Advertisement
ಕೊವಿಡ್ 19 ಲಸಿಕೆ ತೆಗದುಕೊಳ್ಳುವುದನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್ ಗಳು ವಿಶೇಷ ಗ್ರಾಹಗಕ ಸ್ನೇಹಿ ಯೋಜನೆಯನ್ನು ಘೋಷಿಸಿವೆ.
Related Articles
Advertisement
ಜೂನ್ 21 ರಿಂದ ಎಲ್ಲ ರಾಜ್ಯಗಳಲ್ಲೂ ವಯಸ್ಕರಿಗೆ ಕೇಂದ್ರ ಸರ್ಕಾರದಿಂದ ಕೊವಿಡ್- 19 ಲಸಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದು, ಈ ಸಂದರ್ಭದಲ್ಲಿ ಕೆಲವು ಬ್ಯಾಂಕ್ ಗಳು ಈ ಯೋಜನೆಯನ್ನು ಹೊರಡಿಸಿವೆ.
ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನಾದರೂ ಪಡೆದಿದ್ದಲ್ಲಿ, ಅಂಥವರು 999 ದಿನಗಳ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದಲ್ಲಿ ಕೋಲ್ಕತ್ತಾ ಮೂಲದ ಯುಕೋ ಬ್ಯಾಂಕ್ನಿಂದ 30 ಬೇಸಿಸ್ ಪಾಯಿಂಟ್ಸ್ (ಬಿಪಿಎಸ್) ಹೆಚ್ಚು ಬಡ್ಡಿಯನ್ನು ಆಫರ್ ಮಾಡಲಾಗುತ್ತಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾಮೂಲಿಗಿಂತ 25 ಬೇಸಿಸ್ ಪಾಯಿಂಟ್, ಹಿರಿಯ ನಾಗರಿಕರಿಗೆ ಶೇಕಡಾ 0.50ರಷ್ಟು ಹೆಚ್ಚುವರಿಯಾಗಿ ಬಡ್ಡಿ ನೀಡಲಾಗುತ್ತದೆ. ಈ ಯೋಜನೆಗೆ “ಇಮ್ಯುನ್ ಇಂಡಿಯಾ ಡೆಪಾಸಿಟ್ ಸ್ಕೀಮ್” ಎಂದು ಹೆಸರಿಸಲಾಗಿದೆ. ಮೆಚ್ಯೂರಿಟಿ ಅವಧಿ 1,111 ದಿನದ್ದಾಗಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ : ಗೋವಾ : ವಿಸಾ ಮುಕ್ತಾಯಗೊಂಡಿದ್ರೂ ರಾಜ್ಯದಲ್ಲೇ ಉಳಿದ ವಿದೇಶಿಗರಿಗೆ ಆರ್ಥಿಕ ಸಂಕಷ್ಟ