Advertisement
ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಾಲ್ಕನೇ ರ್‍ಯಾಂಕ್ ಪಡೆದಿರುವ ವಿ.ದರ್ಶನ್ ಗೌಡ, 13ನೇ ರ್‍ಯಾಂಕ್ ಪಡೆದಿರುವ ದಿಲೀಪ್ ಕುಮಾರ್ ಮತ್ತು ಕಲಾಸಿಪಾಳ್ಯ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹರೀಶ್ ಹಾಗೂ ನೆಲಮಂಗಲ ಠಾಣೆ ಕಾನ್‌ಸ್ಟೇಬಲ್ ಮೋಹನ್ ಕುಮಾರ್‌ನನ್ನು ಬಂಧಿಸಲಾಗಿದೆ.
Related Articles
Advertisement
ಆರೋಪಿಗಳ ಪೈಕಿ ದರ್ಶನ್‌ಗೌಡ, ಹರೀಶ್, ಮೋಹನ್ ಕುಮಾರ್ ಆರ್.ಡಿ.ಪಾಟೀಲ್ ಮೂಲಕ 80 ಲಕ್ಷ ರೂ. ನೀಡಿ ಅಕ್ರಮ ಎಸಗಿದ್ದರೆ, ದಿಲೀಪ್ ಕುಮಾರ್ ಮಂಜುನಾಥ್ ಮೇಳಕುಂದಿ ಮೂಲಕ 60 ಲಕ್ಷ ರೂ. ನೀಡಿ ಅಕ್ರಮ ಎಎಸಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಇನ್ನು ಆರೋಪಿಗಳ ಓಎಂಆರ್ ಶೀಟ್‌ನಲ್ಲಿ ಕೆಲವು ಉತ್ತರಗಳನ್ನು ಮಾತ್ರ ತುಂಬಿ, ಉಳಿದ ಉತ್ತರಗಳನ್ನು ಹಾಗೆಯೇ ಖಾಲಿ ಬಿಟ್ಟಿದ್ದರು. ಅಲ್ಲದೆ, ಓಎಂಆರ್ ಶೀಟ್‌ನಲ್ಲಿ ಪ್ರಯತ್ನಿಸಿದ ಪ್ರಶ್ನೆಗಳು ಎಂಬ ಕಾಲಂನಲ್ಲಿ ಸಂಖ್ಯೆಯನ್ನು ತಿದ್ದುಪಡಿ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಲಕ್ಷಾಂತರ ರೂ. ಹೇಗೆ ಸಂಪಾದನೆ?
ಆರೋಪಿಗಳ ಪೈಕಿ ಹೆಡ್‌ಕಾನ್‌ಸ್ಟೇಬಲ್ ಹರೀಶ್ ಮತ್ತು ಕಾನ್‌ಸ್ಟೇಬಲ್ ಮೋಹನ್ ಕುಮಾರ್ ಅಕ್ರಮ ಎಸಗಲು ಮಧ್ಯವರ್ತಿಗಳಿಗೆ ಲಕ್ಷಾಂತರ ರೂ. ನೀಡಲು ಹಣ ಎಲ್ಲಿಂದ ತಂದಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ಆರೋಪಿಗಳ ಬ್ಯಾಂಕ್ ವ್ಯವಹಾರ ಹಾಗೂ ಅವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗಳಲ್ಲಿನ ಕರ್ತವ್ಯ ಪಾಲನೆ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಐಡಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.