Advertisement

PSI ಹಗರಣ: ಕುಮಾರಸ್ವಾಮಿ, ಅಶ್ವತ್ಥನಾರಾಯಣ ಪರ ವಕೀಲರು ಹಾಜರು

10:50 PM Dec 27, 2023 | Pranav MS |

ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಮಾಹಿತಿ ಅಥವಾ ಸಾಕ್ಷ್ಯಗಳಿದ್ದರೆ ಸಲ್ಲಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಡಿಸಿಎಂ ಡಾ| ಅಶ್ವತ್ಥನಾರಾಯಣ ಅವರ ಪರ ವಕೀಲರು ನ್ಯಾ| ಬಿ. ವೀರಪ್ಪ ನೇತೃತ್ವದ ವಿಚಾರಣ ಆಯೋಗದ ಮುಂದೆ ಬುಧವಾರ ಹಾಜರಾಗಿ ವಕಾಲತ್ತು ಹಾಕಿದರು.

Advertisement

ತಮ್ಮ ಕಕ್ಷಿದಾರರಿಗೆ ನೀಡಲಾಗಿರುವ ಸಮನ್ಸ್‌ಗೆ ಉತ್ತರಿಸಲು ಕಾಲವಕಾಶ ಬೇಕು ಎಂದು ಕೋರಿದರು. ಅದಕ್ಕೊಪ್ಪಿ, ನಿಮ್ಮ ಬಳಿ ಸಾಕ್ಷಿ-ದಾಖಲೆ ಗಳೇನಾದರೂ ಇದ್ದರೆ ಅದನ್ನು ಮುಂದಿನ ವಿಚಾರಣೆಯಲ್ಲಿ ಆಯೋ ಗಕ್ಕೆ ಸಲ್ಲಿಸಬಹುದು ಎಂದು ಸೂಚಿಸಿದ ನ್ಯಾ| ಬಿ. ವೀರಪ್ಪ ವಿಚಾರಣೆಯನ್ನು ಜ. 3ಕ್ಕೆ ಮುಂದೂಡಿದರು.

ಯಾರನ್ನೂ ವಿಚಾರಿಸಬಹುದು: ಪರಮೇಶ್ವರ್‌
ಪಿಎಸ್‌ಐ ನೇಮಕಾತಿ ಅಕ್ರಮದ ತನಿಖೆ ಹೊಣೆಯನ್ನು ನ್ಯಾ| ಬಿ. ವೀರಪ್ಪ ನೇತೃತ್ವದ ವಿಚಾರಣ ಆಯೋಗಕ್ಕೆ ಒಪ್ಪಿಸಲಾಗಿದೆ. ಅವರು ಯಾರನ್ನು ಬೇಕಾದರೂ ಕರೆಸಿ ವಿಚಾರಣೆ ಮಾಡಬಹುದು. ಅವರು ಎಲ್ಲ ಆಯಾಮ ಗಳಿಂದಲೂ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುತ್ತಾರೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಅವರಿಗೆ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ. ಕೆಸೆಟ್‌ ಪರೀಕ್ಷೆ ಮೂಲ ಪರೀಕ್ಷಾ ಕೇಂದ್ರಗಳ ಬದಲಿಗೆ ಸುಪ್ರೀಂಕೋರ್ಟ್‌ ಆದೇಶದ ಮೇರೆಗೆ 54 ಸಾವಿರ ಅಭ್ಯರ್ಥಿಗಳು ಇರುವುದರಿಂದ ಪಾರದರ್ಶಕವಾಗಿರಲು ಬೆಂಗಳೂರಿನಲ್ಲಿಯೇ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ, ವಿಜಯಪುರ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next