Advertisement

‘ಫಾರ್ Regn’ ಹೆಸರಿನಲ್ಲಿ ತೆರೆಮೇಲೆ ಬರಲಿದ್ದಾರೆ ಮಿಲನಾ- ಪೃಥ್ವಿ

09:18 PM Dec 12, 2020 | Adarsha |

ಬೆಂಗಳೂರು: ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್ ಮತ್ತು ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕಾಂಬಿನೇಷನ್ ನಲ್ಲಿ ‘ಫಾರ್ Regn’  ಎಂಬ ಶೀರ್ಷಿಕೆಯಲ್ಲಿ  ಹೊಸ ಸಿನಿಮಾ ಒಂದು ಹೊರಬರಲಿದೆ ಎಂಬ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿಗೆ ಹೊಸ ಜೀವ ಬಂದಿದೆ.

Advertisement

ಚಿತ್ರತಂಡ ಡಿಸೆಂಬರ್ 11 ರಂದು  ‘ಫಾರ್ Regn’  ಚಿತ್ರಕ್ಕೆ ಮಹೂರ್ತ ಫಿಕ್ಸ್ ಮಾಡಿದೆ. ಹೊಸ ಸಿನಿಮಾದ ಪೂಜೆ ಸಮಯದಲ್ಲಿ ನಟಿ ಮಿಲನಾ ನಾಗರಾಜ್, ಪೃಥ್ವಿ ಅಂಬರ್ ಹಾಗೂ ಹಿರಿಯ ನಟಿ ಸುಧಾರಾಣಿಯನ್ನು ಒಳಗೊಂಡಂತೆ ಚಿತ್ರತಂಡದ ಹಲವರು ಭಾಗಿಯಾಗಿದ್ದರು.

ಈಗಷ್ಟೆ ‘ಫಾರ್ Regn’   ಸಿನಿಮಾ ತಯಾರಿಗೆ ಚಾಲನೆ ದೊರೆತಿದೆ. ಈ ನಡುವೆ ನಟಿ ಮಿಲನಾ ನಾಗರಾಜ್ ತಮ್ಮ ಲವ್ ಮಾಕ್ಟೇಲ್ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೂ ನಟ ಪೃಥ್ವಿ ಅಂಬರ್ ಕೂಡಾ ದಿಯಾ ಸಿನಿಮಾದ ಯಶಸ್ಸಿನ ಬಳಿಕ ಹಲವಾರು ಸಿನಿಮಾಗಳಿಗೆ ಡೇಟ್ ನೀಡಿದ್ದಾರೆ. ಈ ನಡುವೆ ಈ ಹೊಸ ಸಿನಿಮಾವೂ ಸದ್ಯದಲ್ಲೇ ತೆರೆಮೇಲೆ ಬರಲು ತಯಾರಿ ನಡೆಸುತ್ತಿದೆ.

ಇದನ್ನೂ ಓದಿ:ಗ್ರಾಪಂ ಸದಸ್ಯ ಸ್ಥಾನ 5 ರಿಂದ 25 ಲಕ್ಷಕ್ಕೆ ಹರಾಜು

ವಿಭಿನ್ನವಾದ ಶೀರ್ಷಿಕೆಯ ಮೂಲಕ ಸಿನಿರಸಿಕರ ಮನಗೆಲ್ಲಲು ಹೊರಟಿರುವ ಚಿತ್ರತಂಡ , ನಟಿ ಮಿಲನಾ ನಾಗರಾಜ್ ಅವರಿಗೂ ಈ ಸಿನಿಮಾ ಒಪ್ಪಿಕೊಳ್ಳಲು ಪ್ರಮುಖ ಕಾರಣ ಈ ವಿಭಿನ್ನ ಶೀರ್ಷಿಕೆ ಎಂದು ಹೇಳಿದೆ. ಅಲ್ಲದೆ  ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಆಗಲಿದೆಯಂತೆ.

Advertisement

ಶ್ಯಾಡೋ, ಹರಿವಿನ ಹಾದಿ ,ಎಲ್ಲೋ ಬೋರ್ಡ್ ಮುಂತಾದ  ಅದ್ಭುತ ಕಿರುಚಿತ್ರಗಳನ್ನು ನಿರ್ದೇಶಿಸಿರುವ ನವೀನ್ ಈ ಚಿತ್ರಕ್ಕೆ  ಆ್ಯಕ್ಷನ್ ಕಟ್ ಹೇಳಲಿದ್ದು, ಸಿನಿರಸಿಕರ ಮನಗೆಲ್ಲಲು ಹೊರಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next