Advertisement

PU Evaluation; 6 ಸಾವಿರ ಉಪನ್ಯಾಸಕರು ಗೈರು; ಕಠಿಣ ಕ್ರಮದ ಎಚ್ಚರಿಕೆ

11:09 PM Apr 05, 2023 | Team Udayavani |

ಬೆಂಗಳೂರು: ಚುನಾವಣ ಕರ್ತವ್ಯದ ಕಾರಣ ಹೊರತುಪಡಿಸಿ ದ್ವಿತೀಯ ಪಿಯುಸಿ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನಕ್ಕೆ ಗೈರು ಹಾಜರಾಗಿರುವ ಉಪನ್ಯಾಸಕರ ಮೇಲೆ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನೀಡಿದೆ.

Advertisement

ಬುಧವಾರ ಮೌಲ್ಯಮಾಪನದ ಮೊದಲ ದಿನವಾಗಿದ್ದು, ಆರು ಸಾವಿರ ಉಪನ್ಯಾಸಕರು ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಚುನಾವಣೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ಉಪನ್ಯಾಸಕರ ಮಾಹಿತಿ ಸಂಗ್ರಹಿಸಿದ್ದೇವೆ. ಈಗಾಗಲೇ ನಮ್ಮ ಜಿಲ್ಲಾ ಉಪನಿರ್ದೇಶಕರಿಗೆ ಗೈರಾದ ಉಪನ್ಯಾಸಕರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಗುರುವಾರದಿಂದ ಹಾಜರಾಗುವಂತೆ ಸೂಚಿಸಲು ತಿಳಿಸಿದ್ದೇವೆ. ಒಂದು ವೇಳೆ ಚುನಾವಣ ಕರ್ತವ್ಯ ಇರದಿದ್ದರೂ ಮೌಲ್ಯಮಾಪನಕ್ಕೆ ಹಾಜರಾಗಿಲ್ಲ ಎಂದರೆ ಕಠಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಆದ್ದರಿಂದ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮಂಡಳಿಯ ಮುಖ್ಯಸ್ಥ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ.

20 ದಿನಗಳ ಕಾಲ ನಡೆಯುವ ಮೌಲ್ಯಮಾಪನ ಕಾರ್ಯದಲ್ಲಿ 25 ಸಾವಿರ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿದೆ. ಒಟ್ಟಾರೆ 37 ವಿಷಯಗಳಲ್ಲಿ 7.27 ಲಕ್ಷ ವಿದ್ಯಾರ್ಥಿಗಳು ಬರೆದಿರುವ 45 ಲಕ್ಷ ಉತ್ತರ ಪತ್ರಿಕೆಗಳಿವೆ. ಮೌಲ್ಯಮಾಪನ ಮುಗಿಸಿ ಮೇ ಮೊದಲ ವಾರದಲ್ಲಿ ಫ‌ಲಿತಾಂಶ ಪ್ರಕಟಿಸುವ ಉದ್ದೇಶವನ್ನು ಮಂಡಳಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next