ಮೈಸೂರು : ಪಿಎಸ್ಐ ಹಗರಣದಲ್ಲಿ ನನ್ನ ಹೆಸರನ್ನು ಕೆಲವು ಕಾಂಗ್ರೆಸ್ ಮುಖಂಡರು ತೇಲಿ ಬಿಟ್ಟಿದ್ದಾರೆ.ಈಗ ಅವರದ್ದೇ ಸರ್ಕಾರ ಇದೆ, ಯಾವುದೇ ವಿಚಾರವಾಗಿ ಬೇಕಾದರೂ ತನಿಖೆ ಮಾಡಲಿ.ಆದರೆ ಪಾರದರ್ಶಕವಾಗಿ ತನಿಖೆ ಮಾಡಬೇಕು.ವಿರೋಧ ಪಕ್ಷವನ್ನು ಬಗ್ಗು ಪಡಿಯಬೇಕೆಂದು ಸೇಡಿನ ಮನೋಭಾವನೆಯಿಂದ ತನಿಖೆ ಮಾಡುವುದು ಸರಿಯಲ್ಲ.ಪಾರದರ್ಶಕವಾಗಿ ತನಿಖೆ ಮಾಡಿದರೆ ಸ್ವಾಗತ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕುರಿತು ಜನರು ಸಾಕಷ್ಟು ನೀರಿಕ್ಷೆಯಲ್ಲಿದ್ದಾರೆ. ಸಿಎಂ ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.ಯೋಜನೆಗಳಿಗೆ ಸಾಕಷ್ಟು ಷರತ್ತು ವಿಧಿಸುತ್ತಿದ್ದಾರೆ.ಯೋಜನೆಗಳಿಗೆ ಎಷ್ಟು ಹಣಬೇಕಾಗುತ್ತದೆ.ಅದಕ್ಕೆ ಹಣವನ್ನು ಹೇಗೆ ಹೊಂದಿಣಿಕೊಳ್ಳುತ್ತಾರೆ, ಹೊಸ ತೆರಿಗೆ ಹಾಕುತ್ತಾರಾ? ಅಥವಾ ಸಾಲವನ್ನು ಮಾಡುತ್ತಾರಾ ಇದೆಲ್ಲವನ್ನೂ ಸಹ ಬಿಜೆಪಿ ಗಮನಿಸುತ್ತಿದೆ.ಕಾಂಗ್ರೆಸ್ ಕೊಟ್ಟ ಭರವಸೆ ಯಾಥಾವತ್ ಆಗಿ ಜನರಿಗೆ ತಲುಪ ಬೇಕು, ಇದಕ್ಕೆ ಯಾವುದೇ ಕಂಡಿಷನ್ ಹಾಕಬಾರದು.ಈಗಾಗಲೇ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ.ಗ್ಯಾರಂಟಿ ಜಾರಿ ಮಾಡಲು ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ.ಗ್ಯಾರೆಂಟಿ ಕಾರ್ಡ್ ಒಂದು ಕಡೆ, ಮತ್ತೊಂದು ಕಡೆ ವಿದ್ಯುತ್ ಗ್ರಾಹಕರಿಗೆ ಪೆಟ್ಟು ಕೊಡುತ್ತಿದ್ದಾರೆ.ಬಿಜೆಪಿ ಕಾದು ನೋಡುತ್ತಿದೆ, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣಾಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತೇವೆ ಎಂದರು.
ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಸಚಿವರ ಹೇಳಿಕೆಯನ್ನು ನೋಡಿದರೆ ದೇಶದ ಸಂಸ್ಕೃತಿ ಅರಿವು, ಕಾಳಜಿ ಇಲ್ಲದ ವ್ಯಕ್ತಿ ಅನಿಸುತ್ತಿದೆ. ಈ ರೀತಿಯ ಉಡಾಫೆ ಹೇಳಿಕೆಯನ್ನು ರಾಜ್ಯದ ಜನರು ನೀರಿಕ್ಷೆ ಮಾಡರಲಿಲ್ಲ.ಅನೇಕ ಸಚಿವರು ಗೆದ್ದಿರುವ ವಿಶ್ವಾಸದಲ್ಲಿ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ.ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುವ ರೀತಿ ನಡೆದುಕೊಳ್ಳುತ್ತಿದ್ದಾರೆ.ನಮ್ಮ ಹಿಂದೂ ಸಂಸ್ಕೃತಿ ಪರಂಪರೆ ಗೊತ್ತಿದ್ದರೆ ಈ ರೀತಿ ಹೇಳಿಕೆ ಕೊಡುತ್ತಿರಲಿಲ್ಲ.ನಾಳೆಯಿಂದ ಬಿಜೆಪಿಯವರು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ.ಜನ ಸಾಮಾನ್ಯರು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದರು.