Advertisement

ಶಿವಣ್ಣ ಜೊತೆ ತೆರೆ ಹಂಚಿಕೊಳ್ಳಲು ರೆಡಿಯಾದ ಪೃಥ್ವಿ ಅಂಬಾರ್‌

01:01 PM Nov 10, 2020 | Suhan S |

“ದಿಯಾ’ ಚಿತ್ರದ ಮೂಲಕ ಭರವಸೆಯ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ನ‌ಲ್ಲಿ ಗುರುತಿಸಿಕೊಳ್ಳುತ್ತಿರುವ ನಟ ಪೃಥ್ವಿ ಅಂಬಾರ್‌ ಸದ್ಯ ನಿಧಾನವಾಗಿ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಝಿಯಾಗುತ್ತಿದ್ದಾರೆ.

Advertisement

ಸದ್ಯ ಪೃಥ್ವಿ “ಶುಗರ್‌ ಲೆಸ್‌’, “ಲೈಫ್ ಇಸ್‌ ಬ್ಯುಟಿಫ‌ುಲ್‌’, “ಫಾರ್‌ ರಿಜಿಸ್ಟ್ರೇಷನ್‌’ ಎನ್ನುವ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರ ನಡುವೆಯೇ ಮತ್ತೂಂದು ಹೊಸ ಚಿತ್ರವನ್ನು ಸದ್ದಿಲ್ಲದೆ ಒಪ್ಪಿಕೊಂಡಿದ್ದಾರೆ. ಹೌದು, ಸದ್ಯ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ನಾಯಕನಾಗಿರುವ ಇನ್ನೂ ಹೆಸರಿಡದ ಹೊಸ ಚಿತ್ರವೊಂದರಲ್ಲಿ ಪೃಥ್ವಿ ಅಂಬಾರ್‌ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ನ.19ಕ್ಕೆ ಈ ಚಿತ್ರದ ಮುಹೂರ್ತ ನಡೆಯಲಿದ್ದು, ವಿಜಯ್‌ ಮಿಲ್ಟನ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. “ಕೃಷ್ಣ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿಕೃಷ್ಣ ಸಾರ್ಥಕ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಳಿದಂತೆ ಡಾಲಿ ಧನಂಜಯ್‌ಕೂಡ ಈ ಚಿತ್ರದ ಮತ್ತೂಂದು ಪಾತ್ರದಲ್ಲಿಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಟೈಟಲ್‌, ಇತರೆ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next