Advertisement

ಒತ್ತಡಕ್ಕೆ ಮಣಿದ ಸರ್ಕಾರ: ಪಿಯು ರಜಾ ಅವಧಿ ವಿಸ್ತರಣೆ

12:30 AM Mar 20, 2019 | |

 ಬೆಂಗಳೂರು: ಸರ್ಕಾರಿ ಪದವಿಪೂರ್ವ ಉಪನ್ಯಾಸಕರ ಸಂಘದ ಒತ್ತಡಕ್ಕೆ ಮಣಿದ ಸರ್ಕಾರ ಪಿಯು ಇಲಾಖೆಯ ರಜಾ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

Advertisement

ಮಾ.20ರಿಂದ ಮೇ 19ರವರೆಗೂ ರಜೆ ಇರಲಿದ್ದು, ಮೇ 20ರಿಂದ ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ. ಈ ಹಿಂದೆ ಮೇ 2ರ ಅಥವಾ 6ರಿಂದ ಪಿಯು ತರಗತಿ ಆರಂಭಿಸಲು ಉದ್ದೇಶಿಸಿದ್ದ ಸರ್ಕಾರದ ನಿಲುವಿನ ವಿರುದ್ಧ  ಉಪನ್ಯಾಸಕರ ಸಂಘ ಪ್ರತಿಭಟನೆಗೆ ಮುಂದಾಗಿತ್ತು. ಈಗ ಮೌಲ್ಯಮಾಪನ ಬಹಿಷ್ಕಾರ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆಯುವ ಸಾಧ್ಯತೆ ಇದ್ದು, ಮಾ.20ರಂದು ನಡೆಯುವ ಸಂಘದ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಂಘ ತಿಳಿಸಿದೆ.

ಉಚಿತ ಪ್ರಯಾಣ: ಎಸ್ಸೆಸ್ಸೆಲ್ಸಿ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್‌ ಪ್ರಯಾಣ ಸೇವೆ ಕಲ್ಪಿಸಿದೆ. ಮಾ.21ರಿಂದ ಏಪ್ರಿಲ್‌ 4ರವರೆಗೆ ಈ ಸೇವೆ ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next