Advertisement
ಇದೇ ವೇಳೆ ಹಲವು ಆರೋಪಿತರ ಮನೆಗಳಲ್ಲಿ ಮತ್ತು ಬ್ಯಾಂಕ್ ಲಾಕರ್‌ಗಳನ್ನು ಶೋಧ ಮಾಡಿದಾಗ ಚಿನ್ನ ಮತ್ತು ಜಮೀನು ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ, ಅಕ್ರಮ ಹಣದಿಂದ ಖರೀದಿ ಮಾಡಿರುವ ಐಷಾರಾಮಿ ವಸ್ತುಗಳು ಕೂಡ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಯ ಮಧ್ಯೆ ಕಿಂಗ್‌ಪಿನ್ ಆರ್.ಡಿ. ಪಾಟೀಲ ಮತ್ತು ದಿವ್ಯಾ ಹಾಗರಗಿ ಪರೀಕ್ಷೆಯಲ್ಲಿ ಪಾಸ್ ಮಾಡಲು ಅಭ್ಯರ್ಥಿಗಳೊಂದಿಗೆ ಡೀಲ್ ಮಾಡಿದ ಕುರಿತು ಸಿಐಡಿ ಅಧಿಕಾರಿಗಳಿಗೆ ಸಾಕ್ಷ್ಯ ಲಭ್ಯವಾಗಿದೆ. ಒಟ್ಟು 9 ಅಭ್ಯರ್ಥಿಗಳ ಮಾಹಿತಿ ಈಗ ಸಿಐಡಿ ಬಳಿ ಇದೆ. ಈ ಮಧ್ಯೆ ಪಿಎಸ್‌ಐ ಪರೀಕ್ಷೆ ಬರೆದು ಹಣ ನೀಡಿ ಪಾಸಾಗಿರುವ ಕೆಲವು ಅಭ್ಯರ್ಥಿಗಳು ಊರು ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.