Advertisement

ಮನಃಶಾಸ್ತ್ರ ಸರ್ಟಿಫಿಕೇಟ್‌ ಕೋರ್ಸ್‌ 

09:13 AM Mar 05, 2020 | mahesh |

ಯುಜಿ, ಗ್ರಾಜುಯೇಟ್‌ ವಿದ್ಯಾರ್ಥಿ ಗಳಿಗೆ ಸೈಕಾಲಜಿ (ಮನಃಶಾಸ್ತ್ರ) ಸರ್ಟಿಫಿ ಕೇಟ್‌ ಕೋರ್ಸ್‌ ಮಾಡುವ ಅವಕಾಶವಿದೆ. ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಶಾಲೆ, ಕೆರಿಯರ್‌ ಕೌನ್ಸೆಲಿಂಗ್‌ನಂಥ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತವೆ. ಇದರಲ್ಲಿ ಮನೋವಿಜ್ಞಾನ ಮತ್ತು ಸಂಶೋಧನ ಅಧ್ಯಯನ ಇರುತ್ತದೆ.

Advertisement

ಸರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಯುಜಿ ಸೈಕಾಲಜಿ ಸರ್ಟಿಫಿಕೇಟ್‌ ಕೋರ್ಸ್‌ ಸೈಕಾಲಜಿಯೇ ತರ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುತ್ತಿರುವ, ಸೈಕಾಲಜಿ ವಿಷಯದಲ್ಲಿ ಆಸಕ್ತಿಯಿರುವವರು ಮಾಡಬಹುದಾಗಿದೆ.

ಗ್ರಾಜುಯೇಟ್‌ ಸೈಕಾಲಜಿ ಕೋರ್ಸ್‌ ಗಳನ್ನು ಪ್ರಸ್ತುತ ಮಾಸ್ಟರ್ ಅಥವಾ ಡಾಕ್ಟರಲ್‌ ಹಂತದಲ್ಲಿ ಸೈಕಾಲಜಿ ಆರಿಸಿ ಕೊಂಡಿರುವವರು ಮಾಡಬಹುದಾಗಿದೆ.

ಯುಜಿ ಸರ್ಟಿಫಿಕೇಟ್‌ ಕೋರ್ಸ್‌:
ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಬ್ಯಾಚುಲರ್‌ ಡಿಗ್ರಿಯೊಂದಿಗೆ ಸೈಕಾಲಜಿ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಾಡುವ ಆಯ್ಕೆ ನೀಡುತ್ತವೆ. ಇದು 1-2 ವರ್ಷಗಳಲ್ಲಿ ಮುಗಿಸುವಂಥದ್ದಾಗಿರುತ್ತದೆ. ಇದರಲ್ಲಿ ಉಪನ್ಯಾಸ ಮತ್ತು ಸಂಶೋಧನ ಅಂಶಗ ಳಿರುತ್ತವೆ. ಬೇರೆ ವಿಷಯಗಳಲ್ಲಿ ಮೇಜರ್‌ ಮಾಡುತ್ತಿರುವವರಾಗಿದ್ದು, ಸೈಕಾಲಜಿಯಲ್ಲಿ ಆಸಕ್ತಿ ಹೊಂದಿದ್ದರೆ, ಮನೋವಿಜ್ಞಾನವನ್ನು ಅರಿತು ಮುಂದೆ ಅದರಲ್ಲಿ ಮೇಜರ್‌ ಮಾಡಬಯಸುವವರಿಗೆ ಉಪಯುಕ್ತ.

ಗ್ರಾಜುಯೇಟ್‌ ಸೈಕಾಲಜಿ ಕೋರ್ಸ್‌
ಇದರಲ್ಲಿ ವಿದ್ಯಾರ್ಥಿಯು ಸೈಕಾಲಜಿ ಯಲ್ಲಿ ಒಂದು ವಿಷಯವನ್ನು ಆಯ್ಕೆ ಮಾಡ ಬೇಕಾಗುತ್ತದೆ. ಸೈಕಾಲಜಿಯ ಶಾಖೆಗಳಾದ ಇಂಡಸ್ಟ್ರಿಯಲ್‌, ಆರ್ಗನೈಸೇಶನಲ್‌, ಕ್ಲಿನಿಕಲ್‌, ಸೋಶಲ್‌ ಇತ್ಯಾದಿಗಳಲ್ಲಿ ಒಂದನ್ನು ಆರಿಸಿಕೊಂಡು ಅಧ್ಯಯನ ಮಾಡಬೇಕಾಗುತ್ತದೆ. ಈ ಕೋರ್ಸ್‌ ನಲ್ಲಿ ಒಂದು ಇಂಟರ್ನ್ಶಿಪ್‌ ಅಥವಾ ಅಸಿಸ್ಟೆಂಟ್‌ಶಿಪ್‌ ಮಾಡಬೇಕಾಗಬಹುದು. ಡಾಕ್ಟರಲ್‌ ವಿದ್ಯಾರ್ಥಿಗಳು ಡೆಸಟೇìಶನ್‌ಗಳನ್ನು ಸಲ್ಲಿಸಬೇಕಾಗಬಹುದು.

