Advertisement
ರಾಜ್ಯದಲ್ಲಿ 1,250ಕ್ಕೂ ಅಧಿಕ ಸರಕಾರಿ ಪದವಿಪೂರ್ವ ಕಾಲೇಜುಗಳಿದ್ದು, 3,267 ಅತಿಥಿ ಉಪನ್ಯಾಸಕರಿದ್ದಾರೆ. ಅವರಿಗೆ ಮಾಸಿಕ 9 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ 9 ಸಾವಿರ ರೂ. ಯಾವುದಕ್ಕೂ ಸಾಲದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದರೂ ಸರಕಾರ ಪರಿಷ್ಕರಣೆ ಮಾಡುತ್ತಿಲ್ಲ.
ಎಷ್ಟಿತ್ತು? ಈಗ ಎಷ್ಟಾಗಿದೆ?
ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಮಾಸಿಕ 15 ಸಾವಿರ ರೂ.ನೀಡುತ್ತಿದ್ದರು. ಕಳೆದ ವರ್ಷ ರಾಜ್ಯ ಸರಕಾರದ ಇವರ ಗೌರವಧವನ್ನು ಪರಿಷ್ಕರಿಸಿದೆ. ಅದರಂತೆ ಐದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಅತಿಥಿ ಉಪನ್ಯಾಸಕರಾಗಿದ್ದು ಯುಜಿಸಿಯ ವಿದ್ಯಾರ್ಹತೆ (ನೆಟ್, ಪಿಎಚ್.ಡಿ ಇತ್ಯಾದಿ) ಹೊಂದಿದ್ದರೆ 32 ಸಾವಿರ ರೂ., ಐದು ವರ್ಷಕ್ಕಿಂತಲೂ ಹೆಚ್ಚುಕಾಲ ಅತಿಥಿ ಉಪನ್ಯಾಸಕರಾಗಿದ್ದು ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದಿದ್ದರೆ 28 ಸಾವಿರ ರೂ. ಹಾಗೂ 5 ವರ್ಷಕ್ಕಿಂತ ಕಡಿಮೆ ಅನುಭವ, ಯುಜಿಸಿ ವಿದ್ಯಾರ್ಹತೆ ಇಲ್ಲದೇ ಇದ್ದರೆ 26 ಸಾವಿರ ರೂ. ನೀಡಲಾಗುತ್ತದೆ.
Related Articles
Advertisement
ಬೇಡಿಕೆ ಏನು?ಪದವಿ ಹಾಗೂ ಶಾಲೆಯ ಅತಿಥಿ ಉಪನ್ಯಾಸಕ, ಶಿಕ್ಷಕರಿಗೆ ಈಗಾಗಲೇ ಗೌರವ ಧನ ಪರಿಷ್ಕರಣೆ ಮಾಡಲಾಗಿದೆ. ಆದರೆ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಕಳೆದ ಐದಾರು ವರ್ಷದಿಂದ ಒಮ್ಮೆಯೂ ವೇತನ ಪರಿಷ್ಕರಣೆ ಮಾಡಿಲ್ಲ. ಶೈಕ್ಷಣಿಕ ಕಾರ್ಯಭಾರದ ಆಧಾರದಲ್ಲಿ ತರಗತಿಗಳನ್ನು ನಡೆಸುವ ನಮಗೆ ಸರಕಾರದ ಕನಿಷ್ಠ ವೇತನ ನೀತಿಯಂತೆಯೂ ವೇತನ ಸಿಗುತ್ತಿಲ್ಲ. ಹೀಗಾಗಿ ಕನಿಷ್ಠ ತಿಂಗಳಿಗೆ 20 ಸಾವಿರ ರೂ. ಗೌರವಧನ ನೀಡಬೇಕು ಎಂಬ ಬೇಡಿಕೆಯನ್ನು ಅತಿಥಿ ಉಪನ್ಯಾಸಕರು ಸರಕಾರದ ಮುಂದಿಟ್ಟಿದ್ದಾರೆ. ಚರ್ಚೆ ನಡೆಯುತ್ತಿದೆ
ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಸಂಬಂಧ ಸರಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಈವರೆಗೆ ಯಾವುದೇ ನಿರ್ಧಾರ ಆಗಿಲ್ಲ. ಈಗಾಗಲೇ ಪದವಿ ಹಾಗೂ ಶಾಲೆಯ ಅತಿಥಿ ಶಿಕ್ಷಕ, ಉಪನ್ಯಾಸಕರ ಗೌರವಧನ ಪರಿಷ್ಕರಿಸಿರುವುದರಿಂದ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರ ಗೌರವಧನವನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸಬೇಕು ಎಂದು ಹಲವು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಅನೇಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ತರಗತಿ ನಡೆಸುವುದೇ ಕಷ್ಟ. ಕನಿಷ್ಠ 20 ಸಾವಿರ ರೂ. ಗೌರವಧನ ನೀಡಲು ತತ್‌ಕ್ಷಣವೇ ಆದೇಶ ಹೊರಡಿಸುವಂತೆ ಎರಡು ದಿನದೊಳಗೆ ಸರಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ.
– ಎ.ಎಚ್. ನಿಂಗೇಗೌಡ, ಅಧ್ಯಕ್ಷ,
ಸರಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘ – ರಾಜು ಖಾರ್ವಿ ಕೊಡೇರಿ