Advertisement
ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಲುಪುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಇದ್ದು, ಪ.ಪೂ. ಶಿಕ್ಷಣ ಇಲಾಖೆ ವತಿಯಿಂದ ಸೂಚಿಸಲಾದ ಮಾರ್ಗಗಳಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಶಿಕ್ಷಣ ಇಲಾಖೆ ನಿಯೋಜಿಸಿದ ನೋಡಲ್ ಅಧಿಕಾರಿಗಳ ಮಾರ್ಗದರ್ಶನದಂತೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಹಾಗೂ ಪರೀಕ್ಷೆ ಮುಗಿದ ಬಳಿಕ ವಾಪಸಾತಿಗೆ ಬಸ್ ವ್ಯವಸ್ಥೆ ಇದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದೆ.
ಬೆಳ್ತಂಗಡಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಪಿಯುಸಿ ಪರೀಕ್ಷೆ ಬರೆಯಲಿರುವ 4 ಸೆಂಟರ್‌ಗಳ ವ್ಯಾಪ್ತಿಗೆ ಒಳಪಟ್ಟಂತೆ ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಡಿಪೋದಿಂದ ಬಸ್ ಸೇವೆ ಒದಗಿಸಲಾಗಿದೆ.
Related Articles
Advertisement
ಬಿ.ಸಿ. ರೋಡ್ ಘಟಕದಿಂದಬಂಟ್ವಾಳ: ವಿದ್ಯಾರ್ಥಿಗಳಿಗೆ ಬಂಟ್ವಾಳ ತಾಲೂಕಿನ ವಿವಿಧ ಕೇಂದ್ರಗಳಿಗೆ ಆಗಮಿಸಲು ಕೆಎಸ್‌ಆರ್‌ಟಿಸಿ ಬಿ.ಸಿ. ರೋಡ್ ಘಟಕದಿಂದ ಒಟ್ಟು 20 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೂಟ್ ಬಸ್‌ಗಳನ್ನು ಕೂಡ ವ್ಯವಸ್ಥಿತ ರೀತಿಯಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ. ವಿಟ್ಲ ಕೇಂದ್ರಕ್ಕೆ ಬಾಯಾರು ಭಾಗದಿಂದ 2 ಬಸ್‌ಗಳು, ಸಾರಡ್ಕ ಭಾಗದಿಂದ 3 ಬಸ್‌ಗಳು, ಆನೆಕಲ್ ಭಾಗದಿಂದ 2 ಬಸ್‌ಗಳು, ಜತೆಗೆ ಪಕಳಕುಂಜ, ಮಿತ್ತನಡ್ಕ ಭಾಗದಿಂದ ಬಸ್‌ಗಳಿರುತ್ತವೆ. ಕುರ್ನಾಡು ಕೇಂದ್ರಕ್ಕೆ ಪುಣ್ಯಕೋಟಿ ನಗರದಿಂದ 2 ಬಸ್‌ಗಳು, ಪಾತೂರು ಭಾಗದಿಂದ ಒಂದು ಬಸ್, ವಾಮದಪದವು ಕೇಂದ್ರಕ್ಕೆ ಮಡಂತ್ಯಾರು-ಪುಂಜಾಲಕಟ್ಟೆ ಭಾಗದಿಂದ ಬಸ್‌ಗಳು, ಬಂಟ್ವಾಳ ಕೇಂದ್ರಕ್ಕೆ ವಗ್ಗ-ಕಕ್ಯಪದವು ಭಾಗದಿಂದ ಬಸ್‌ಗಳಿರುತ್ತವೆ.