Advertisement

ಯುಜಿ ಕೋರ್ಸ್‌ ವಿಷಯ
ಅಬಾ°ರ್ಮಲ್‌ ಸೈಕಾಲಜಿ
ಪ್ರಾಯೋಗಿಕ (ಎಕ್ಸ್‌ಪೆರಿಮೆಂಟಲ್‌) ಮನೋವಿಜ್ಞಾನ
ಗ್ರಹಿಕೆ ಮತ್ತು ಸಂವೇದನೆ (ಪರ್ಸೆಪ್ಶನ್‌, ಸೆನ್ಸೇಶನ್‌)
ಸೈಕಾಲಜಿ ಸ್ಟಾಟಿಸ್ಟಿಕ್ಸ್‌
ಸಂಶೋಧನ ವಿಧಾನಗಳು
ಸಾಮಾಜಿಕ ಮನಃಶಾಸ್ತ್ರ.
ಗ್ರಾಜುಯೇಟ್‌ ಸೈಕಾಲಜಿ ಸರ್ಟಿಫಿಕೇಟ್‌ ಕೋರ್ಸ್‌

ಡಾಕ್ಟರಲ್‌ ಕೋರ್ಸ್‌ನ ವಿಷಯಗಳು
 ಅಡಲ್ಟ್ ಆ್ಯಂಡ್‌ ಚೈಲ್ಡ್‌ ಆ್ಯಸೆಸ್‌ಮೆಂಟ್‌
ಕ್ಲಿನಿಕಲ್‌ ಸೈಕಾಲಜಿ ಆ್ಯಂಡ್‌ ಪ್ರಾಕ್ಟೀಸ್‌
ಇಂಟರ್‌ವೆನ್ಶನ್‌ ಟೆಕ್ನಿಕ್ಸ್‌
ಪರ್ಸನಾಲಿಟಿ ಥಿಯರೀಸ್‌
ಸೈಕಾಲಜಿ ಮೋರಲ್ಸ್‌ ಆ್ಯಂಡ್‌ ಎಥಿಕ್ಸ್‌
ಸೈಕೋಥೆರಪಿ.

ಗ್ರಾಜುಯೇಟ್‌ ಸೈಕಾಲಜಿ ಕೋರ್ಸ್‌
ಬಿಹೇವಿಯರಲ್‌ ರಿಸರ್ಚ್‌
ಕ್ಲಿನಿಕಲ್‌ ಥೆರಪಿ
ಹ್ಯೂಮನ್‌ ಡೆವಲಪ್‌ಮೆಂಟ್‌
ಗ್ರೂಪ್‌ ಕಮ್ಯುನಿಕೇಶನ್‌
ಸೈಕಾಲಜಿಕಲ್‌ ಆ್ಯಸೆಸ್‌ಮೆಂಟ್‌ ಆ್ಯಂಡ್‌ ಎಕ್ಸ್‌ಪೆರಿಮೆಂಟ್ಸ್‌
ಸೈಕೋಫಾರ್ಮಾಕಾಲಜಿ.

1-4 ವರ್ಷಗಳ ಅವಧಿಯ ಈ ಪೋಸ್ಟ್‌ ಡಾಕ್ಟರಲ್‌ ಕೋರ್ಸ್‌ ಕ್ಲಿನಿಕಲ್‌ ಪ್ರಾಕ್ಟೀಸ್‌ ಮಾಡಬಯಸುವ ಅಥವಾ ತಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣತಿಯನ್ನು ವಿಸ್ತರಿಸಲು ಬಯಸುವ ಸೈಕಾಲಜಿ ವೃತ್ತಿಪರರಿಗೆ ಉತ್ತಮ ಅವಕಾಶ ಒದಗಿಸುತ್ತದೆ. ತಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಕ್ಲಿನಿಕಲ್‌ ಸುಪರ್‌ವಿಶನ್‌ ಇಲ್ಲಿ ದೊರೆಯುತ್ತದೆ. ಇದಕ್ಕೆ ಸೈಕಾಲಜಿಯಲ್ಲಿ ಡಾಕ್ಟರಲ್‌ ಡಿಗ್ರಿ ಅಗತ್ಯ. ರೆಫ‌ರೆನ್ಸ್‌ ಲೆಟರ್‌ ಮತ್ತು ಟ್ರಾನ್ಸ್‌ಕ್ರಿಪ್ಟ್$Õ ಒದಗಿಸಬೇಕು.

-  ಎಸ್‌. ಕೆ.

Advertisement

Udayavani is now on Telegram. Click here to join our channel and stay updated with the latest news.

Next