Advertisement

ಪಿಎಸ್‌ಐ ನೇಮಕಾತಿ ಪ್ರಕರಣ: ಪಿಎಸ್‌ಐ ಹರೀಶ್‌ ಬಂಧನ

11:31 PM Jun 15, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ವಿಶೇಷ ತನಿಖಾ ತಂಡ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯ ಸಬ್‌ಇನ್‌ ಸ್ಪೆಕ್ಟರ್‌ ಕೆ. ಹರೀಶ್‌ನನ್ನು ಬುಧವಾರ ಬಂಧಿಸಿದ್ದು, 10 ದಿನಗಳ ಪೊಲೀಸ್‌ ವಶಕ್ಕೆ ಪಡೆದುಕೊಂಡಿದೆ. ಈ ಬೆನ್ನಲ್ಲೇ ಪಿಎಸ್‌ಐ ಹರೀಶ್‌ನನ್ನು ಡಿಸಿಪಿ ಸಂಜೀವ್‌ ಎಂ. ಪಾಟೀಲ್‌ ಅಮಾನತು ಮಾಡಿದ್ದಾರೆ.

Advertisement

2018ನೇ ಬ್ಯಾಚ್‌ನ ಪಿಎಸ್‌ಐ ಆಗಿರುವ ಹರೀಶ್‌, ಇತ್ತೀಚೆಗೆ ಬಿಡುಗಡೆಯಾದ ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 12ನೇ ರ್‍ಯಾಂಕ್‌ ಪಡೆದಿರುವ ಆರ್‌. ಮಧು ಮತ್ತು 13ನೇ ರ್‍ಯಾಂಕ್‌ ಪಡೆದಿರುವ ಎನ್‌. ದಿಲೀಪ್‌ ಕುಮಾರ್‌ ಬಳಿ ಒಟ್ಟು 85 ಲಕ್ಷ ರೂ. ಪಡೆದು ಪಿಎಸ್‌ಐ ಹುದ್ದೆ ಕೊಡಿಸಿದ್ದ.

ಪಿಎಸ್‌ಐ ಹರೀಶ್‌ಗೆ ಮೂರು ಬಾರಿ ಸಿಐಡಿ ನೋಟಿಸ್‌ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಹರೀಶ್‌ ಹೈಕೋರ್ಟ್‌ ಮೊರೆ ಹೋಗಿ, ತಾವು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ಆದರೂ ನೋಟಿಸ್‌ ನೀಡಿದ್ದಾರೆ. ಅದನ್ನು ರದ್ದು ಮಾಡಿ ಅಥವಾ ತಡೆಯಾಜ್ಞೆ ನೀಡುವಂತೆ ಕೋರಿದ್ದರು.

ವಿಚಾರಣೆ ನಡೆಸಿದ ಹೈ ಕೋರ್ಟ್‌ ತನಿಖಾಧಿಕಾರಿಗಳಿಗೆ ಕಾನೂನು ಪ್ರಕಾರ ಕೈಗೊಳ್ಳುವಂತೆ ಸೂಚಿಸಿತ್ತು. ಮತ್ತೂಂದೆಡೆ ಹರೀಶ್‌ ಸುಮಾರು 25 ದಿನಗಳಿಂದ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ತಲೆಮರೆಸಿಕೊಂಡಿದ್ದರು. ಇದೀಗ ಸಿಐಡಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.

ಜಾಮೀನು ತಿರಸ್ಕೃತ
ಕಲಬುರಗಿ
: ಪ್ರಕರಣಕ್ಕೆ ಸಂಬಂಧಿಸಿ ಅಭ್ಯರ್ಥಿ ಶಾಂತಿ ಬಾಯಿ, ಆಕೆಯ ಪತಿ ಬಸ್ಯ ನಾಯಕ ಜಾಮೀನು ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿದೆ.

Advertisement

ಇನ್ನಷ್ಟು ಪೊಲೀಸ್‌ ಅಧಿಕಾರಿಗಳ ಬಂಧನ?
ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ವರು ಪಿಎಸ್‌ಐ ಮತ್ತು ಇಬ್ಬರು ಇನ್‌ಸ್ಪೆಕ್ಟರ್‌ಗಳು ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿಯಿದೆ. ಅಕ್ರಮ ಎಸಗಿದ ಅಭ್ಯರ್ಥಿಗಳ ವಿಚಾರಣೆಯಲ್ಲಿ ಗೊತ್ತಾದ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಆಧರಿಸಿ ಇನ್ನುಳಿದ ಆರೋಪಿತ ಪೊಲೀಸರನ್ನು ಬಂಧಿಸಲಾಗುವುದು ಎಂದು ಸಿಐಡಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next