Advertisement

ಪಿಯು ಪರೀಕ್ಷೆ: ಓರ್ವ ಡಿಬಾರ್‌

08:33 AM Mar 11, 2017 | |

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಎರಡನೇ ದಿನವಾದ ಶುಕ್ರವಾರ ಓರ್ವ ವಿದ್ಯಾರ್ಥಿ ಡಿಬಾರ್‌ ಆಗಿರುವ ಪ್ರಕರಣ 
ಹೊರತುಪಡಿಸಿದರೆ ಬೇರೆ ಯಾವುದೇ  ಗೊಂದಲಗಳಿಲ್ಲದೆ ರಾಜ್ಯಾದ್ಯಂತ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

Advertisement

ನಕಲು ಮಾಡುತ್ತಿದ್ದ ತುಮಕೂರಿನ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಲಾಗಿದೆ. ಇನ್ನು ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡಿದ್ದ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಮೊದಲೇ ಘೋಷಿಸಿಕೊಂಡಿದ್ದಂತೆ ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 

ಎರಡನೇ ದಿನವಾದ ಶುಕ್ರವಾರ ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ವಿಷಯಗಳ ಪರೀಕ್ಷೆ ನಡೆದವು. ಮೊದಲ ದಿನದ ಪರೀಕ್ಷೆಗೆ ಪೂರೈಕೆ ಮಾಡಿದಂತೆ 2ನೇ ದಿನವೂ ಜಿಲ್ಲಾ ಖಜಾನೆಯಿಂದಲೇ ಆಯಾ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಪ್ರಶ್ನೆಪತ್ರಿಕೆಗಳ ಬಂಡಲ್‌ಗ‌ಳನ್ನು ರವಾನಿಸಲಾಯಿತು. ನಿಗದಿತ  ಅವಧಿಗೆ ಸರಿಯಾಗಿ ಪರೀಕ್ಷೆಗಳು  ಆರಂಭಗೊಂಡಿದ್ದು, ಪರೀಕ್ಷಾ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಪ್ರಶ್ನೆಪತ್ರಿಕೆಗಳು ತಲುಪಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾ.11ರಂದು ತರ್ಕಶಾಸ್ತ್ರ, ಶಿಕ್ಷಣ ಮತ್ತು ಸಾಮಾನ್ಯ ಗಣಿತ ವಿಷಯಗಳ ಪರೀಕ್ಷೆ ನಡೆಯಲಿವೆ. ಯಾವುದೇ ಪರೀಕ್ಷಾ ಅಕ್ರಮಗಳು ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ಶುಕ್ರವಾರ ಕೂಡ ಪರೀಕ್ಷಾ ಕೇಂದ್ರಗಳ ಸುತ್ತಲು ಬಂದೋಬಸ್ತ್ ಮಾಡಲಾಗಿದ್ದು,
ಭದ್ರತೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಬ್ಬನೇ ಪರೀಕ್ಷಾರ್ಥಿ ಇಪ್ಪತ್ತು ಸಿಬ್ಬಂದಿ!
ಚನ್ನಗಿರಿ: ಶುಕ್ರವಾರ ನಡೆದ ದ್ವಿತೀಯ ಪಿಯು ಕಂಪ್ಯೂಟರ್‌ ಸೈನ್ಸ್‌ ಪರೀಕ್ಷೆಗೆ ಇಡೀ ತಾಲೂಕಿಗೆ ಹಾಜರಾಗಬೇಕಿದ್ದ ಓರ್ವ
ವಿದ್ಯಾರ್ಥಿಯೂ ಪರೀಕ್ಷೆಗೆ ಬಾರದೆ ಸಿಬ್ಬಂದಿ ಆತನಿಗಾಗಿ ಕಾದು ವಾಪಸ್‌ ತೆರಳಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ
ನಡೆದಿದೆ. ಕೆ.ರಾಘವೇಂದ್ರ ಪರೀಕ್ಷೆಗೆ ಗೈರಾದ ವಿದ್ಯಾರ್ಥಿ. ಈತ ಶುಕ್ರವಾರ ಪಟ್ಟಣದ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕಂಪ್ಯೂಟರ್‌ ಸೈನ್ಸ್‌ ಪರೀಕ್ಷೆ ಬರೆಯಬೇಕಿತ್ತು. ಆದರೆ, ಆತ ಪರೀಕ್ಷೆಗೆ ಬಾರದೆ ಇದ್ದುದ್ದರಿಂದ ಮುಖ್ಯ ಅಧೀಕ್ಷಕರು ಸೇರಿ 18 ಸಿಬ್ಬಂದಿ, ಇಬ್ಬರು ಪೊಲೀಸ್‌ ಪೇದೆಗಳು ಪರೀಕ್ಷಾ ಕೊಠಡಿಯಲ್ಲಿ ಸುಮ್ಮನೆ ಕುಳಿತು ವಾಪಸ್‌ ತೆರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next