Advertisement

ಸೈಕಲಾಜಿಕಲ್‌ ಥ್ರಿಲ್ಲರ್‌: ಸ್ಟ್ರೈಕರ್‌ ಆಟ ಶುರು

12:30 AM Feb 22, 2019 | Team Udayavani |

ಇತ್ತೀಚೆಗಷ್ಟೇ ಟ್ರೇಲರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿರುವ “ಸ್ಟ್ರೈಕರ್‌’ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ “ಸ್ಟ್ರೈಕರ್‌’ ಚಿತ್ರತಂಡ, ಚಿತ್ರದ ವಿಶೇಷತೆಗಳು, ಬಿಡುಗಡೆಯ ತಯಾರಿ ಮತ್ತಿತರ ವಿಷಯಗಳ ಬಗ್ಗೆ ಮಾತನಾಡಿತು. 

Advertisement

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ಪವನ್‌ ತ್ರಿವಿಕ್ರಮ್‌, “ಇದೊಂದು ಸೈಕಲಾಜಿಕಲ್‌ ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರ. ಕನಸನ್ನೇ ನಿಜ ಎಂದುಕೊಳ್ಳುವ ನಾಯಕ, ಅವನ ಜೀವನದಲ್ಲಿ ಬರುವ ಹಲವು ತಿರುವುಗಳು, ಜೊತೆಗೊಂದು ಲವ್‌ಸ್ಟೋರಿ, ಅದರ ನಡುವೆಯೇ ನಡೆಯುವ ಕ್ರೈಮ್‌ ಘಟನೆ. ಇವೆಲ್ಲವೂ “ಸ್ಟ್ರೈಕರ್‌’ ಚಿತ್ರದಲ್ಲಿದೆ. ಈ ಹಿಂದೆ ನಾನು ಕಂಡಿರುವ, ಕೇಳಿರುವ ಕೆಲವು ನೈಜಘಟನೆಗಳನ್ನು ಇಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಿದ್ದೇನೆ’ ಎಂದು ಚಿತ್ರದ ಕಥೆಯ ಎಳೆಯನ್ನು ಬಿಚ್ಚಿಟ್ಟರು. 

ನಟ ಪ್ರವೀಣ್‌ ತೇಜ್‌ ಚಿತ್ರ ಬದುಕಿನಲ್ಲಿ “ಸ್ಟ್ರೈಕರ್‌’ ವಿಭಿನ್ನ ಚಿತ್ರವಂತೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಪ್ರವೀಣ್‌ ತೇಜ್‌, “ಇಲ್ಲಿಯವರೆಗೆ ನಾನು ಮಾಡಿರುವ ಚಿತ್ರಗಳಲ್ಲಿ ಕಾಲೇಜ್‌ ಹುಡುಗ, ಲವರ್‌ ಬಾಯ್‌ ಪಾತ್ರಗಳೇ ಹೆಚ್ಚಾಗಿದ್ದವು. ಆದ್ರೆ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹುಡುಗನ ಪಾತ್ರ ಮಾಡಿದ್ದೇನೆ. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿರುವ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಎಲ್ಲವೂ “ಸ್ಟ್ರೈಕರ್‌ನಲ್ಲಿ’ದೆ. ಈ ಚಿತ್ರದಲ್ಲಿ ದೊಡ್ಡ ಗೆಲುವನ್ನು ನಿರೀಕ್ಷಿಸುತ್ತಿದ್ದೇನೆ’ ಎಂದರು. 

“ಸ್ಟ್ರೈಕರ್‌’ ಚಿತ್ರದಲ್ಲಿ ನಾಯಕ ಪ್ರವೀಣ್‌ ತೇಜ್‌ಗೆ ನಾಯಕಿಯಾಗಿ ಶಿಲ್ಪಾ ಮಂಜುನಾಥ್‌ ಜೋಡಿಯಾಗಿದ್ದಾರೆ. ಉಳಿದಂತೆ, ಸೌರವ್‌ ಲೋಕಿ (ಭಜರಂಗಿ ಲೋಕಿ), ಧರ್ಮಣ್ಣ ಕಡೂರ್‌, ಅಶೋಕ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಭರತ್‌ ಬಿ.ಜೆ. ಸಂಗೀತ ನೀಡಿ¨ªಾರೆ. “ಗರುಡಾದ್ರಿ ಆರ್ಟ್ಸ್’ ಬ್ಯಾನರ್‌ ಅಡಿಯಲ್ಲಿ ಉದ್ಯಮಿ ಶಂಕರಪ್ಪ, ಸುರೇಶ್‌ ಬಾಬು ಹಾಗೂ ರಮೇಶ್‌ ಬಾಬು ಜಂಟಿಯಾಗಿ ಈ ಚಿತ್ರವನ್ನು  ನಿರ್ಮಿಸಿ¨ªಾರೆ. ಚಿತ್ರದ ವಿತರಣೆಯ ಹೊಣೆಯನ್ನು “ಜಯಣ್ಣ ಫಿಲಂಸ್‌’ ವಹಿಸಿಕೊಂಡಿದ್ದು “ಸ್ಟ್ರೈಕರ್‌’ ಚಿತ್ರ ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next