Advertisement
ಈ ಕುರಿತು ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಗೃಹ ಇಲಾಖೆಯಲ್ಲಿ ಪಿಎಸ್‌ಐ ಹುದ್ದೆಯಿಂದ ಕಾನ್‌ಸ್ಟೆಬಲ್ ಹುದ್ದೆವರೆಗೆ ಸುಮಾರು 20 ಸಾವಿರ ಹುದ್ದೆಗಳು ಖಾಲಿ ಇವೆ. 545 ಪಿಎಸ್‌ಐ ಹುದ್ದೆ ನೇಮಕಾತಿ ಹಗರಣ ಸಂಬಂಧ ಇರುವ ಪ್ರಕರಣಗಳು ಇತ್ಯರ್ಥ ಆಗಬೇಕಿದೆ. ಇದರ ನಡುವೆ ಇನ್ನೂ 400ಕ್ಕೂ ಹೆಚ್ಚು ಪಿಎಸ್‌ಐಗಳ ನೇಮಕಾತಿಗೆ ಇಲಾಖೆಯಿಂದ ಪ್ರಸ್ತಾವನೆ ಬಂದಿದೆ. ಒಟ್ಟಾರೆ 1 ಸಾವಿರ ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದರು.
Related Articles
Advertisement
ಶಾಸಕರು ಸಚಿವರ ಕ್ಷಮೆ ಕೇಳಿಲ್ಲಸಚಿವರ ವಿರುದ್ಧ ಸಹಿ ಸಂಗ್ರಹಿಸಿ ಪತ್ರ ಬರೆದಿದ್ದ ಶಾಸಕರು ಪಕ್ಷದ ಸಿಎಲ್‌ಪಿ ಸಭೆಯಲ್ಲಿ ಕ್ಷಮೆ ಕೇಳಿದ್ದಾಗಿ ಹೇಳಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಯಾರೂ ಕ್ಷಮೆ ಕೇಳಿಲ್ಲ. ಕ್ಷಮೆ ಯಾಚಿಸಲು ಯಾರೂ ಹೇಳಲಿಲ್ಲ ಎಂದಿದ್ದಾರೆ. ಗೃಹಸಚಿವರ ಹೇಳಿಕೆಗೆ ಶಾಸಕ ಬಿ.ಆರ್. ಪಾಟೀಲ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಸಚಿವ ಪರಮೇಶ್ವರ್, ಸಿಎಲ್‌ಪಿ ಸಭೆಗೆ ಒತ್ತಾಯಿಸುವುದು ತಮ್ಮ ಉದ್ದೇಶ ಎಂದು ಅವರು ಹೇಳಿದ್ದರು. ಇದು ಪ್ರತಿಯೊಬ್ಬ ಶಾಸಕರ ಹಕ್ಕು. ಈ ನಿಟ್ಟಿನಲ್ಲಿ ಹೆಚ್ಚಿನ ವ್ಯಾಖ್ಯಾನ ಅಗತ್ಯವಿಲ್ಲ ಎಂದಷ್ಟೇ ಹೇಳಿದರು. ಮುಂದೆಯೂ ರಹಸ್ಯ ಸಭೆಗಳನ್ನು ನಡೆಸುತ್ತೇವೆ
ನಾನು ಹಾಗೂ ಮುಖ್ಯಮಂತ್ರಿಗಳು ವರ್ಗಾವಣೆ ಸೇರಿದಂತೆ ಆಡಳಿತಾತ್ಮಕ ವಿಚಾರಗಳನ್ನು ಪ್ರತ್ಯೇಕ ಮಾತನಾಡಿರುವುದು ನಿಜ. ಇಂತಹ ವಿಚಾರಗಳು ಗೌಪ್ಯವಾಗಿಯೇ ಇರಬೇಕು. ಹಾದಿ-ಬೀದಿಯಲ್ಲಿ ಚರ್ಚಿಸಲು ಸಾಧ್ಯವೇ ಎಂದು ಪರಮೇಶ್ವರ್ ಹೇಳಿದರಲ್ಲದೆ, ಇನ್ನು ಮುಂದೆಯೂ ರಹಸ್ಯವಾಗಿಯೇ ಇಂತಹ ವಿಚಾರಗಳನ್ನು ಮಾತನಾಡುತ್ತೇವೆ ಎಂದರು. ನಾಡಹಬ್ಬ ಮೈಸೂರು ದಸರಾ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಭೆಗೆ ತಮ್ಮನ್ನು ಆಹ್ವಾನಿಸದೇ ಇರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದರು. ನೈತಿಕ ಪೊಲೀಸ್‌ಗಿರಿ ನಿಯಂತ್ರಣಕ್ಕೆ ಕ್ರಮ ವಹಿಸಿದ್ದೇವೆ. ಯಾವುದೇ ಧರ್ಮದವರಿದ್ದರೂ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಅಗಿಯೇ ಆಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸುದ್ದಿಗಳಿಗೆ ಕಡಿವಾಣ ಹಾಕಲೂ ಕ್ರಮ ವಹಿಸಲಾಗುತ್ತಿದೆ. ಗೃಹ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಜಂಟಿಯಾಗಿ ಪ್ರತ್ಯೇಕ ಕಾನೂನು ರೂಪಿಸಲೂ ಉದ್ದೇಶಿಸಿದೆ.
ಡಾ.ಜಿ. ಪರಮೇಶ್ವರ್, ಗೃಹ ಸಚಿವ