ಕಲಬುರಗಿ: ಪಿಎಸ್ಐ ಪರೀಕ್ಷೆಯ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ಪ್ರಮುಖ ಆರೋಪಿ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಸೋಮವಾರ ಪೊಲೀಸರಿಗೆ ಶರಣಾಗಿದ್ದು, ಶಾಲೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ಬಹುತೇಕರು ಈಗ ಬಂಧನವಾದಂತಾಗಿದೆ.
ಕಳೆದ 22 ದಿನಗಳಿಂದ ತಲೆಮರೆಸಿಕೊಂಡಿದ್ದ ಕಾಶಿನಾಥ್, ಸೋಮವಾರ ಬೆಳಿಗ್ಗೆ 8.30 ರ ಸುಮಾರಿಗೆ ಸಿಐಡಿ ತಂಡದ ಎದುರಿಗೆ ಶರಣಾಗಿದ್ದಾರೆ.
ಒಎಂಆರ್ ಶೀಟ್ ತಿದ್ದುಪಡಿ ಹಾಗೂ ಬ್ಲೂಟೂತ್ ಬಳಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಬಿಟ್ ಕಾಯಿನ್ ತನಿಖೆ ಚುರುಕುಗೊಂಡರೆ ಬಿಜೆಪಿಯಿಂದ 3ನೇ ಸಿಎಂ ಸಿಗಲಿದ್ದಾರೆ: ಪ್ರಿಯಾಂಕ ಖರ್ಗೆ
ಜ್ಞಾನಜ್ಯೋತಿ ಶಾಲೆಯ ಮುಖ್ಯಸ್ಥೆ ಹಾಗೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಕ್ರಮದಲ್ಲಿ ಶಾಲೆಯ ಮುಖ್ಯ ಗುರು ಕಾಶಿನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಐಡಿ ತಂಡದ ಎದುರು ಹೇಳಿದ್ದರಿಂದ ಕಾಶಿನಾಥ್ ಶರಣಾಗತಿ ಅತ್ಯಂತ ಮಹತ್ವ ಪಾತ್ರ ವಹಿಸಿದೆ. ಇದರಿಂದ ಬಂಧಿತರ ಸಂಖ್ಯೆ 26ಕ್ಕೆ ಏರಿದಂತಾಗಿದೆ.