Advertisement

ಪಿಎಸ್‌ಐ ನೇಮಕಾತಿ ಹಗರಣ: ಡಿವೈಎಸ್ಪಿ ಶಾಂತಕುಮಾರ್‌ ಸಿಐಡಿ ಕಸ್ಟಡಿಗೆ 

11:57 PM Jun 25, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌ ಸೇರಿ ಮೂವರನ್ನು ಸಿಐಡಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಜೂನ್‌ 29ರ ವರೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ನ್ಯಾಯಾಂಗ ಬಂಧನದಲ್ಲಿದ್ದ ಡಿವೈಎಸ್ಪಿ ಶಾಂತಕುಮಾರ್‌, ಸಹಾಯಕರಾದ ಶ್ರೀಧರ್‌, ಶ್ರೀನಿವಾಸ್‌ ಎಂಬವರನ್ನು ಯಲಹಂಕ ನ್ಯೂಟೌನ್‌ ಪ್ರಕರಣದಲ್ಲಿ ಬಾಡಿ ವಾರೆಂಟ್‌ ಪಡೆದು ಕಸ್ಟಡಿಗೆ ಪಡೆಯಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 5ನೇ ರ್‍ಯಾಂಕ್‌ ಪಡೆದಿದ್ದ ದರ್ಶನ್‌ ಗೌಡ, ಲಕ್ಷಾಂತರ ರೂ. ಕೊಟ್ಟು ಒಎಂಆರ್‌ ಪ್ರತಿ ತಿದ್ದಿಸಿದ್ದ ಸಂಗತಿ ತನಿಖೆಯಿಂದ ತಿಳಿದು ಬಂದಿತ್ತು. ಈತನ ವಿರುದ್ಧ ಯಲಹಂಕ ನ್ಯೂಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಶಾಂತಕುಮಾರ್‌ ಪಾತ್ರದ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಹೀಗಾಗಿ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಈ ಮೂವರನ್ನೂ ಒಟ್ಟಿಗೆ ಕುಳ್ಳಿರಿಸಿ ಮುಖಾಮುಖೀ ವಿಚಾರಣೆ ನಡೆಸಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಮತ್ತೂಂದೆಡೆ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್‌ ಪೌಲ್‌ ಅವರನ್ನು ಗುರುವಾರ ವಿಚಾರಣೆ ನಡೆಸಿ  ಕಳುಹಿಸಲಾಗಿದೆ. ಅಗತ್ಯ ವಿದ್ದರೆ ಮತ್ತೂಮ್ಮೆ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದು ಸಿಐಡಿ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next