ಗಂಗಾವತಿ :ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ವರ್ಷ ಪಿಯು ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಪಿಯು ಬೋರ್ಡ್ ಪಾಸ್ ಮಾಡಿದೆ .
ಸರ್ಕಾರದ ಆಫರನ್ನೂ ತಿರಸ್ಕರಿಸಿ ಗಂಗಾವತಿಯ ವೆಂಕಟೇಶ್ವರ ಪಿಯು ಕಾಲೇಜಿನ ಭೂಮಿಕಾ ಎನ್ನುವ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಪಿಯು ಬೋರ್ಡ್ ನ ಎಡವಟ್ಟಿನಿಂದಾಗಿ ರಸಾಯನಶಾಸ್ತ್ರದಲ್ಲಿ ಭೂಮಿಕಾ ಪಡೆದದ್ದು 40 ಅಂಕಗಳು ಆದರೆ ಅಧಿಕಾರಿಗಳ ಎಡವಟ್ಟಿನಿಂದ 4ಅಂಕ ಪಡೆದಿದ್ದಾಳೆ ಎಂದು ವಿದ್ಯಾರ್ಥಿನಿಯನ್ನು ಅನುತ್ತೀರ್ಣ ಮಾಡಲಾಗಿದೆ .
ಇದರಿಂದ ವಿದ್ಯಾರ್ಥಿನಿ ಮನನೊಂದು ಕೆಲವು ದಿನ ಊಟ ನಿದ್ರೆಯನ್ನು ಮಾಡದೆ ಹತಾಶೆ ಕೊಂಡಿದ್ದಳು .ಪಾಲಕರು ಪರೀಕ್ಷೆ ಬರೆದ ಉತ್ತರ ಪತ್ರಿಕೆಗಳ ಜೆರಾಕ್ಸ್ ಕಾಪಿಯನ್ನು ತರಿಸಿ ನೋಡಿದಾಗ ಪಾಲಕರಿಗೂ ದಿಗಿಲುಗೊಂಡಿದ್ದರು.
ಇದನ್ನೂ ಓದಿ:ಪಂಜಾಬ್ ನಲ್ಲಿ ಕೇಜ್ರಿವಾಲ್: ಎಲ್ಲರೂ ಹೆಮ್ಮೆ ಪಡುವ ಸಿಎಂ ಅಭ್ಯರ್ಥಿ ನೀಡುತ್ತೇವೆ
ಈ ಬಾರಿ ಕೋವಿಡ್ ಇರುವುದರಿಂದ ಪಿಯುಸಿ ದ್ವಿತೀಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳ ನಡೆಸದೆ ಕಾಲೇಜಿನವರು ಸರ್ಕಾರ ನಿಗದಿ ಮಾಡಿದ ನಿಯಮಗಳಂತೆ ಅಂಕಗಳನ್ನು ನೀಡಿದ್ದರು .ಪರೀಕ್ಷೆ ಬರೆದ ವಿದ್ಯಾರ್ಥಿನಿ ಭೂಮಿಕಾ 2ಸಾವಿರದ ಹತ್ತೊಂಬತ್ತು ಇಪ್ಪತ್ತು ರಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿ ವೃತ್ತಿಪರ ಕೋರ್ಸ್ ಗಳಿಗೆ ಹೋಗಲು ಲಾಂಗ್ ಟರ್ಮ್ ಕೋರ್ಸ್‌ನ್ನು ತೆಗೆದುಕೊಂಡಿದ್ದಳು .ಈ ಹಿನ್ನೆಲೆಯಲ್ಲಿ ಕೆಲ ತಾಂತ್ರಿಕ ತೊಂದರೆಯಿಂದ ಕಾಲೇಜಿನವರು ಪ್ರಾಯೋಗಿಕ ಅಂಕಗಳನ್ನು ಕೊಟ್ಟಿಲ್ಲ .ಜೊತೆಗೆ ಪರೀಕ್ಷೆಯನ್ನೂ ಬರೆದೆ(ಸರ್ಕಾರದ ಆಫರ್ ತಿರಸ್ಕರಿಸಿದ ) ಉತ್ತೀರ್ಣರಾಗುವ ಅವಕಾಶದಿಂದಲೂ ಭೂಮಿಕಾ ವಂಚಿತಳಾಗಿದ್ದಳು ಪಾಲಕರು 2021 ಸಾಲಿನಲ್ಲಿ ದ್ವಿತೀಯ ಪಿಯುಸಿ ವರ್ಷದ ವಿಜ್ಞಾನ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿನಿಗೆ ಪ್ರೇರಣೆ ನೀಡಿದ್ದರಿಂದ ಭೂಮಿಕಾ ಪರೀಕ್ಷೆ ಬರೆದಿದ್ದಳು ಈ ಪರೀಕ್ಷೆಯಲ್ಲಿ ಭೌತಶಾಸ್ತ್ರದಲ್ಲಿ 28ಅಂಕಗಳು ರಸಾಯನಶಾಸ್ತ್ರದಲ್ಲಿ 40 ಅಂಕ ಪಡೆದರೂ ಅಂಕಪಟ್ಟಿಯಲ್ಲಿ ಮಾತ್ರ 4ಅಂಕ ಎಂದು ನಮೂದಾಗಿದೆ .
ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ನೀಡದ ಕಾರಣ ಭೂಮಿಕಾ ಪರೀಕ್ಷೆ ಬರೆದು ಪಡೆದ ಅಂಕಗಳಲ್ಲಿ ಭೌತಶಾಸ್ತ್ರದಲ್ಲಿ 28ಅಂಕ ರಾಸಾಯನಶಾಸ್ತ್ರದಲ್ಲಿ ನಲವತ್ತು ಅಂಕಗಳು ಬಂದಿದ್ದರೂ ಭೂಮಿಕಾ ಅನುತ್ತೀರ್ಣರಾಗಿದ್ದು ಪಿಯು ಬೋರ್ಡ್ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಭೂಮಿಕಾ ತಂದೆ ಚಂದ್ರಶೇಖರಗೌಡ ತಾವರಗೇರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ವಿದ್ಯಾರ್ಥಿನಿಯ ಶಿಕ್ಷಣದ ಭವಿಷ್ಯದ ದೃಷ್ಟಿಯಿಂದ ಕೂಡಲೇ ಪಿಯು ಬೋರ್ಡ್ ಮಾಡಿರುವ ತಪ್ಪನ್ನು ತಿದ್ದುಪಡಿ ಮಾಡಿ ವಿದ್ಯಾರ್ಥಿನಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ .