Advertisement
ಎರಡನೇ ಬಾರಿ ನೊಟೀಸ್ ಜಾರಿ ಮಾಡಿರುವುದನ್ನು ಕಲಬುರಗಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಐಡಿ ಅಧಿಕಾರಿಗಳು ಗುರುವಾರ ನನಗೆ ಮತ್ತೆ ಎರಡನೇ ಬಾರಿ ನೊಟೀಸ್ ನೀಡಿದ್ದಾರೆ. ಬೆಂಗಳೂರಿನ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಬಂದು ನೋಟಿಸ್ ನೀಡಿದ್ದಾರೆ ಎಂದರು.
Related Articles
Advertisement
ಇದನ್ನೂ ಓದಿ:ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ : ಸಚಿವ ಮುರುಗೇಶ್ ನಿರಾಣಿ
ತನಿಖೆಗೆ ಹಾಜರಾಗಲು ನನಗೆ ಯಾವುದೇ ಭಯವಿಲ್ಲ. ಪ್ರಿಯಾಂಕ್ ತನಿಖೆಗೆ ಹಾಜರಾದರೆ ಲಾಕ್ ಆಗ್ತಾರೆಂದುಕೊಂಡರೆ ನಗೆಪಾಟಿಲಾಗಿದೆ. ತಾವು ಲಾಕ್ ಆಗುವುದಿಲ್ಲ. ನಾನು ಯಾವಗಲೂ ಅನ್‌ಲಾಕ್ ಆಗಿಯೇ ಇರುತ್ತೇನೆ. ಪಾರದರ್ಶಕ ತನಿಖೆಗೆ ಆಗ್ರಹಿಸುವುದು ತಪ್ಪಾ? ಮಾಧ್ಯಮಗಳು ಸಹ ಮೂಲಗಳ ಆಧರಿಸಿ ಮೂಲಕ ಸುದ್ದಿ ಬಿತ್ತರಿಸುತ್ತಿವೆ. ಹಾಗಾದ್ರೆ ಪ್ರಕರಣದಲ್ಲಿ ಮಾಧ್ಯಮಗಳನ್ನು ಸಹ ವಿಚಾರಣೆ ನಡೆಸುತ್ತಾರೆಯೇ ಎಂದು ಖರ್ಗೆ ಪ್ರಶ್ನಿಸಿದರು.
ದಿವ್ಯಾ ಹಾಗರಗಿ ಎಲ್ಲಿಯೂ ಹೋಗಿಲ್ಲ. ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೆ ಇದ್ದಾರೆ. ರಕ್ಷಣೆಗಾಗಿ ಹಲವು ಶಾಸಕರು-ಸಚಿವರ ಮೊರೆ ಹೋಗುತ್ತಿದ್ದಾರೆ. ಒಟ್ಟಾರೆ ಪ್ರಕರಣ ಹಾದಿ ತಪ್ಪಿಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆಯ ಇಂಜನೀಯರ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ನೀರಾವರಿ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ನಾಪತ್ತೆಯಾಗಿರುವುದನ್ನು ಸಹ ಅಧಿಕಾರಿಗಳು ಪತ್ತೆ ಮಾಡುತ್ತಿಲ್ಲ. ಲೋಕೋಪಯೋಗಿಯಲ್ಲದೇ ಇತರ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿವೆ. ಬಿಜೆಪಿ ಸರ್ಕಾರಗಳ ಹಗರಣಗಳ ತನಿಖೆ ನಡೆಸಲು ಪ್ರತ್ಯೇಕ ಕೋರ್ಟ್ ತೆರೆಯಬೇಕಾಗಿದೆ ಎಂದು ಖರ್ಗೆ ಹೇಳಿದರು.