ಕೋವಿಡ್ ಎರಡನೇ ಲಾಕ್‌ಡೌನ್‌ನಿಂದಾಗಿಬಹುತೇಕ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಮತ್ತಿತರ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಇನ್ನು ಅನೇಕ ತಾರೆಯರು ಸದ್ಯಕ್ಕೆ ತಮ್ಮ ಮನೆ, ಫಾರ್ಮ್ ಹೌಸ್‌ಗಳಲ್ಲಿ ಲಾಕ್ ಆಗಿದ್ದರೆ, ಇನ್ನು ಕೆಲವು ತಾರೆಯರು ತಮ್ಮಹುಟ್ಟೂರಿನ ಕಡೆ ಮುಖ ಮಾಡಿದ್ದಾರೆ.
“ದಿಯಾ’ಖ್ಯಾತಿಯ ನಟ ಪೃಥ್ವಿ ಅಂಬಾರ್ ಕೂಡ ಕೋವಿಡ್ ಲಾಕ್‌ಡೌನ್‌ನಿಂದಾಗಿ ತಮ್ಮ ಹುಟ್ಟೂರು ಸೇರಿಕೊಂಡಿದ್ದಾರೆ.ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ, ಕೇರಳದ ಕಾಸರಗೋಡು ಸಮೀಪದ ತಮ್ಮ ಊರು ಅಂಬಾರ್‌ಗೆ ತೆರಳಿರುವ ಪೃಥ್ವಿ, ಅಲ್ಲಿಯೇ ಸಿನಿಮಾ ಕಥೆ ಬರೆಯುವ ಕೆಲಸದಲ್ಲಿ ನಿರತರಾಗಿದ್ದಾರಂತೆ. ಮೊದಲಿನಿಂದಲೂ ನಿರ್ದೇಶನದ ಕಡೆಗೆ ಒಲವಿರುವ ಪೃಥ್ವಿ, ಈ ಬಿಡುವಿನ ವೇಳೆಯಲ್ಲಿ ಒಂದಷ್ಟು ಕಥೆಗಳನ್ನು ಬರೆಯುವುದಕ್ಕೆಪ್ಲಾನ್ ಮಾಡಿಕೊಂಡಿದ್ದಾರೆ. ಅದರಲ್ಲೂ ಥ್ರಿಲ್ಲಿಂಗ್ ಸಬ್ಜೆಕ್ಟ್ ಗಳ ಕಡೆಗೆ ಆಸಕ್ತಿ ಇರುವ ಪೃಥ್ವಿ, ತಮ್ಮ ಆಸಕ್ತಿಗೆತಕ್ಕಂತೆ ಇರುವ ಸೈಕಾಲಜಿಕಲ್ ಥ್ರಿಲ್ಲರ್ ಕಥೆಯೊಂದನ್ನು ಸಿದ್ದಪಡಿಸುತ್ತಿದ್ದಾರೆ.
ಈ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿರುವ ಪೃಥ್ವಿ ಅಂಬಾರ್, “ಲಾಕ್‌ಡೌನ್ ಇರುವುದರಿಂದ ಊರಿನಲ್ಲೇ ಇದ್ದು ಮನೆ, ಕೃಷಿ, ಬರವಣಿಗೆ ಹೀಗೆ ಒಂದಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಎರಡು – ಮೂರು ವರ್ಷದ ಹಿಂದೆ ನಾನು ಬರೆದ ಕಥೆಯೊಂದು ಈಗ ಸಿನಿಮಾ ವಾಗಲು ರೆಡಿಯಾಗಿತ್ತು. ಕರಾವಳಿ ಕಡೆಯ ಲವ್‌ಸ್ಟೋರಿ ಇರುವ ಈ ಸಿನಿಮಾವನ್ನು ದರ್ಶನ್ ಅಪೂರ್ವ ಎನ್ನುವವರು ನಿರ್ದೇಶಿಸುತ್ತಿದ್ದಾರೆ.
ಇನ್ನೇನು ಈ ಸಿನಿಮಾದ ಶೂಟಿಂಗ್ ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ, ಸದ್ಯದ ಇದರ ಶೂಟಿಂಗ್ ಮುಂದೂಡಲಾಗಿದೆ. ಈಗ ಲಾಕ್‌ಡೌನ್‌ನಲ್ಲಿ ಮತ್ತೂಂದು ಸೈಕಾಲಜಿಕಲ್ ಥ್ರಿಲ್ಲರ್ ಕಥೆಯೊಂದನ್ನು ಬರೆಯುತ್ತಿದ್ದೇನೆ ಎನ್ನುತ್ತಾರೆ.
ಸದ್ಯ “ಲೈಫ್ ಈಸ್ ಬ್ಯೂಟಿಫುಲ್,ಶಿವರಾಜಕುಮಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಶಿವಪ್ಪ’, “ಫಾರ್ ರಿಜಿಸ್ಟ್ರೇಶನ್’ಸೇರಿದಂತೆ ಇನ್ನೂ ಒಂದೆರಡು ಚಿತ್ರಗಳಲ್ಲಿ ಪೃಥ್ವಿಅಂಬಾರ್ ಅಭಿನಯಿಸುತ್ತಿದ್ದಾರೆ. ತಮ್ಮ ಕೈಯಲ್ಲಿರುವ ಚಿತ್ರಗಳು ಮುಗಿಯುತ್ತಿದ್ದಂತೆ, ಪೃಥ್ವಿ ಅಂಬಾರ್ ತಾವು ಬರೆದಿರುವ ಈ ಕಥೆಯನ್ನು ಸಿನಿಮಾ ಮಾಡುತ್ತಾರಾ ಎಂಬ ಕುತೂಹಲ ಅನೇಕರಲ್ಲಿದ್ದು, ಈಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎನ್ನುತ್ತಾರೆ ಪೃಥ್ವಿ.
ಜಿ.ಎ ಸ್. ಕಾರ್ತಿಕ ಸುಧನ್