದಲಾವಣೆ, ವರ್ಗಾವಣೆ ಪತ್ರ ಸೇರಿದಂತೆ ಎಲ್ಲ ಮಾಹಿತಿಯನ್ನು ಪಿಯುಸಿ ಆನ್‌ಲೈನ್‌ ಪೋರ್ಟಲ್‌ನಲ್ಲಿಯೇ ಅಪ್‌ಲೋಡ್‌ ಮಾಡಬಹುದಾಗಿದೆ.

ಪಿಯು ಇಲಾಖೆಯ ವೆಬ್‌ಸೈಟ್‌ //pue.kar.nic.in/ ತೆರೆದರೆ ಪಿಯು ಆನ್‌ಲೈನ್‌ ಪೋರ್ಟಲ್‌ ಸಿಗುತ್ತದೆ. ಅದರಲ್ಲಿ ಎಸ್‌ಎಟಿಎಸ್‌ ಆನ್‌ಲೈನ್‌ ಅಪ್‌ಡೇಟ್‌ ಬಗ್ಗೆ ಸಾಮಾನ್ಯ ಸೂಚನೆಗಳಿವೆ. ಎಸ್‌ಎಟಿಎಸ್‌ ಮೂಲಕ ಕಾಲೇಜು ಬದಲಾವಣೆಯ ಜತೆಗೆ ಕಾಲೇಜಿನ ನೋಂದಣಿ, ವಿದ್ಯಾರ್ಥಿಗಳ ದಾಖಲಾತಿಯ ಮಾಹಿತಿಯನ್ನು ಹೇಗೆ ಭರ್ತಿ ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ಇದೆ.

ವಿದ್ಯಾರ್ಥಿಗಳಿಗಿಂತ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಇದರಿಂದ ಹೆಚ್ಚು ಅನುಕೂಲವಿದೆ. ಅಲ್ಲದೆ, ಎಸ್‌ಎಟಿಎಸ್‌ ಮೂಲಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾಹಿತಿಯನ್ನು ಸುಲಭವಾಗಿ ಪಿಯು ಕಾಲೇಜುಗಳು ಅಧಿಕೃತವಾಗಿ ಯುಸರ್‌ ಐಡಿ ಹಾಗೂ ಪಾಸ್‌ವರ್ಡ್‌ ಬಳಸಿ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next