Advertisement
ಟ್ರೇಲರ್ ಮೊದಲ ನೋಟದಲ್ಲೇ ಭರವಸೆ ಮೂಡಿಸುತ್ತಿದ್ದು, ಒಂದಷ್ಟು ಗಂಭೀರ ಅಂಶಗಳನ್ನು ಫನ್ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಜೊತೆಗೊಂದು ಸಂದೇಶವೂ ಇರುವುದು ಟ್ರೇಲರ್‌ನಲ್ಲಿ ಎದ್ದು ಕಾಣುತ್ತದೆ. ಆ ಮೂಲಕ ಹೊಸ ಜಾನರ್‌ನ ಸಿನಿಮಾವಾಗಿ “ಶುಗರ್‌ಲೆಸ್’ ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನ ಪ್ರಯೋಗವಾಗುವ ನಿರೀಕ್ಷೆ ಇದೆ.
Related Articles
Advertisement
ಇದನ್ನೂ ಓದಿ:ಹೊಸ ‘ಹೋಪ್’ ನಲ್ಲಿ ಶ್ವೇತಾ: ಚಿತ್ರಕ್ಕೆ ಸಚಿವ ಡಾ. ಅಶ್ವಥ್ ನಾರಾಯಣ್ ಸಾಥ್
“ಭಾರತದಲ್ಲಿ ಇಲ್ಲಿಯವರೆಗೆ ನೂರಾರು ವಿಷಯಗಳ ಮೇಲೆ ಸಾವಿರಾರು ಸಿನಿಮಾಗಳು ಬಂದಿವೆ. ಆದ್ರೆ ಡಯಾಬಿಟಿಕ್ (ಶುಗರ್) ಕುರಿತು ಯಾವುದೇ ಸಿನಿಮಾಗಳು ಬಂದಿಲ್ಲ. ನಮಗೆ ಗೊತ್ತಿರುವಂತೆ ಇಡೀ ಭಾರತದಲ್ಲೇ ಡಯಾಬಿಟಿಕ್ ಸಬ್ಜೆಕ್ಟ್ ಮೇಲೆ ಬರುತ್ತಿರುವ ಮೊದಲ ಸಿನಿಮಾ ನಮ್ಮದು. ಸಾಮಾನ್ಯವಾಗಿ ಡಯಾಬಿಟಿಕ್ ವಿಷಯ ಅಂದ್ರೆ, ಬಹುತೇಕರು ತುಂಬ ಸೀರಿಯಸ್ ಆಗುತ್ತಾರೆ. ಆದ್ರೆ ನಾವು ಸಿರಿಯಸ್ ವಿಷಯವಾದ್ರೂ ಅದನ್ನು ಹ್ಯೂಮರಸ್ ಆಗಿ, ನೋಡುಗರಿಗೆ ಮುಟ್ಟುವಂತೆ ತೆರೆಮೇಲೆ ತರುತ್ತಿದ್ದೇವೆ. ಇದರಲ್ಲಿ ಲವ್, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ ಜೊತೆಗೊಂದು ಮೆಸೇಜ್, ಹೀಗೆ ಎಂಟರ್‌ಟೈನ್ಮೆಂಟ್‌ಗೆ ಏನೇನು ಎಲಿಮೆಂಟ್ಸ್ ಇರಬೇಕೋ, ಅದೆಲ್ಲವೂ “ಶುಗರ್‌ಲೆಸ್’ನಲ್ಲಿದೆ’ ಎನ್ನುತ್ತಾರೆ ನಿರ್ಮಾಪಕ ಕಂ ನಿರ್ದೇಶಕ ಶಶಿಧರ್ ಕೆ.ಎಂ.
ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ನಾಯಕ-ನಾಯಕಿ. ಇಬ್ಬರೂ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಿರಿಯ ನಟ ದತ್ತಣ್ಣ ಅವರಿಗೆ ಸಿನಿಮಾ ಮೂಡಿಬಂದಿರುವ ರೀತಿ ಖುಷಿ ಕೊಟ್ಟಿದೆಯಂತೆ. ಉಳಿದಂತೆ ಚಿತ್ರದಲ್ಲಿ ನಟಿಸಿರುವ ಪದ್ಮಜಾ ರಾವ್, ರಘು ರಮಣಕೊಪ್ಪ, ವಿತರಕಿ ಮಾಲಿನಿ ಸೇರಿದಂತೆ ಚಿತ್ರತಂಡ ತಮ್ಮ ಅನುಭವ ಹಂಚಿಕೊಂಡಿತು.